ಹೊಸದಿಲ್ಲಿ : ಕೇವಲ ಮೂರು ದಿನಗಳ ಒಳಗೆ ಸೇನೆಯನ್ನು ಕಟ್ಟಿ ಹೋರಾಟಕ್ಕೆ ಸಜ್ಜಾಗುವ ಸಾಮರ್ಥ್ಯ ಆರ್‌ಎಸ್‌ಎಸ್‌ನಲ್ಲಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉಗ್ರವಾಗಿ ಟೀಕಿಸಿದ್ದಾರೆ.
“ಶ್ರೀಮಾನ್ ಮೋಹನ್ ಭಾಗವತ್ ಅವರೇ, ನಿಮಗೆ ನಾಚಿಕೆಯಾಗಬೇಕು; ನಮ್ಮ ಸೇನೆಯನ್ನು ಮತ್ತು ದೇಶದ ರಕ್ಷಣೆಗಾಗಿ ಹುತಾತ್ಮ ರಾಗಿರುವ ಯೋಧರನ್ನು ನೀವು ಅವಮಾನಿಸಿದ್ದೀರಿ. ನಮ್ಮ ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್ ಹೊಡೆಯುವ ಎಲ್ಲ ಸೈನಿಕರನ್ನು ನೀವು ಅವಮಾನಿಸಿದ್ದೀರಿ’ ಎಂದು ರಾಹುಲ್ ಅವರಿಂದು ಟ್ವಿಟರ್‌ನಲ್ಲಿ ಗುಡುಗಿದ್ದಾರೆ.
ಮೋಹನ್ ಭಾಗವತ್ ಅವರು ಬಿಹಾರದ ಮುಜಫರಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ,”ನಮ್ಮ ಸೇನೆಗೆ ಆರು – ಏಳು ತಿಂಗಳು ತಗುವಲ್ಲಿ ಆರ್‌ಎಸ್‌ಎಸ್ ಕೇವಲ ಮೂರು ದಿಗಳಲ್ಲಿ ಸೇನೆಯನ್ನು ಕಟ್ಟುವ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದ್ದರು.
ಭಾಗವತ್ ಅವರು ಈಚೆಗೆ ಆರು ದಿನಗಳ ಭೇಟಿಯಲ್ಲಿ ಮುಜಫರಪುರಕ್ಕೆ ಬಂದಿದ್ದರು. ಕೊನೇ ದಿನದಂದು ಅವರು ಜಿಲ್ಲಾ ಶಾಲಾ ಮೈದಾನದಲ್ಲಿ ಆರ್‌ಎಸ್‌ಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.
“ಗಡಿಯಲ್ಲಿ ಹೋರಾಡುವ ಅಗತ್ಯ ಕಂಡುಬಂದರೆ ಮತ್ತು ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದ್ದರೆ ನಮ್ಮ ಆರ್‌ಎಸ್‌ಎಸ್ ಕಾರ್ಯಕರ್ತರು ಕೇವಲ ಮೂರು ದಿನಗಳಲ್ಲಿ ಸೇನೆಯನ್ನು ಕಟ್ಟಿ ಹೋರಾಟಕ್ಕೆ ಸಜ್ಜಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ’ ಎಂದು ಮೋಹನ್ ಭಾಗವತ್ ಹೇಳಿದ್ದರು.