Advertisement

ಶರಣ ಧರ್ಮವೇ ಶ್ರೇಷ್ಠ ಧರ್ಮ: ಗೊರುಚ

11:43 AM Aug 14, 2017 | Team Udayavani |

ಕಲಬುರಗಿ: ಶರಣ ಧರ್ಮವೇ ಶ್ರೇಷ್ಠವಾಗಿದೆ ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಗೌರವ ಮಾರ್ಗದರ್ಶಕ ಹಾಗೂ ಶರಣ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು. ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯಪರಿಷತ್‌ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪಠ್ಯದ ವಿದ್ಯಾಭ್ಯಾಸದೊಂದಿಗೆ ನಡೆದಂತೆ ನುಡಿದು, ನುಡಿದಂತೆ ಬರೆದ ವಚನ ಸಾಹಿತ್ಯ ಓದಿಕೊಂಡು ದೇಶದಲ್ಲಿರುವ ಸಮಸ್ಯೆಗಳಿಗೆ ವಚನಗಳಿಲ್ಲಿರುವ ಪರಿಹಾರ ತಿಳಿದುಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಪ್ರೊ| ನಿಂಗಮ್ಮ ಪಂತಗೆ ಮಾತನಾಡಿ, ವಚನಗಳು ಹಾಗೂ ಭಾರತದ ಸಂವಿಧಾನದ ಆಶಯಗಳು ಎಂಬ ವಿಷಯ ಕುರಿತು ಮಾತನಾಡಿ, ಪ್ರತಿಯೊಬ್ಬ ಶರಣ-ಶರಣೆಯರ ವಚನಗಳಲ್ಲಿ ಸಂವಿಧಾನದ ಆಶಯಗಳು ಒಳಗೊಂಡಿರುವುದು ಕಾಣುತ್ತೇವೆ ಎಂದು ಹೇಳಿ, ಅನೇಕ ಪೂರಕ ವಚನ ವಿಶ್ಲೇಷಣೆಗಳೊಂದಿಗೆ ವಿವರಿಸಿದರು. ಸುವರ್ಣಾ ಪೋದ್ದಾರ ಪ್ರಾರ್ಥನಾಗೀತೆ
ಹಾಡಿದರು. ಉಪನ್ಯಾಸಕ ಡಾ| ನಾಗೇಂದ್ರ ಮಸೂತೆ ಸ್ವಾಗತಿಸಿದರು. ಪ್ರೊ| ಕುಪೇಂದ್ರ ಪಾಟೀಲ ಮಾತನಾಡಿದರು. ವೀಣಾ ಎಚ್‌.
ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ವಿನೋದಕುಮಾರ ಜನೇವರಿ ವಂದಿಸಿದರು. ಧಾರ್ಮಿಕ ಚಿಂತಕ ಶಿವಾನಂದ ಮಠಪತಿ, ತಾಲೂಕು ಕಾರ್ಯದರ್ಶಿ ಶಿವಾನಂದ ಕಶೆಟ್ಟಿ, ಮಹಿಳಾ ಕಾಲೇಜಿನ ಉಪನ್ಯಾಸಕಿ ಶಿವಲೀಲಾ ಧೋತ್ರೆ, ಶರಣಮ್ಮಾ ಕುಪ್ಪೆ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next