ಕಿರುತೆರೆಯಲ್ಲಿ ನಟಿಸಿ ಹೆಸರು ಮಾಡಿರುವ ಅನೇಕರು ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾ ಬಿಝಿಯಾಗುತ್ತಾರೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ಶರಣ್ಯ. ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಶರಣ್ಯ ಈಗ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಅದು “ನಾತಿಚರಾಮಿ’. ಆ ಚಿತ್ರ ಇಂದು ತೆರೆಕಾಣುತ್ತಿದೆ. ಸಂಚಾರಿ ವಿಜಯ್ ಪತ್ನಿಯ ಪಾತ್ರದಲ್ಲಿ ಶರಣ್ಯ ನಟಿಸಿದ್ದಾರೆ. ಮದುವೆಯಾದ ನಂತರ ನಾಲ್ಕು ಗೋಡೆಗಳ ಮಧ್ಯೆ ಬದುಕಬೇಕಾದ ಮಳೆಯ ಪಾತ್ರ ಅದಾಗಿದೆ. ಗಂಡನ ಬೇಕು ಬೇಡಿಕೆಗಳಿಗೆ ತನ್ನನ್ನು ತಾನು ಮುಡುಪಾಗಿಡುವ ಮತ್ತು ತನ್ನ ಬೇಡಿಕೆಗಳಿಗೆ ಸ್ಪಂದಿಸದ ಗಂಡನ ಬಗೆಗಿನ ಅಸಮಾಧಾನ ಹೊಂದಿರುವ ಮಳೆಯರ ಪ್ರತಿನಿಧಿಯ ಪಾತ್ರದಲ್ಲಿ ಶರಣ್ಯ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಶರಣ್ಯ, “ನಿರ್ದೇಶಕ ಮಂಸೋರೆ ಸಿನಿಮಾ ಕಥೆ ಹೇಳಿದಾಗ ಥ್ರಿಲ್ ಆದೆ. ನನ್ನ ಪಾತ್ರವು ಅದೆಷ್ಟೋ ಮಳೆಯರಿಗೆ ಕನೆಕ್ಟ್ ಆಗುತ್ತದೆ. ಭಾರತೀಯ ಅದೆಷ್ಟೋ ಮಳೆಯರು ಬದುಕುತ್ತಿರುವುದು àಗೆಯೇ. ನಾನು ಅದೆಷ್ಟೋ ಮಳೆಯರನ್ನು ನೋಡಿದ್ದೇನೆ. ಅವರ ಬದುಕು ಹೀಗೆಯೇ ಇರುತ್ತದೆ. ಹಾಗಾಗಿ ಸಲೀಸಾಗಿ ಪಾತ್ರದೊಳಗೆ ಇಳಿವುದಕ್ಕೆ ಸಾಧ್ಯವಾಯಿತು’ ಎನ್ನುವುದು ಶರಣ್ಯ ಮಾತು. ಚಿತ್ರದಲ್ಲಿ ಶರಣ್ಯ ಡಿಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಕಪ್ ಇಲ್ಲದೇ ಸಹಜವಾಗಿಯೇ ಕಾಣಿಸಿಕೊಂಡಿದ್ದಾರೆ. ಶರಣ್ಯ ಅವರ ಪಾತ್ರ ನೊಂದ ಮಹಿಳೆಯರಿಗೆ ಬಹುಬೇಗ ಕನೆಕ್ಟ್ ಆಗುತ್ತದೆ’ ಎನ್ನುವುದು ಶರಣ್ಯ ಮಾತು.
“ಮುಂಬಯಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಚಿತ್ರವನ್ನು ವೀಕ್ಷಿಸಿದವರು ನನ್ನ ಪಾತ್ರದ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ. ಹೊಸ ಹುಡುಗಿಯಾದರೂ, ತುಂಬಾ ಚೆನ್ನಾಗಿ ನಟಿಸಿದ್ದೀರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೆಚ್ಚುಗೆಯ ಮಾತುಗಳು ನನ್ನಲ್ಲಿ ಒಂದಷ್ಟು ಭರವಸೆಯನ್ನು ಮೂಡಿಸಿವೆ’ ಎನ್ನುವುದು ಶರಣ್ಯ ಮಾತು.
ಶರಣ್ಯ ಈಗಾಗಲೇ “ಅಳಗುಳಿ ಮನೆ’, “ಕಾರ್ತೀಕ ದೀಪ’, “ಮಂಗ್ಳೂರು ಹುಡುಗಿ ಹುಬ್ಳಿ ಹುಡುಗ’ ಸೇರಿದಂತೆ ಹಲವು ಧಾರಾವಾಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಗಾಯಕಿಯೂ ಆಗಿರುವ ಇವರು, ನೆನಪಿರಲಿ ಪ್ರೇಮ್ ನಟನೆ “ಮಳೆ’, ಪೂಜಾ ಗಾಂಧಿ ನಟನೆಯ “ನೀ ಇಲ್ಲದ ಮೇಲೆ’, ಶ್ರೀನಗರ ಕಿಟ್ಟಿ ನಟನೆಯ “ಪಂಚಾಮೃತ’ ಸೇರಿದಂತೆ ಹಲವು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿ ಆಗಿದ್ದಾರೆ.