Advertisement
ದಾನಿಗಳ ನೆರವು: 1990ರಲ್ಲಿ ಶಂಕರ್ ನಾಗ್‌ರ ಅಕಾಲಿಕ ಮರಣದ ನಂತರ, ಸಂಕೇತ್ ಟ್ರಸ್ಟ್ ವತಿಯಿಂದ ಶಂಕರ್ ಸ್ಮರಣಾರ್ಥ ರಂಗಮಂದಿರ ನಿರ್ಮಿಸಲು ಯೋಚಿಸಲಾಯ್ತು. 1994ರಲ್ಲಿ ಸರ್ಕಾರದಿಂದ ಭೂಮಿಯೂ ಸಿಕ್ಕಿತು. ಆದರೆ, ನಿಧಿಯ ಕೊರತೆಯಿಂದಾಗಿ ನಿರ್ಮಾಣ ಕೆಲಸ 2001ರವರೆಗೆ ಶುರುವಾಗಲಿಲ್ಲ. ನಂತರ, ರಂಗಭೂಮಿ ಕಲಾವಿದರು, ರಂಗಪ್ರೇಮಿಗಳು ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಿ, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ರಂಗಶಂಕರ ತಲೆ ಎತ್ತಿ ನಿಂತಿತು.
Related Articles
Advertisement
ಉದ್ಘಾಟನೆ: ಅಕ್ಟೋಬರ್ 28, 2004
ನಿರ್ಮಾಣ ಅವಧಿ: 3 ವರ್ಷ (2001-04)
ವಿನ್ಯಾಸ: ವಾಸ್ತುಶಿಲ್ಪಿ ಶಾರುಖ್ ಮಿಸ್ತ್ರಿ ಅವರ ಯೋಜನೆಯಂತೆ ನಿರ್ಮಾಣವಾದ ಕಟ್ಟಡ.
(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ಅಂಥ ಪಾರಂಪರಿಕ ಕಟ್ಟಡಗಳ ಮಾಹಿತಿ ವಿಶೇಷ ಈ ಪಾಕ್ಷಿಕ ಅಂಕಣದ ಅಂತರಾಳ)
ರಂಗೋತ್ಸವಬಹು ನಿರೀಕ್ಷಿತ ರಂಗ ಶಂಕರ ರಂಗೋತ್ಸವವು ಈ ಬಾರಿ ನ. 5-10ರವರೆಗೆ ನಡೆಯಲಿದೆ. ದೇಶದ ವಿವಿಧ ಭಾಗಗಳ ಉತ್ಸಾಹಿ ರಂಗ ತಂಡಗಳು ಭಾಗವಹಿಸುತ್ತಿವೆ. ನಾಟಕದ ಟಿಕೆಟ್‌ಗಳು ರಂಗ ಶಂಕರ ಬಾಕ್ಸ್‌ಆಫೀಸ್ ಮತ್ತು ಬುಕ್‌ಮೈಶೋನಲ್ಲಿ ಲಭ್ಯ. ಪ್ರದರ್ಶನಗೊಳ್ಳುವ ನಾಟಕಗಳು
ನವೆಂಬರ್ 5
ನಾಟಕ: ನವ
ಭಾಷೆ: ಕನ್ನಡ
ಕಥಾವಸ್ತು: ಒಂಬತ್ತು ಮಂಗಳಮುಖೀಯರ ಕಥೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು ನವೆಂಬರ್ 6
ನಾಟಕ: ರಿಹ್ಲಾ
ಭಾಷೆ: ಹಿಂದೂಸ್ಥಾನಿ
ಕಥಾವಸ್ತು: ನೂತನ ದೇಶಕ್ಕಾಗಿ ಹಾತೊರೆಯುವ ಯುವ ಜನತೆಯ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು ನವೆಂಬರ್ 7
ನಾಟಕ: ಹೆಲೊ ಫರ್ಮಾಯಿಶ್
ಭಾಷೆ: ಹಿಂದಿ
ಕಥಾವಸ್ತು: ಉದ್ಯಮಶೀಲ ಹರಿಯಾಣದ ಮಹಿಳೆಯರು ಅಂತರಿಕ್ಷಕ್ಕೆ ಹೋಗುವ ಕಥೆ.
ವಯೋಮಿತಿ: 10 ವರ್ಷ ಮೇಲ್ಪಟ್ಟವರು ನವೆಂಬರ್ 8
ನಾಟಕ: ಸಂಗೀತ್ ಬಾರಿ
ಭಾಷೆ: ಹಿಂದಿ/ ಮರಾಠಿ
ಕಥಾವಸ್ತು: ಲಾವಣಿ ನೃತ್ಯದ ಮೂಲ ಕಥಾ ಹಂದರವಿದೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು. ನವೆಂಬರ್ 9
ನಾಟಕ: ದಿ ಹಂಗರ್ ಆರ್ಟಿಸ್ಟ್
ಭಾಷೆ: ಮರಾಠಿ, ಇಂಗ್ಲಿಷ್, ಹಿಂದಿ
ಕಥಾಹಂದರ: ಉಪವಾಸದಿಂದ ಬದುಕು ಸಾಗಿಸುವನ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು ನವೆಂಬರ್ 10
ನಾಟಕ: ಈದ್ಗಾ ಕೆ ಜಿನ್ನತ್
ಭಾಷೆ: ಹಿಂದಿ, ಉರ್ದು
ಕಥಾವಸ್ತು: ಇಸ್ಲಾಮಿಕ್ ಕಥಾ ಹಂದರ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು ನಾಟಕದ ಸಮಯ: ನ. 5-9, ಸಂಜೆ 7.30
ಎಲ್ಲಿ?: ರಂಗಶಂಕರ
ಟಿಕೆಟ್ ದರ: 200 ರೂ.