Advertisement
ಶಿವಶಂಕರಪ್ಪ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಟಿಕೆಟ್ನೀಡಬೇಕೆಂಬ ಬೇಡಿಕೆ ಪಕ್ಷದ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಮಲ್ಲಿಕಾರ್ಜು
ನ್ ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಆದರೆ, ದಾವಣಗೆರೆ ಯಲ್ಲಿ ಹಾಲಿ
ಸಂಸದ ಸಿದ್ದೇಶ್ವರ್ ವಿರುದಟಛಿ ಸ್ಪರ್ಧೆಗೆ ಪ್ರಬಲ ಅಭ್ಯರ್ಥಿ ದೊರೆಯದ ಕಾರಣ
ಶಿವಶಂಕರಪ್ಪ ಅವರನ್ನು ಕೇಳದೆಯೇ ಪಕ್ಷ ಅವರ ಹೆಸರನ್ನು ಪ್ರಕಟ ಮಾಡಿದೆ.
ಆದರೆ, ಶಿವಶಂಕರಪ್ಪ ತಮ್ಮ ಪುತ್ರ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡುವಂತೆ
ಪಕ್ಷದ ರಾಜ್ಯ ನಾಯಕರಿಗೆ ತಿಳಿಸಿದ್ದಾರೆಂದು ತಿಳಿದು ಬಂದಿದೆ. ಮಲ್ಲಿಕಾರ್ಜುನ್
ಸ್ಪರ್ಧೆ ಮಾಡಿದರೂ ಗೆಲುವು ಕಷ್ಟ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಶಾಮನೂರು ಅವರನ್ನೇ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದ್ದು,
ಒಂದು ವೇಳೆ ತಾವು ಸ್ಪರ್ಧಿಸಲು ಸಾಧ್ಯವಿಲ್ಲ ವೆಂದಾದರೆ, ನೀವೇ ಸೂಕ್ತ ಅಭ್ಯರ್ಥಿಯನ್ನು ಸೂಚಿಸಿ ಎಂದು ರಾಜ್ಯ ನಾಯಕರು ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.