Advertisement

Just Pass ಹುಡುಗರಿಗೆ ಶರಣ್‌ ಫ‌ಸ್ಟ್‌ ಕ್ಲಾಸ್‌ ಸಾಂಗ್‌

03:02 PM Feb 02, 2024 | Team Udayavani |

ನಟ ಶರಣ್‌ ಇಲ್ಲಿಯವರೆಗೆ ಹಾಡಿರುವ ಬಹುತೇಕ ಎಲ್ಲಾ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಈಗ ಅದೇ ಸಾಲಿಗೆ “ಜಸ್ಟ್‌ ಪಾಸ್‌’ ಸಿನಿಮಾದ ಮತ್ತೂಂದು ಹಾಡು ಸೇರ್ಪಡೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

Advertisement

ಹೌದು, “ಜಸ್ಟ್‌ಪಾಸ್‌’ ಸಿನಿಮಾದ “ಎಕ್ಸ್‌ಕ್ಯೂಸ್‌ ಮೀ ಕೇಳಿ ನನ್ನ ಲಕ್ಚರು… ಜಸ್ಟ್‌ ಪಾಸು ಆಗೋದಿಲ್ಲ ನಿಮ್ಮ ಪ್ಯೂಚರು…’ ಎಂಬ ಹಾಡಿಗೆ ನಟ ಶರಣ್‌ ಧ್ವನಿಯಾಗಿದ್ದು, ಈ ಹಾಡು ಇದೀಗ ನಿಧಾನವಾಗಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಹರ್ಷವರ್ಧನ್‌ ರಾಜ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌ ಕ್ಯಾಚಿ ಸಾಹಿತ್ಯವನ್ನ ಬರೆದಿದ್ದಾರೆ.

ಈಗಾಗಲೇ ಟ್ರೇಲರ್‌ ಮೂಲಕ ಪ್ರೇಕ್ಷಕರ ಒಂದಷ್ಟು ನಿರೀಕ್ಷೆ ಮೂಡಿಸುವಲ್ಲಿ ಯಶಸ್ವಿಯಾಗಿರುವ “ಜಸ್ಟ್‌ಪಾಸ್‌’ ಚಿತ್ರತಂಡಕ್ಕೆ ಈ ಹಾಡಿನಿಂದ ಮತ್ತಷ್ಟು ಬೂಸ್ಟರ್‌ ಡೋಸ್‌ ನೀಡಿದಂತಾಗಿದೆ. “ರಾಯ್ಸ್ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ಕೆ. ವಿ ಶಶಿಧರ್‌ ನಿರ್ಮಾಣ ಮಾಡುತ್ತಿರುವ “ಜಸ್ಟ್‌ಪಾಸ್‌’ ಸಿನಿಮಾಕ್ಕೆ ಕೆ. ಎಂ ರಘು ನಿರ್ದೇಶನ ಮಾಡಿದ್ದಾರೆ. ಸುಜಯ್‌ ಕುಮಾರ್‌ ಛಾಯಾಗ್ರಹಣ, ಕೆ. ಎಂ ಪ್ರಕಾಶ್‌ ಸಂಕಲನವಿದೆ.

ಸಿನಿಮಾದಲ್ಲಿ ಶ್ರೀ, ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್‌, ಪ್ರಕಾಶ್‌ ತುಮ್ಮಿನಾಡು, ದೀಪಕ್‌ ರೈ, ಗೋವಿಂದೇ ಗೌಡ, ದಾನಪ್ಪ ಹೀಗೆ ಕಲಾವಿದರ ದಂಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next