Advertisement

ಬುಮ್ರಾ ಕೌಂಟಿಯಲ್ಲಿ ಆಡಿದರೆ ಲಾಭವಿದೆ: ಅಕ್ರಮ್‌

06:45 AM Feb 09, 2018 | Team Udayavani |

ಲಾಹೋರ್‌: ಬೌಲಿಂಗ್‌ ಸುಧಾರಣೆಗಾಗಿ ಭಾರತದ ಯುವ ವೇಗಿ ಜಸ್‌ಪ್ರೀತ್‌ ಬುಮ್ರಾ ಇಂಗ್ಲಿಷ್‌ ಕೌಂಟಿಯಲ್ಲಿ ಆಡಬೇಕು ಎಂದು ಪಾಕಿಸ್ಥಾನದ ಮಾಜಿ ವೇಗಿ ವಾಸಿಮ್‌ ಅಕ್ರಮ್‌ ಸಲಹೆ ನೀಡಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು 2-1 ಅಂತರದಿಂದ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತಲೆಬಾಗಿತ್ತು. ಈ ಸರಣಿಗೆ ಬುಮ್ರಾ ಆಯ್ಕೆ ತೀವ್ರ ಟೀಕೆಗೆ ಗುರಿಯಾಗಿತ್ತಾದರೂ ಅವರು 14 ವಿಕೆಟ್‌ ಹಾರಿಸಿ ಟೀಕಾಕಾರ ಬಾಯಿ ಮುಚ್ಚಿಸಿದ್ದರು. ಈ ಸಂಗತಿಯನ್ನು ನೆನಪಿಸಿಕೊಂಡಿರುವ ವಾಸಿಮ್‌ ಅಕ್ರಮ್‌, “ಬುಮ್ರಾ ಕೌಂಟಿ ಆಡಿದರೆ ಜುಲೈಯಲ್ಲಿ ನಡೆಯಲಿರುವ ಇಂಗ್ಲೆಂಡ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ಬುಮ್ರಾ ಪರಿಣಾಮಕಾರಿ ಬೌಲಿಂಗ್‌ ನಡೆಸುತ್ತಿದ್ದಾರೆ ಎಂದು ಅಕ್ರಮ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next