Advertisement

ಇಂಗ್ಲೆಂಡಿನಲ್ಲಿ ಬಿದ್ದ ಶರಾವತಿ ಕನಸು

10:46 AM Jul 07, 2019 | Vishnu Das |

ಎಲ್ಲೋ ದೂರದಿಂದ, ಜೋಗ ನೋಡಲು ಬರುತ್ತಿದ್ದವರು, “ನಿಮ್ಮೂರ ಜೋಗ ವನ್ನೇ ನಾವು ಹೊತ್ತೊಯ್ಯುತ್ತೇವೆ’ ಎಂದು ಹೆದ ರಿಸಿದಂತೆ ಯಾಕೋ ಭಾಸ ವಾಗುತಿದೆ. ನಮ ಗೊಂದು ಹೆಸರು, ಗುರುತು, ಜೀವನ, ನೆನಪು, ಕನಸು… ಏನೆಲ್ಲಾ ಆಗಿರುವ ಈ ಜೀವ ನ ದಿಯ ಬಗ್ಗೆ ಆತಂಕ ಕವಿಯುತಿದೆ…- ಶರಾವತಿ ನದಿ ನೀರಿನ ಸುತ್ತ ಮುತ್ತ ಎದ್ದ ವಿವಾದಕ್ಕೆ ಲೇಖಕಿ ಇಲ್ಲಿ ಭಾವುಕರಾಗಿ ಅನಿಸಿಕೆ ಹಂಚಿ ಕೊಂಡಿದ್ದಾರೆ…

Advertisement

ಜಲಪಾತಗಳ ಜಿಲ್ಲೆ ಉತ್ತರ ಕನ್ನಡದಲ್ಲಿ ಹುಟ್ಟಿ ಬೆಳೆದವರಿಗೆ ಕಾಡು, ಹೊಳೆ, ಜಲಪಾತಗಳ ನಡುವೆಯೇ ಬಾಳಿ ಬದುಕುವ ಅವ ಕಾ ಶ ವನ್ನು ಪ್ರಕೃತಿ ಒದಗಿಸಿಕೊಟ್ಟಿದೆ. ಅಂಗಳ ದಾಟಿದರೆ, ತೋಟ. ತೋಟದ ಅಂಚು ಬೆಟ್ಟ ಗಳ ನಡುವೆ ಹೊಳೆ. ಅಂಥ ಚಿಕ್ಕ ಪುಟ್ಟ ಹೊಳೆಗಳು ಕತ್ರಗಾಲದ ಹೊಳೆ, ಕಲ್ಲಾಳದ ಹೊಳೆ, ರಾಮನದಿ, ಸೋಮನದಿ- ಎಂಬೆಲ್ಲ ಹೆಸ ರಿನ ಹೊಳೆ ಗಳು ಹೋಗಿ ಸೇರುವುದು ಬಿಳಗಿ ಹೊಳೆ, ಮಳಲ ಹೊಳೆ, ಮಾನಿ ಹೊಳೆ… ಎಂದೆಲ್ಲ ಕರೆಸಿಕೊಳ್ಳುವ ಕೊಂಚ ದೊಡ್ಡ ಹೊಳೆಗಳಿಗೆ. ಮುಂದೆ ಅವೆಲ್ಲ ಹರಿದು ಸೇರುವುದು, ಅಘನಾಶಿನಿ ಎಂಬ ಉತ್ತರ ಕನ್ನಡದ ಜೀವ ನದಿಗೆ.

ಇತ್ತ ಕಡೆ ಶಿವ ಮೊಗ್ಗ ಜಿಲ್ಲೆ ಯಲ್ಲಿ ಹುಟ್ಟಿ, ಉತ್ತರ ಕನ್ನ ಡ ಜಿಲ್ಲೆ ಯಲ್ಲಿ ಧುಮುಕಿ, ಹೊನ್ನಾವರದಲ್ಲಿ ಕಡಲು ಸೇರುವ ಶರಾವತಿ ನದಿ. ಅದರ ರಮ್ಯತೆಯೇ ಅವರ್ಣನೀಯ. ಅತ್ತ ಶಿರಸಿಯಲ್ಲಿ ಹುಟ್ಟಿ, ಉತ್ತರ ಕನ್ನಡ ಜಿಲ್ಲೆಯ ಬಹುಪಾಲು ತೋಟ- ಬೆಟ್ಟಗಳ ನಡುವೆ ಹರಿದು ಉಂಚಳ್ಳಿ ಎಂಬಲ್ಲಿ ಕಾಡ ನಡುವೆ ನಯನ ಮನೋ ಹರ ಜಲಪಾತವನ್ನು ನೀಡಿ ರುವ ಅಘನಾಶಿನಿ, ಕುಮಟಾದ ಬಳಿ ಕಡಲನ್ನು ಸೇರುತ್ತದೆ.

ಈ ಎರಡೂ ನದಿ ಗಳ ನಡು ವಿನ ಸಹ್ಯಾದ್ರಿ ಘಟ್ಟದ ಕಾಡಿನ ಪಟ್ಟಿ ಯಲ್ಲಿ ಇರುವ ಸಸ್ಯ ಸಮೃದ್ಧಿ, ಜೀವ ವೈವಿಧ್ಯ, ಜಲ ಮೂಲ, ಪ್ರಾಣಿ- ಪಕ್ಷಿ ಸಂಕುಲ, ಅಡಕೆ, ತೆಂಗು, ಕಾಳು, ಮೆಣಸು, ಏಲಕ್ಕಿಗಳ ಪರಿ ಮಳ ಹೀರುತ್ತಾ ಬೆಳೆದ ನನಗೆ, ನನ್ನಂಥವರಿಗೆ ಇಲ್ಲಿ ಅರಳಿದ “ಅಡಕೆ ಸಂಸ್ಕೃತಿ’ಯ ಕುರಿತು ಅಪಾರ ಪ್ರೀತಿ ಹೆಮ್ಮೆ. ಆರ್ಥಿಕವಾಗಿ ಇಲ್ಲಿಯ ಜನ ವಾಣಿಜ್ಯ ಶಾಸ್ತ್ರ ದಿಂದ ದೂರ. ಆದರೆ, ಸಾಂಸ್ಕೃತಿಕವಾಗಿ ಬೇರೆಡೆ ದೊರೆ ಯದ ಸಮೃದ್ಧಿ, ಅತಿಥಿ ಸತ್ಕಾರವನ್ನು ಜೀವನ ಧರ್ಮವಾ°ಗಿಸಿ ಕೊಂಡ ಸರಳ ಕೃಷಿ ಕರ ಬದುಕನ್ನು ರೂಪಿಸಿದ ತಾಯಿಯರು ಈ ನದಿ ಗಳು.

ನನ್ನ ಬಾಲ್ಯ ದಲ್ಲಿ ನಮ್ಮ ತಂದೆ ಹೇಳು ತ್ತಿದ್ದ ಪ್ರವಾಸ ಕಥ ನ ನೆನೆ ದಾ ಗ, ಈಗಲೂ ನನಗೇನೋ ಒಂದು ಪುಳಕ. ಸಿದ್ದಾ ಪು ರ ಭಾಗದ ಜನ ಆಗ ಕೋರ್ಟು ಕಚೇರಿ ಕೆಲ ಸಕ್ಕೆ ಹೊನ್ನಾವರಕ್ಕೆ ಹೋಗಬೇಕಿ ತ್ತಂತೆ. ಬೆಳಗ್ಗೆ ಊಟ ಮಾಡಿ ಹೋಗಿ, ಶರಾ ವತಿ ನದಿ ಯಲ್ಲಿ ಹೊನ್ನಾ ವ ರದ ತನಕ ದೋಣಿ ಪಯಣ. ದೋಣಿ ಹೊರ ಡು ವುದು ಬೆಳ ಗಿನ ಜಾವ. ರಾತ್ರಿಯಿಡೀ, ಖಾಲಿ ದೋಣಿ ಯಲ್ಲಿ ಮಲ ಗು ವುದು. ಆಗ ಅಂಬಿ ಗ ನದು ಇವ ರಿಗೆ ಭಾರಿ ಉಪ ಚಾರ. “ಖಾಲಿ ಅದೆ… ಅರಾಂ ಮಲಗಿ ಹೆಗಡೇರೇ’ ಎಂದು ಜಾಗ ನೀಡಿ, ಪ್ರಯಾಣಿಕರು ಬಂದ ಹಾಗೆ “ಹೆಗಡೇರು’ ಹೋಗಿ, “ಹೆಗ ಡೆ’, ಕೊನೆಗೆ “ಏಳಾ…ಮಲಕ್ಕಂಡವನೆ. ಒಳ್ಳೆ ಬಾಜಿರಾಯನ ಹಾಗೆ’ ಎನ್ನುತ್ತಿದ್ದ ರಂತೆ. ಬೆಳಗ್ಗೆ 10 ಗಂಟೆಗೆ ಹೊನ್ನಾವರದ ಗುಂಡಮ್ಮನ ಖಾನಾವಳಿಯಲ್ಲಿ ಸ್ನಾನ- ತಿಂಡಿ, ಕೋರ್ಟು- ಕೆಲಸ. ಆ ಗುಂಡಮ್ಮನೆಂಬ ಮಹಾತಾಯಿ ಹಣ ತೆಗೆದುಕೊಂಡರೂ ತೋರುತ್ತಿದ್ದ ಆದರಾತಿಥ್ಯ, ಮಾನವೀಯ ಪ್ರೀತಿ ಆ ಬಳಿಕ ಕಂಡೇ ಇಲ್ಲ ಎನ್ನುತ್ತಿದ್ದರು.

Advertisement

ಜೋಗದ ಭೋರ್ಗರೆತದ ಜೋಗುಳ ಕೇಳುತ್ತ ಬೆಳೆದ ನನಗೆ ವಿಶ್ವದ ಯಾವ ಮೂಲೆಗೆ ಹೋಗಿ, ಏನೇ ಅದ್ಭುತಗಳನ್ನು ನೋಡಿದರೂ, ನೆನ ಪಾಗುವುದು ನಮ್ಮೂರ ಶರಾವತಿಯೇ. ನಯಾಗರ ಜಲಪಾತ ನೋಡಿ ಬಂದು ನಾನು ನೆನಪಿಸಿ ಕೊಂಡಿದ್ದು, ನಮ್ಮೂರ ತಡ ಸ ಲನೇ. ನಮ್ಮ ಬಾಲ್ಯದಲ್ಲಿ ಮಳೆಗಾಲದಲ್ಲಿ ಬಸ್ಸಿಲ್ಲದ ಹಳ್ಳಿಗರು, “ಹೊಳೆ ಮೇಲೆ ಬಂದಿದೆ. ದಾಟುವ ಹಾಗಿಲ್ಲ, ರಾತ್ರಿ ನಿಮ್ಮಲ್ಲೇ…’ ಎಂದು ವಾಸ್ತವ್ಯ ಹೂಡುತ್ತಿದ್ದರು. ಅಡಕೆ ಕೊನೆಗೆ ಕೊಟ್ಟೆ ಹಾಳೆ ಕಟ್ಟಲು ಬಂದು ಳಿ ಯುವ ಘಟ್ಟದ ಕೆಳ ಗಿನ ಮಂಜ, ನಮ್ಮ ತಂದೆ ಮತ್ತು ಹೊಳೆಯಾಚೆಯ ಹಳ್ಳಿಯವರದ್ದು ಪಟ್ಟಾಂಗ, ಮಳೆಯ ಸಂಗೀತ, ಕಪ್ಪೆಗಳ “ವಟ ರ್‌’… ನಿಜಕ್ಕೂ ಅದೊಂದು ನಾದ ಲೋಕ. ಇಂಗ್ಲೆಂಡಿಗೆ ಹೋದಾಗ, ವೈಭವೋ ಪೇತ ಹೋಟೆಲ್ಲಿನಲ್ಲುಳಿದ ನನಗೆ ಕನ ಸಲ್ಲಿ ಬಂದಿದ್ದು, ನಮ್ಮೂರ ಮಳೆಗಾಲದ ಕಾಳು ಮೆಣಸಿನ ಕಷಾಯಗಳು, ಶರಾವತಿಯ ತೀರದ ಚೆಲುವು… ಮತ್ತೆ ನಿದ್ದೆಯೇ ಬಂದಿರಲಿಲ್ಲ.

ಜೋಗ ನೋಡಲು ಬರುವ ಜನರನ್ನು ಕಾಡು ದಾರಿಯಲ್ಲಿ ಕರೆ ದೊ ಯ್ಯುವ ಪಡೆಯೇ ನಮ್ಮಲ್ಲಿತ್ತು. ದಾರಿಯುದ್ದಕ್ಕೂ ನೈಸರ್ಗಿಕ ಚಮ ತ್ಕಾರಗಳು. ಅದರಲ್ಲಿ ಒಂದು “ಕುಂಟುಬಳ್ಳಿ’ ಎಂಬ ದಪ್ಪ ಬೇರನ್ನು ಒಬ್ಟಾತ ಬಗ್ಗಿಸಿ ಕುಡಿಯುತ್ತಿದ್ದ. ಅದರಿಂದ ಕೊಡಗಟ್ಟಲೆ ಸಿಹಿ ನೀರು ಸುರಿ ಯು ತ್ತಿತ್ತು. ಹತ್ತು ಹದಿ ನೈದು ಜನರ ದಾಹ ತಣಿ ಸುವ ವಿಚಿತ್ರ ನೀರಿನ ಸಂಗ್ರಹ! ಪುನಃ ಮಳೆಗಾಲದಲ್ಲಿ ಆ ಬೇರು ಜಿಗಿಯುತ್ತ ದೆ.
ಹೀಗೆ ಎಲ್ಲೋ ದೂರ ದಿಂದ, ಜೋಗ ನೋಡಲು ಬರುತ್ತಿದ್ದವರು, “ನಿಮ್ಮೂರ ಜೋಗ ವನ್ನೇ ನಾವು ಹೊತ್ತೂ ಯ್ಯು ತ್ತೇವೆ’ ಎಂದು ಹೆದ ರಿ ಸಿದಂತೆ ಯಾಕೋ ಭಾಸವಾಗುತಿದೆ. ನಮ ಗೊಂದು ಹೆಸರು, ಗುರುತು, ಜೀವನ, ನೆನಪು, ಕನಸು… ಏನೆಲ್ಲಾ ಆಗಿ ರುವ ಈ ಜೀವ ನ ದಿಯ ಕುತ್ತಿಗೆ ಹಿಚುಕಿ, ಕುತ್ತು ತರು ವರೇನೋ ಎಂಬ ಆತಂಕ ಕವಿ ಯು ತಿದೆ.
ಹಣದ ಬೆನ್ನು ಹತ್ತಿದ ತಲೆಮಾರೊಂದು ಜೀವ ನದಿಗಳ ತಪ್ಪಲನ್ನು ತೊರೆದು, ಕಂಪ್ಯೂಟರ್‌ಗಳ ಬೆನ್ನು ಹತ್ತಿ ನಗರಗಳತ್ತ ಧಾವಿಸಿ, ಹಳ್ಳಿಗ ಳನ್ನು ಬರಿದು ಮಾಡಿ, ಮಹಾ ನಗರಗಳಲ್ಲಿ ಉಸಿರು ಕಟ್ಟುವ ಬದುಕನ್ನು ಆರಿಸಿಕೊಂಡು, ಏದುಬ್ಬಸ ಪಡುತ್ತಿರುವುದು ವರ್ತಮಾನದ ಕಹಿಸತ್ಯ. ನಮ್ಮದಲ್ಲದ ಅಭಾವ ಸಂಸ್ಕೃತಿಯ ಸೆಳೆತ.

ಜಲಪಾತದ ಮೊರೆತ ಮಳೆಯ ನಿನಾದ, ಕಗ್ಗತ್ತಲಿನ ಮಳೆಯ ಹಗ ಲು ಗಳು, ಅಡಕೆ ಕೃಷಿ, ಬಾಳೆ ಗೊನೆ, ಏಲಕ್ಕಿ, ಮೆಣಸುಗಳ ಹಸಿರು, ಬೆತ್ತ ಬಿದಿರು, ಔಷ ಧೀಯ ಸೊಪ್ಪು, ಹೊಳೆಸಾಲಿನ ಅಪ್ಪೆಮಿಡಿ, ಮುರಗಲಣ್ಣು, ಮುಳ್ಳಣ್ಣು, ಬಿಕ್ಕೆ ಹಣ್ಣು, ಜೇನುತುಪ್ಪ, ತೆಳ್ಳೇವು, ಜೋನಿ ಬೆಲ್ಲ… ಬದುಕೇ ಬಂಗಾರ. ಈ ಬಂಗಾರದ ಬದುಕನ್ನು ಕಮರಿಸುವ ಹುನ್ನಾರ. ಪ್ರಕೃ ತಿಯ ತೊಟ್ಟಿಲನ್ನು ಜೀಕುತ್ತಿರುವ ಈ ಇಬ್ಬರು ತಾಯಂದಿರ ಮೇಲೆ “ಯೋಜ ನಾಸುರ’ ದೃಷ್ಟಿ ಬೀರ ಹೊರಟಿದ್ದಾನೆ. ತಾಯಂದಿರನ್ನು ರಕ್ಷಿಸಿಕೊ ಳ್ಳಬೇಕಾದ್ದು ಮಕ್ಕಳ ಕರ್ತವ್ಯ ತಾನೆ?

ಭುವನೇಶ್ವರಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next