Advertisement
ಚಂದ್ರಗ್ರಹಣದ ಪ್ರಭಾವ ಯುದ್ಧಕ್ಕೆ ಅವಕಾಶ ಕಲ್ಪಿಸಬಹುದೇ?ಏಷಿಯಾ ಖಂಡದಲ್ಲಿ ಸಂಭವಿಸಲಿರುವ ಈ ಗ್ರಹಣ ಬರುವ ಆಗಸ್ಟ್ ತಿಂಗಳ 7ನೇ ತಾರೀಖೀನ ಸೋಮವಾರದ ದಿನ ಸಂಭಸುತ್ತದೆ. ಪ್ರಭಾವಿ ನಾಯಕರೊಬ್ಬರಿಗೆ ಭಾರತದಲ್ಲಿ ಈ ಗ್ರಹಣ ಅಪಾಯಕಾರಿಯಾಗಿದ್ದು ಕ್ವಿ ಜನ್ ಪಿಂಗ್ ಪ್ರದರ್ಶಿಸುವ ಸಮರೋತ್ಸಾಹ ಭಾರತದ ಬಗೆಗೂ ತನ್ನ ಸಂಘರ್ಷದ ದಾರಿ ತಿರುಗಿಸಿಕೊಳ್ಳಲು ಅವಕಾಶ ಕಲ್ಪಿಸಬಹುದು. ಚೂಡಾಮಣಿ ಕೇತುಗ್ರಸ್ತ ಪಾರ್ಶ್ವ ಚಂದ್ರಗ್ರಹಣ ಭಾರತದ ಮಟ್ಟಿಗೆ ಹಲವು ಜಂಜಾಟಗಳನ್ನು ಸೃಷ್ಟಿಸಲು ಸಾಧ್ಯವಿರುವಂಥದ್ದು. ಮೋದಿಯವರು ಬಹಳಷ್ಟು ಜಾಗರೂಕರಾಗಿ ಇರಬೇಕಾದ ಸಂದರ್ಭವಾಗಿರುತ್ತದೆ. ಈ ಕಾಲಘಟ್ಟ ಪ್ರತಿದಿನವೂ ಭಯೋತ್ಪಾದಕರು ಹುಟ್ಟಿಸುವ ಘಾತಕತನವನ್ನು ನಿಯಂತ್ರಿಸುವುದರೊಂದಿಗೆ ಆರ್ಥಿಕ ವಿಚಾರದ ಕಾರಣಕ್ಕಾಗಿ ಮೋದಿ ಗರಿಷ್ಠ ಮಟ್ಟದ ಚಾತುರ್ಯವನ್ನು ಅವಸರವಾಗದ ಕಾರ್ಯತಂತ್ರ ರೂಪಿಸಿ ಸಂಭಾವ್ಯ ಆರ್ಥಿಕ ಕುಸಿತವನ್ನು ತಡೆಯಬೇಕಾಗಿ ಬರುತ್ತದೆ. ಕಾಶ್ಮೀರದ ವಿಚಾರದಲ್ಲಾಗಲೀ ನೂರಕ್ಕೆ ನೂರು ಅನಾವಶ್ಯಕವಾಗುವ ಯುದ್ಧವೊಂದಕ್ಕೆ ಅಣಿಗೊಳ್ಳಬೇಕಾಗಿ ಬರಬಹುದು. ಟ್ರಂಪ್ ಕೂಡಾ ಅಮೆರಿಕದಲ್ಲಿ ಈಗಾಗಲೇ ಒತ್ತಡವನ್ನು ಎದುರಿಸುತ್ತಿದ್ದು ಖಾಸಗಿತನ ಕಳೆದುಕೊಳ್ಳುತ್ತಿರುವ ವಿಚಾರದಲ್ಲಿ ಚಿಂತಿತರಾಗಿದ್ದಾರೆ. ಉತ್ತರ ಕೊರಿಯಾದ ಕಿಮ್ ಜಂಗ್ ಉನ್ ಕೆಣಕುವುದು ಅಮೆರಿಕಾವನ್ನೇ ಆಗಿರುವುದರಿಂದ ಅಮೆರಿಕಾ ಯುದ್ಧಕ್ಕೆ ಪ್ರವೇಶೀಸುತ್ತಿರುವುದು ಅನಿವಾರ್ಯವಾದಾಗ ಯುದ್ಧದ ಕಾರ್ಯಕ್ಷೇತ್ರ ಏಷಿಯಾ ಖಂಡವೇ ಆಗಿರುತ್ತದೆ. ಯಾರಿಗೂ ಬೇಕಾಗಿರದ ಯುದ್ಧ ಉತ್ತರ ಕೊರಿಯಾದಂಥ ರಾಷ್ಟ್ರದ ಕಾರಣಕ್ಕಾಗಿ ಜಗತ್ತು ಎದುರಿಸಬೇಕಾಗಿ ಬಂದೀತು. ಮೊದಲ ಮಹಾಯುದ್ಧವಾಗಲೀ, ಎರಡನೇ ಮಹಾಯುದ್ಧದ ಸಂದರ್ಭವಾಗಲೀ ಚಿಕ್ಕ ಕಾರಣಕ್ಕಾಗಿ ಬೃಹತ್ ರೂಪವನ್ನು