Advertisement
ಪ್ರತಿಯೊಬ್ಬರಲ್ಲೂ ಅಸೂಯೆ, ಸ್ವಾರ್ಥ ಇದ್ದೇ ಇರುತ್ತೆ. ಆದರೆ ಸತ್ಯಾಸತ್ಯತೆ ಅರಿಯದೇ ಮತ್ತೂಬ್ಬರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಅವರ ಜಾಗದಲ್ಲಿ ನಿಂತು ಯೋಚಿಸಬೇಕು. ಬೇರೊಬ್ಬರನ್ನು ಮುಕ್ತ ಮನಸ್ಸಿನಿಂದ ಪ್ರೀತಿಸಬೇಕು. ಎಲ್ಲರನ್ನೂ ಪ್ರೀತಿ-ಗೌರವದಿಂದ ಕಾಣಬೇಕು ಎಂಬುದನ್ನು ಶಂಕರ್‌ರಿಂದ ಕಲಿತಿದ್ದೇನೆ. ಕೇವಲ ನಾನೊಬ್ಬನೇ ಅಲ್ಲ, ಅವರ ತಂಡದಲ್ಲಿದ್ದ 13-14 ಜನರೂ ಅವರಿಂದ ಮಾನವೀಯ ಗುಣಗಳನ್ನು ಕಲಿತಿದ್ದೇವೆ. ಗುರುಗಳು ಅವರ ಪರಿಣಿತಿಯ ವಿಷಯಕ್ಕೆ ತಕ್ಕಂತೆ ಪಾಠಗಳನ್ನು ಹೇಳಿಕೊಡುತ್ತಾರೆ.ಆದರೆ ಶಂಕರ್ ನಾಗ್, ಜೀವನ ಮೌಲ್ಯವನ್ನು, ಮಾನವೀಯತೆಯ ಪಾಠಗಳನ್ನು ಕಲಿಸಿದ ಮಹಾಗುರು…– ರಮೇಶ್ ಭಟ್, ಚಿತ್ರನಟ
ನಾನು ಹಂಸಲೇಖ ಅವರ ಬಳಿ ಶಿಷ್ಯ ವೃತ್ತಿ ಆರಂಭಿಸಿದಾಗ “ಚೈತ್ರದ ಪ್ರೇಮಾಂಜಲಿ’ ಚಿತ್ರದ ರಿ ರೆಕಾರ್ಡಿಂಗ್ ನಡೆ ಯುತ್ತಿತ್ತು. ಅಂದಿನಿಂದ ನಾನು ನೋಡಿದಂತೆ ಮುಂಜಾನೆ 5 ಗಂಟೆಗೆ ಎದ್ದು , ಸ್ನಾನ ಮಾಡಿ ಶುಭ್ರವಾದ ಬಿಳಿ ಅಂಗಿ ತೊಟ್ಟು, ಪಿಯಾನೋ ಮುಂದೆ ಕೂತು ಸಂಗೀತಾಭ್ಯಾಸ ಮಾಡಿ, 6 ಗಂಟೆಗೆ ಮನೆಯಿಂದ ಹೊರಡುತ್ತಿದ್ದರು. ಹಂಸ ಪಕ್ಷಿ ನಡೆದು ಬರುವ ರೀತಿಯಲ್ಲೇ ಲವಲವಿಕೆಯಿಂದ ಆರಂಭವಾಗುತ್ತಿದ್ದ ಅವರ ದಿನ, ರಾತ್ರಿ 12ರವರೆಗೂ ಅದೇ ಲವಲವಿಕೆಯಿಂದ ಕೂಡಿ ರುತ್ತಿತ್ತು. “ಕೆಲಸದಲ್ಲಿ ಸುಸ್ತಿರಬಾರದು, ಶಿಸ್ತಿರ ಬೇಕು’ ಎಂಬ ಅವರ ಮಾತು ನನ್ನ ಜೀವನಕ್ಕೆ ಆದರ್ಶ ವಾದ ಸಂಗತಿ. ಕೆಲಸದಲ್ಲಿ ಉತ್ಸಾಹ, ಏಕತಾ ನತೆ ಇಲ್ಲದೆ, ನಿಮಿಷ ನಿಮಿಷಕ್ಕೂ ಕ್ರಿಯಾತ್ಮಕವಾಗಿ ಯೋಚಿ ಸುವ ರೀತಿಯನ್ನು ಅವರಿಂದ ಕಲಿತಿದ್ದೇನೆ. ಅಂದಿನ ದಿನಗಳಲ್ಲಿ ಇಂಟರ್‌ನೆಟ್ ವ್ಯವಸ್ಥೆ ಇರಲಿಲ್ಲ . ಪುಸ್ತಕ ಗಳನ್ನು ಓದಿ, ಚರ್ಚಿಸಿ ಕಲಿಯುವುದರ ಜೊತೆಯಲ್ಲಿ ಒಂದೊಂದು ನೋಟದಲ್ಲೇ ಅಧ್ಯಯನಗಳನ್ನು ಮಾಡುತ್ತಿದ್ದರು. ಕೆಲ ಸಂಗತಿಗಳನ್ನು ವೀಕ್ಷಣೆಯ ಮೂಲಕ ಕಲಿಯುತ್ತಿದ್ದರು. ಹಂಸಲೇಖ ಓರ್ವ ಶಿಕ್ಷಕರಾಗಿದ್ದರೂ ಅವರಲ್ಲಿ ವಿದ್ಯಾರ್ಥಿಯಾಗಿ ಕಲಿಯುವ ಗುಣ ಇತ್ತು. ಅವರ ಸಾಂಗತ್ಯದಲ್ಲಿ ಅವರ ನೆರಳಲ್ಲೇ ನಾನು ಬದುಕಿನ, ವೃತ್ತಿಯ ಶಿಸ್ತನ್ನು ಕಲಿಯುವಂತಾಗಿದ್ದು. ಅಧ್ಯಯನ, ಕ್ರಿಯಾತ್ಮಕತೆ ಜೊತೆಗೆ ಹಂಸಲೇಖ ಅವರಿಂದ ಕಲಿತ ಮತ್ತೂಂದು ಪಾಠ ನಗು. ಸದಾ ಹಸನ್ಮುಖೀಯಾಗಿರುವುದು. ನಮ್ಮ ಸುತ್ತಲಿನವರು ನಗುವಂತೆ ಮಾಡುವುದು, ಆ ಮೂಲಕ ಒಂದು ಸಕಾರಾತ್ಮಕ ವಾತಾವರಣ ಸೃಷ್ಟಿಮಾಡುವುದನ್ನು ಅವರಿಂದ ಕಲಿಯಬೇಕು. ಹಾಡು ಬರೆಯುವಾಗ ಹೀಗೇ ಬರೆಯಬೇಕು ಎಂಬ ಯಾವ ಚೌಕಟ್ಟನ್ನೂ ಹಾಕದೇ, ಹೀಗೂ ಹಾಡುಗಳನ್ನು ಬರೆಯಬಹುದು ಎಂಬು ದನ್ನು ತೋರಿಸಿದರು. ಕೇವಲ ಬರವ ಣಿಗೆಯಂತಲ್ಲದೇ, ಸಂಗೀತ ಸಂಯೋಜನೆ ಯಲ್ಲೂ ವಾದ್ಯಗಳ ಹೊಸ ಹೊಸ ಪ್ರಯೋಗಗಳನ್ನು ಮಾಡಿ, ನಾವು ವಿಭಿನ್ನತೆಯನ್ನು ರೂಢಿಸಿಕೊಳ್ಳಬೇಕು ಎಂದು ಪ್ರೇರೇಪಿಸಿದವರು ಹಂಸಲೇಖ.
