ಮುಂಬಯಿ:ಜಾಗತಿಕ ಷೇರುಮಾರುಕಟ್ಟೆಯ ದುರ್ಬಲ ವಹಿವಾಟಿನ ಪರಿಣಾಮ ಬುಧವಾರ (ಜುಲೈ28) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 135 ಅಂಕಗಳಷ್ಟು ಕುಸಿತ ಕಂಡಿದೆ. ಇದರಿಂದ ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಅನುಭವಿಸಿದೆ.
ಇದನ್ನೂ ಓದಿ:ಗಾಂಧಿ ಮಗ ಕುಡುಕನಾದ.. SR ಬೊಮ್ಮಾಯಿ ಗುಣ ಮಗನಿಗೆ ಬರುತ್ತೆ ಎಂದು ಹೇಳಲಾಗದು : ಸಿದ್ದರಾಮಯ್ಯ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 135.05 ಅಂಕ ಇಳಿಕೆಯಾಗಿದ್ದು, 52,443.71 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 37.05 ಅಂಕಗಳಷ್ಟು ಕುಸಿತ ಕಂಡಿದ್ದು, 15,709.40ರ ಗಡಿ ತಲುಪಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಕೋಟಕ್ ಬ್ಯಾಂಕ್ ಷೇರು ಶೇ.2ರಷ್ಟು ನಷ್ಟ ಕಂಡಿದೆ. ಡಾ.ರೆಡ್ಡೀಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಪವರ್ ಗ್ರಿಡ್, ಎನ್ ಟಿಪಿಸಿ, ನೆಸ್ಲೆ ಇಂಡಿಯಾ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರು ನಷ್ಟ ಅನುಭವಿಸಿದೆ.
ಭಾರ್ತಿ ಏರ್ ಟೆಲ್, ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫಿನ್ ಸರ್ವ್ ಷೇರುಗಳು ಲಾಭಗಳಿಸಿದೆ. ಚೀನಾದ ಟೆಕ್ ಷೇರುಗಳ ಮಾರಾಟದ ಭರಾಟೆಯ ಪರಿಣಾಮ ದೇಶಿಯ ಈಕ್ವಿಟಿ ವಹಿವಾಟಿನಲ್ಲಿ ನಷ್ಟ ಕಂಡಿರುವುದು ಬಿಎಸ್ ಇ ಸೆನ್ಸೆಕ್ಸ್ ಇಳಿಕೆಗೆ ಕಾರಣವಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟಿ ಹೆಡ್ ಬಿನೋದ್ ಮೋದಿ ವಿಶ್ಲೇಷಿಸಿದ್ದಾರೆ.