ಪಡೆದ ವಿಚಾರಗಳನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಅಮೆರಿಕಾವನ್ನು ಎದುರಿಸಬಲ್ಲೆ ತಕ್ಕ ಪಾಠ ಕಲಿಸುತ್ತೇನೆ ಎಂಬಿತ್ಯಾದಿ ಮಾತನಾಡಲು ಧೈರ್ಯ ಪಡೆಯುವುದು ಚೀನಾದ ಬೆಂಬಲ ಆ ದೇಶಕ್ಕೆ ಅಬಾಧಿತವಾಗಿರುವುದೇ ಕಾರಣ. ಹೀಗಾಗಿ ಕಿಮ್ ಬಿಬ್ಬೆ ಹೊಡೆದಷ್ಟೂ ಚೀನಾ ಮುಗುಳ್ನಗುತ್ತ ಇರುತ್ತದೆ. ದಕ್ಷಿಣ ಚೀನಾ ಸಮುದ್ರದ ವಿಷಯಕ್ಕೆ ಅದು ಎದುರಿಸುತ್ತಿರುವ ಮುಖ ಭಂಗವನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಲೇ ಇದೆ. ಪ್ರತಿಷ್ಠೆಯ ವಿಚಾರವಾಗಿ ಈ ಅಂಶವನ್ನು ಪರಿಗಣಿಸಿರುವ ಚೀನಾಕ್ಕೆ ಈ ವ್ಯಾಜ್ಯದ ವಿಚಾರ ಪ್ರತಿಷ್ಠೆಯ ವಿಚಾರವಲ್ಲದೆ ಅದಕ್ಕೆ ಬೇಕಾದ ಅಮೂಲ್ಯವಾದ ಭೂಗರ್ಭದ ಸಂಪತ್ತನ್ನು ಬಾಚಿಕೊಳ್ಳಲೂ ಅವಶ್ಯವಾದ ಸಂಗಾತಿಯಾಗಿದೆ.
ನೆಹರು ಕಾಲದಿಂದಲೂ ಭಾರತ ದೇಶ ಎಷ್ಟೇ ಶಾಂತಿ ಮಂತ್ರ ಜಪಿಸಿದರೂ ಅಮೆರಿಕಾ ಸೇರಿದಂತೆ ಪಶ್ಚಿಮದ ರಾಷ್ಟ್ರಗಳಿಗೆ ಭಾರತ ಇಕ್ಕಟ್ಟಿನ ಸ್ಥಿತಿ ಎದಿರಿಸಿಕೊಂಡೇ ಇರಬೇಕು. ನೀಚ ಗುರುವಿನ ಜೊತೆ ಕರ್ಮ ಕ್ಷೇತ್ರದಲ್ಲಿರುವ ಶುಕ್ರಗ್ರಹದ ದಶಾಕಾಲ ಈಗಿನ ಪಾಕಿಸ್ತಾನದ ಪ್ರಧಾನಿಗೆ ಒಳಿತಿನ ಕಾಲಘಟ್ಟವಂತೂ ಆಗಿರುವುದಿಲ್ಲ. ಇನ್ನು ಮುಂದಿನ ಎರಡೂ ಕಾಲು ವರ್ಷಗಳಲ್ಲಿ ಕೂಡಿಬರುವ ಸಾಡೆಸಾತಿ ತಪ್ಪುಗಳನ್ನು ಮಾಡಲು ಗುರುವಿನ ಮೂಲಕವಾಗಿ ಪ್ರಯತ್ನಿಸುತ್ತಲೇ ಇರುತ್ತಾನೆ. ಪ್ರಸ್ತುತ ಒಂದು ತೂಗುಕತ್ತಿ ( ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ) ‚ಶರೀಫರ ಮೇಲೆ ಇದ್ದೇ ಇದೆ. ಅನ್ಯರ ಲಕ್ಷ್ಯ ಬೇರೆಡೆಗೆ ಸೆಳೆಯಲು ಯುದೊœàನ್ಮಾದವಂತೂ ‚ಷರೀಫ್ ವ್ಯಕ್ತ ಪಡಿಸುವ ಸಾಧ್ಯತೆ ಇದೆ. ಬಂಧನ ಯೋಗ ಜಾತಕದಲ್ಲಿ ಅವರಿಗೆ ಯಾವಾಗಲೂ ಒಂದು ಮಗ್ಗುಲ ಮುಳ್ಳು. ಭಾರತವನ್ನು ದಣಿವುಗೊಳಿಸಲು ಪಶ್ಚಿಮದ ರಾಷ್ಟ್ರಗಳು ಚೈನಾವೂ ಪಾಕಿಸ್ತಾನವನ್ನು ಕಟುವಾಗಿ ವಿಮರ್ಶಿಸುತ್ತ ಇದ್ದಂತೆ ಕಂಡರೂ ಮೃದುತ್ವದೊಂದಿಗೆ ಬೆನ್ನು ಸವರುತ್ತಲೇ ಇರುತ್ತದೆ. ಪಾಕಿಸ್ತಾನ ಹಲವು ಪಾಪಗಳನ್ನು ಮಾಡಿ ದಕ್ಕಿಸಿಕೊಳ್ಳುತ್ತಲೇ ಇದೆ. ಅಮೆರಿಕ ಮೈ ಪರಚಿಕೊಳ್ಳುವ ಸ್ಥಿತಿ ಇದ್ದರು ಸಹಿಸಿಕೊಳ್ಳದೆ ವಿಧಿ ಇಲ್ಲ. ಭಾರತವನ್ನು ದುರ್ಬಲಗೊಳಿಸಲು ಇದು ಅನಿವಾರ್ಯ. ಭಾರತದಲ್ಲಿ ಮೋದಿ ಆಡಳಿತ
ಶನಿಕಾಟದ ಏಳೂವರೆ ವರ್ಷದ ಅವಧಿಯಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ಪ್ರತಿನಿತ್ಯವೂ ಗೆದ್ದರೂ ಸೋತಂತೆ ಬಸವಳಿಯುತ್ತಾರೆ. ಗೆಲ್ಲಿಸಬಲ್ಲದು ಎಂಬ ಉತ್ಸಾಹ ತಳೆಯುತ್ತಾರೆ. ಇದು ತನ್ನ ಸಾಧನೆ ಎಂದು ವಿರೋಧಿಗಳ ಬಾಯಿ ಮುಚ್ಚಿಸುತ್ತಾರೆ. ಮೋದಿಯವರ ಏಳೂವರೆ ಶನಿ ಮಹಾರಾಜ ಅಡೆತಡೆಗಳನ್ನು ನಿರ್ಮಿಸುತ್ತಲೇ ಇದ್ದಾನೆ.
Related Articles
Advertisement
ರಶಿಯಾದ ಪುಟಿನ್ ಅಮೆರಿಕಾದ ವಿರುದ್ಧ ಪುಟಿಯುತ್ತಿದ್ದಾರೆ. ಸಿರಿಯಾ, ಜಪಾನ್, ತೈವಾನ್ ನೆಪದಲ್ಲಿ ಪುಟಿನ್‌ಗೆ ಅಮೆರಿಕಾದ ಟ್ರಂಪ್ ಅನ್ನು ತುಡುಕುವ ಸಾಹಸ ನಿಯಂತ್ರಣ ಮೀರಿ ಹೊರಗೆ ಬಂದು ಬಿಡಬಹುದು ಎಂಬ ಸ್ಥಿತಿ ಇದೆ. ವಾಸ್ತವವಾಗಿ ಹಿಲರಿ ಕ್ಲಿಂಟನ್ ಸೋಲಿಸಿ ಟ್ರಂಪ್ ಗೆಲ್ಲುವಂತೆ ಪುಟಿನ್ ಆಟ ಆಡಿದರು ಎಂಬ ಆರೋಪ ಬಹಿರಂಗವಾಗಿಯೇ ಕೇಳಿಸುತ್ತಿದೆ. ಪುಟಿನ್‌ರಿಗೆ ಟ್ರಂಪ್‌ರನ್ನು ತನ್ನ ತೋರು ಬೆರಳಲ್ಲಿ ನಿಯಂತ್ರಣದಲ್ಲಿಟ್ಟು ಕೊಳ್ಳುವ ಬಯಕೆ.
ಈ ಎಲ್ಲಾ ಅಂಶಗಳು ಭಗ್ಗನೆ ಉರಿಯುವ ಪೆಟ್ರೋಲಿನಂತೆ ಸಂಘರ್ಷದ ಸೂಕ್ಷ್ಮಗಳು ಕಾದ ಕಾವಲಿಯಂತೆ ಸೋರುವ ಅನಿಲದಂತೆ ಎಲ್ಲಿ ಬೇಕಾದಲ್ಲಿ ಸ್ಫೋಟಿಸಬಹುದು. ಮೇಲೆ ವಿವರಿಸಿದ ನಾಯಕರ ಮೇಲೆ ವರ್ತಮಾನದಲ್ಲಿ ಶನೈಶ್ಚರ ಹೊಂದಿರುವ ಹಿಡಿತ, ಬರಲಿರುವ ಚಂದ್ರಗ್ರಹಣ ಜಾಗತಿಕವಾದ ದೊಡ್ಡ ಯುದ್ಧಾದಿ ಅವಗಢಗಳಿಗೆ ಮುನ್ನುಡಿ ಬರೆಯಬಹುದು.
ಅನಂತ ಶಾಸ್ತ್ರಿ