– ಕೆ.ಕಲ್ಯಾಣ್, ಗೀತೆ ರಚನೆಕಾರ
Related Articles
ಕೋಚ್‌ಗಳು ಮಾಮೂಲಿಯಾಗಿ ಆಡುವುದು ಹೇಗೆ, ಆಹಾರ ಪದ್ಧತಿ ಹೇಗಿರಬೇಕು, ಶಿಸ್ತನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಕಲಿಸುತ್ತಾರೆ. ಆದರೆ ನನ್ನ ಕೋಚ್ ಅನೂಪ್ ಜೋಸೆಫ್ ಹೇಳಿಕೊಟ್ಟು ಕಲಿಸಿದ್ದರ ಜೊತೆಗೆ, ತಮ್ಮ ನಡವಳಿಕೆಯಿಂದಲೂ ನನಗೆ ಕಲಿಸಿ ದರು. ನಾನು ಬಹಳ ಮಾತನಾಡುತ್ತಿದ್ದೆ, ಕೀಟಲೆ ಗಳನ್ನು ಮಾಡುತ್ತಿದ್ದೆ. ಆದರೆ ಅವರನ್ನು ನೋಡುತ್ತ ಹೋದಂತೆಲ್ಲ ಗಂಭೀರವಾಗಿರುವುದು, ಮೌನವನ್ನು ಕಾಪಾಡಿ ಕೊಳ್ಳುವುದು ಹೇಗೆಂದು ಅರ್ಥವಾಯಿತು. ನೇರವಾಗಿ ಮಾತನಾಡು ವುದು, ನಡೆದುಕೊಳ್ಳುವ ಸ್ವಭಾವ ಅವರನ್ನು ನೋಡಿಯೇ ಬಂದಿದ್ದು.
– ಎನ್.ಎಸ್.ಸಿಮಿ, ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ ರಿಲೇ ಓಟಗಾರ್ತಿ, ಮುಂಡಗೋಡು
Advertisement
ಸೂಕ್ಷ್ಮತೆಯ ಅರಿವಾಯಿತುಒಬ್ಬ ಕ್ರೀಡಾಪಟು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ನನ್ನ ಕ್ರೀಡಾಗುರುಗಳಾದ ಆರ್.ರಾಜೀವ್‌ರನ್ನು ನೋಡುತ್ತ ಪ್ರತಿಯೊಂದನ್ನೂ ವಿವರವಾಗಿ, ನಿರ್ದಿಷ್ಟವಾಗಿ ಗಮನಿಸುವುದನ್ನು ಕಲಿತೆ. ಮುಖ್ಯವಾಗಿ ನಮಗೆ ಸಮಯಪ್ರಜ್ಞೆ ಇರಬೇಕು, ಶಿಸ್ತಂತೂ ಬೇಕೇಬೇಕು. ಇವೆಲ್ಲ ಹೇಳಿ, ಕಲಿಸಿ ಬರುವುದಲ್ಲ. ನಾನು ಗುರುಗಳ ಜೀವನಶೈಲಿ ನೋಡಿ ತಂತಾನೇ ಅದನ್ನು ಅಳವಡಿಸಿ ಕೊಂಡೆ. ಹೀಗೆ ನೋಡಿದರೆ ನನಗೆ ಪಾಠ ಮಾಡಿದ ಶಿಕ್ಷಕರು, ಉಪನ್ಯಾಸಕರೂ ತಮ್ಮ ನಡೆನುಡಿಯಿಂದ ಪರೋಕ್ಷವಾಗಿ ಬಹಳ ಕಲಿಸಿದ್ದಾರೆ. ಮಾತನಾಡು ವುದು ಒಂದು ಸ್ವಭಾವವಾದರೆ, ಇನ್ನೊಬ್ಬರ ಮಾತನ್ನು ಕೇಳುವುದೂ ಕೂಡ ಅಷ್ಟೇ ಅಗತ್ಯ. ಇನ್ನೊಬ್ಬರನ್ನು ಗೌರವಿಸುವುದು, ಅವರ ಮಾತನ್ನು ಶಾಂತವಾಗಿ ಆಲಿಸುವುದು ನನಗೆ ಈಗ ಅಭ್ಯಾಸವಾಗಿದೆ.
– ಶಿವಾ ಶ್ರೀಧರ್, ಖೇಲೋದಲ್ಲಿ 7 ಚಿನ್ನ ಗೆದ್ದ ಈಜುಪಟು, ಬೆಂಗಳೂರು