ನವದೆಹಲಿ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಶುಕ್ರವಾರ (ಜುಲೈ 09) 183 ಅಂಕಗಳಷ್ಟು ಇಳಿಕೆಯಾಗುವ ಮೂಲಕ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಅನುಭವಿಸಿದೆ.
ಇದನ್ನೂ ಓದಿ:ವರ್ಷದ ಹಿಂದೆ ಬಾಲ ಮಂದಿರದಿಂದ ಬಾಲಕಿ ನಾಪತ್ತೆ:ಬೆನ್ನುಬಿದ್ದ ಪೊಲೀಸರು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 182.75 ಅಂಕ ಇಳಿಕೆಯೊಂದಿಗೆ 52,386.19 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 38.10 ಅಂಕಗಳಷ್ಟು ಇಳಿಕೆಯಾಗಿ 15,689.80ರ ಗಡಿಗೆ ಇಳಿದಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಬಜಾಜ್ ಆಟೋ, ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿದೆ. ಮತ್ತೊಂದೆಡೆ ಟಾಟಾ ಸ್ಟೀಲ್, ಬಜಾಜ್ ಫಿನ್ ಸರ್ವ್, ಭಾರ್ತಿ ಏರ್ ಟೆಲ್ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿದೆ.
ಹೂಡಿಕೆದಾರರು ಹೆಚ್ಚಿನ ಮೊತ್ತದ ಲಾಭವನ್ನು ಕಾಯ್ದಿರಿಸಿದ ಪರಿಣಾಮ ದೇಶೀಯ ಷೇರುಮಾರುಕಟ್ಟೆ ವಹಿವಾಟು ಇಳಿಕೆ ಕಂಡಿರುವುದಾಗಿ ರಿಲಯನ್ಸ್ ಸೆಕ್ಯುರಿಟೀಸ್ ಸ್ಟ್ರೆಟಜಿ ಹೆಡ್ ಬಿನೋದ್ ಮೋದಿ ತಿಳಿಸಿದ್ದಾರೆ.