Advertisement

ಕಳಸಾ-ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಯತ್ನ: ಶಂಕರ ಪಾಟೀಲ ಮುನೇನಕೊಪ್ಪ

10:47 AM Aug 07, 2021 | Team Udayavani |

ಹುಬ್ಬಳ್ಳಿ: ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನೆರೆ ರಾಜ್ಯಗಳೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿ ಆದಷ್ಟು ಬೇಗನೆ ಅನುಷ್ಠಾನಕ್ಕೆ ಯತ್ನಿಸುವುದಾಗಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

Advertisement

ಸಚಿವರಾಗಿ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನ್ಯಾಯಾಧೀಕರಣ ಆದೇಶ ಪಾಲನೆ ಮಾಡಿಕೊಳ್ಳುವುದರೊಂದಿಗೆ ನೆರೆ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇರಿಸುವುದು ಅವಶ್ಯ. ಆತುರವಾಗಿ ನಿರ್ಧಾರ, ಹೇಳಿಕೆಗಳಿಂದ ಯೋಜನೆ ಅನುಷ್ಠಾನಕ್ಕೆ ಸಮಸ್ಯೆ ಆಗಬಹುದು. ಈ ಕುರಿತು ಗೊಂದಲದ ಹೇಳಿಕೆ ಕೊಡುವುದು ಬೇಡ ಎಂದರು.

ಇದನ್ನೂ ಓದಿ:ಒಲಿಂಪಿಕ್ ಗಾಲ್ಫ್ ನಲ್ಲಿ ಮಿಂಚು ಹರಿಸಿದ ಕನ್ನಡತಿ: ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಅದಿತಿ

ಬೆಣ್ಣೆ ಹಳ್ಳ, ತುಪ್ಪರಿಹಳ್ಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಡಿನಲ್ಲಿ ಈಗಾಗಲೇ ಡ್ರೋನ್ ಸಮೀಕ್ಷೆ ನಡೆಸಲಾಗಿದೆ. 60 ದಿನದಲ್ಲಿ ಈ ಕುರಿತು ಸಿಹಿ ಸುದ್ದಿ ಕೊಡುವೆ ಎಂದರು.

Advertisement

ಜೀವನದಲ್ಲಿ ನಾನು ಯಾವುದೇ ಸ್ಥಾನ ಮಾನ ಕೇಳಿದವನಲ್ಲ. ಪಕ್ಷ ವಹಿಸಿದ ಕೆಲಸ ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಹಾಗೆ ನಡೆದುಕೊಳ್ಳುವೆ. ರೈತರ ಹೊಲಕ್ಕೆ, ಮನೆಗಳಿಗೆ ನೀರು, ಬೆಳೆ ನಷ್ಟ ಪರಿಹಾರ ಸೇರಿದಂತೆ ಅನೇಕ ಕೆಲಸ ಆಗಬೇಕಿದೆ. ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆದ್ಯತೆಯನುಸಾರ ಆಡಳಿತ ಯಂತ್ರ ಚುರುಕುಗೊಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿನ ಲಸಿಕೆ ಕೊರತೆ ನೀಗಿಸಿ ಸಮರ್ಪಕವಾಗಿ ದೊರಕಿಸುವ ವ್ಯವಸ್ಥೆ ಮಾಡುವೆ. ಜನರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next