Advertisement

ಕುಂದಾಪುರ: ಗೂಗಲ್‌ ಮ್ಯಾಪ್‌ನಲ್ಲಿ ಸ್ಥಳ ವಂಚಿತ ಶಂಕರನಾರಾಯಣ

10:08 PM Dec 14, 2022 | Team Udayavani |

ಕುಂದಾಪುರ: ಉಡುಪಿ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಗೂಗಲ್‌ ಮ್ಯಾಪ್‌ ಅಜ್ಜರಕಾಡಿನ ಕಾಬೆಟ್ಟು ತೋರಿಸಿ ಭಕ್ತರು ತೊಂದರೆಗೆ ಸಿಲುಕಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಅಂತಹುದೇ ವಿದ್ಯಮಾನವೊಂದು ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ ಶಂಕರನಾರಾಯಣಕ್ಕೆ ಆಗುತ್ತಿದೆ.

Advertisement

ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಪ್ರತೀ ದಿನವೂ ಸಾವಿರಾರು ಭಕ್ತರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪೌರಾಣಿಕ ಕ್ಷೇತ್ರವೂ, ವಿದ್ಯಾಕ್ಷೇತ್ರವೂ, ಪಂಚಾಯತ್‌ ಕೇಂದ್ರವೂ, ಹಲವು ಸರಕಾರಿ ಕಚೇರಿಗಳನ್ನು, ಹೊಂದಿರುವ, ಹೋಬಳಿ ಕೇಂದ್ರವಾಗಲು ಹವಣಿಸುತ್ತಿರುವ ಶಂಕರನಾರಾಯಣವು ಗೂಗಲ್‌ ಮ್ಯಾಪ್‌ ನಲ್ಲಿ ತನ್ನ ಹೆಸರನ್ನು ತಪ್ಪಿಸಿಕೊಂಡಿದೆ. ಪ್ರತೀ ದಿನವೂ ರಾತ್ರಿ ಪ್ರಯಾಣದ ಭಕ್ತರು ಗೂಗಲ್‌ ಮ್ಯಾಪ್‌ ನೋಡಿ ಬೆಳಗಿನ ಜಾವ ತಮ್ಮ ವಾಹನವನ್ನು ಗೂಗಲ್‌ ಮಾರ್ಗ ಸೂಚಿಯಂತೆ ಹೊಸಂಗಡಿ ಗ್ರಾಮದ ಕಾಡೊಳಗಿನ ಹೊಳೆ ಶಂಕರನಾರಾಯಣ ಪ್ರವೇಶಿಸಿ ಅಲ್ಲಿ ಯಾರು ಮಾರ್ಗದರ್ಶಕರಿಲ್ಲದೆ ಚಡಪಡಿಸುವ ಪರಿಸ್ಥಿತಿ ಹಲವು ದಿವಸಗಳಿಂದ ನಡೆಯುತ್ತಿರುವುದು ನೊಂದವರಿಂದ ತಿಳಿದು ಬಂದಿದೆ.

ಇದರಿಂದಾಗಿ ಶಂಕರನಾರಾಯಣದ ಪೌರಾಣಿಕ ಹಿನ್ನೆಲೆ ಯುಳ್ಳ ಶಂಕರನಾರಾಯಣ ದೇವಸ್ಥಾನ, ವೀರ ಕಲ್ಲುಕುಟಿಕ ದೇವಸ್ಥಾನ, ತೀರ್ಥಮುಕ್ತ ಪುರಿ ಸಂಸ್ಥಾನದ ಮಠವಿದ್ದು ಘಟ್ಟದ ಭಾಗದ ಜನರಿಗೆ ಸಮಸ್ಯೆ ತಲೆದೋರುತ್ತಿದೆ. ಗೂಗಲ್‌ನಲ್ಲಿ ಶಂಕರನಾರಾಯಣ ಪಿನ್‌ಕೋಡ್‌ ಹುಡುಕಿದರೆ ಸಹ 576227 ತೋರಿಸದೆ ಹೊಸಂಗಡಿ ಗ್ರಾಮದ ಪಿನ್‌ ಕೋಡ್‌ 576282 ತೋರಿಸುತ್ತಿದೆ. ಅಂಚೆ ಇಲಾಖೆಯವರು ಪಿನ್‌ ಸರಿಪಡಿಸಲು, ಸಂಬಂಧಪಟ್ಟವರು ಗೂಗಲ್‌ ಮ್ಯಾಪ್‌ ನಲ್ಲಿ ಶಂಕರನಾರಾಯಣ ಸ್ಥಳ ನಮೂದಿಸಲು ಕ್ರಮ ಕೈಗೊಳ್ಳಬೇಕು ಎಂದು ಶಂಕರನಾರಾಯಣ ತಾ.ರ.ಹೋ. ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಒತ್ತಾಯಿಸಿದ್ದಾರೆ. ಜ. 16ಕ್ಕೆ ಶಂಕರನಾರಾಯಣ ದೇಗುಲ ರಥೋತ್ಸವ ಇದ್ದು ರಾತ್ರಿ ವಾಹನ ಸಂಚಾರದ ಪ್ರಯಾಣದ ಸಾರ್ವಜನಿಕರು, ಭಕ್ತರಿಗೆ ತೊಂದರೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next