ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ (ಜೂನ್ 08) ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಏರಿಕೆ ಮಾಡಿದ ಪರಿಣಾಮ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 214.85 ಅಂಕ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಉಗ್ರನಿಗೆ ಆಶ್ರಯ ನೀಡಿದವರಾರು? ಬೆಂಬಲಕ್ಕೆ ಯಾರಿದ್ದಾರೆ? ಈ ಕುರಿತು ಗೃಹ ಸಚಿವರು ಹೇಳಿದ್ದೇನು
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 214.85 ಅಂಕಗಳಷ್ಟು ಕುಸಿತಗೊಂಡಿದ್ದು, 54,892.49 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 55,423.97 ಅಂಕಗಳ ಗಡಿ ತಲುಪಿ, ನಂತರ 54,683.30 ಅಂಕಗಳಿಗೆ ಕುಸಿದಿತ್ತು.
ಎನ್ ಎಸ್ ಇ ನಿಫ್ಟಿ ಕೂಡಾ 60.10 ಅಂಕಗಳಷ್ಟು ಇಳಿಕೆಯೊಂದಿಗೆ 16,356.25 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ. ಭಾರ್ತಿ ಏರ್ ಟೆಲ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಏಷಿಯನ್ ಪೇಂಟ್ಸ್, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಟಾಟಾ ಸ್ಟೀಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಡಾ.ರೆಡ್ಡೀಸ್, ಬಜಾಜ್ ಫೈನಾನ್ಸ್, ಟಿಸಿಎಸ್ ಮತ್ತು ಟೈಟಾನ್ ಷೇರುಗಳು ಲಾಭ ಗಳಿಸಿದೆ. ಇನ್ನುಳಿದಂತೆ ಶಾಂಘೈ, ಟೋಕಿಯೋ ಮತ್ತು ಹಾಂಗ್ ಕಾಂಗ್ ಷೇರುಮಾರುಕಟ್ಟೆ ಸೆನ್ಸೆಕ್ಸ್ ಭರ್ಜರಿ ಜಿಗಿತದೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ.