Advertisement

ನನಗೆ ಘನತೆ, ಗೌರವ ಸಿಕ್ಕಿದಲ್ಲಿ ಮತದಾನ ಮಾಡಿದ್ದೇನೆ: ಶರತ್ ಬಚ್ಚೇಗೌಡ

01:53 PM Jun 10, 2022 | Team Udayavani |

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸಭೆಯಲ್ಲಿ ಚುನಾವಣೆ ನಡೆಯುತ್ತಿದೆ. ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುತ್ತಿದ್ದಾರೆ. ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕೂಡ ಮತದಾನ ಮಾಡಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರತ್ ಬಚ್ಚೇಗೌಡ, ನಾನು ಗುಪ್ತವಾಗಿ ಮತ ಚಲಾವಣೆ ಮಾಡಿದ್ದೇನೆ. ಪಕ್ಷೇತರ ಅಭ್ಯರ್ಥಿ ಆಗಿರುವುದರಿಂದ ಎಜೆಂಟ್ ಗಳಿಗೆ ತೋರಿಸುವ ಹಾಗಿಲ್ಲ. ಆದ್ದರಿಂದ ಗುಪ್ತ ಮತದಾನ ಮಾಡಿದ್ದೇನೆ ಎಂದರು.

ಇದನ್ನೂ ಓದಿ:ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ಯಾ?: ಅಡ್ಡಮತದಾನಕ್ಕೆ ಕಿಡಿಕಾರಿದ ಕುಮಾರಸ್ವಾಮಿ

ನಾವು ತಲೆತಲಾಂತರದಿಂದ ಘನತೆ, ಗೌರವದಿಂದ ರಾಜಕಾರಣ ಮಾಡಿದ್ದೇವೆ. ಹೊಸಕೋಟೆಯ ಮತದಾರರ ಗೌರವ ಕಾಪಾಡುವ ಹಾಗೆ ಮತದಾನ ಮಾಡಿದ್ದೇನೆ. ನನಗೆ ಎಲ್ಲಿ ಘನತೆ, ಗೌರವ ಸಿಕ್ಕಿದೆಯೋ ಅಲ್ಲಿ ಮತದಾನ ಮಾಡಿದ್ದೇನೆ ಎಂದು ಶರತ್ ಬಚ್ಚೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next