Advertisement
ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ಗೆ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂ ಬವೇ ಹೈಕಮಾಂಡ್ ಆಗಿದೆ!
Related Articles
Advertisement
ಈಗ ಬಿಜೆಪಿ ಪ್ರಾಬಲ್ಯ ಹೊಂದಿರುವ ದಾವಣಗೆರೆ ಜಿಲ್ಲೆ ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಹಿಂದೆ, ಕಾರ್ಮಿಕರ ನಗರಿ ದಾವಣಗೆರೆ ನಗರದಲ್ಲಿ ಸಿಪಿಐ ದಟ್ಟ ಪ್ರಭಾವ ಹೊಂದಿತ್ತು. ಸತತ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಸಿಪಿಐ ನಾಗಾಲೋಟಕ್ಕೆ ತಡೆಯೊಡ್ಡಿ ದ್ದಲ್ಲದೇ ಕಾಂಗ್ರೆಸ್ ತೆಕ್ಕೆಗೆ ದಾವಣ ಗೆರೆಯನ್ನು ತೆಗೆದು ಕೊಂಡಿದ್ದರು. ಅಲ್ಲಿಂದ ಮತ್ತೆ ಪ್ರಬಲಗೊಂಡ ಕಾಂಗ್ರೆಸ್ ಈಗಲೂ ಗಟ್ಟಿಯಾಗಿ ಇರುವುದಕ್ಕೆ ಅವರೇ ಕಾರಣ.
ಸಾಕಷ್ಟು ಪ್ರಭಾವ, ಜಾತಿ, ಹಣ, ಸಮಾಜದ ಬೆಂಬಲ ಹೊಂದಿದ್ದರೂ ಶಾಮನೂರು ಶಿವಶಂಕರಪ್ಪ ಅವರಿಗೆ 90ರ ದಶಕದವರೆಗೆ ಸಕ್ರಿಯವಾಗಿ ರಾಜಕೀಯದಲ್ಲಿ ಬೆಳಕಿಗೆ ಬರಲು ಆಗಲಿಲ್ಲ. ಎಪ್ಪತ್ತರ ದಶಕದಲ್ಲೇ ನಗರಸಭೆ ಮೂಲಕ ರಾಜಕೀಯ ಪ್ರವೇಶಿಸಿದ್ದ ಶಾಮನೂರು, ಕೆಪಿಸಿಸಿಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಖಜಾಂಚಿ ಆಗಿದ್ದರು. ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾದ ದಶಕದ ಅನಂತರ ಅವರಿಗೆ ಸಚಿವಸ್ಥಾನ ಒಲಿದು ಬಂದಿತ್ತು. ಅದು ಸಹ ಬಹಳ ಕಾಲ ಅಲ್ಲ. ಇಳಿವಯಸ್ಸಿನಲ್ಲಿ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಿದರೂ ಎರಡೂವರೆ ವರ್ಷಕ್ಕೆ ಸಚಿವಸ್ಥಾನ ಹಿಂಪಡೆದು ಮತ್ತೆ ಪುತ್ರ ಮಲ್ಲಿಕಾರ್ಜುನ್‌ಗೆ ನೀಡಲಾ ಯಿತು. ನಾನೇಕೆ ಮುಖ್ಯಮಂತ್ರಿ ಆಗಬಾ ರದು, ನನಗೇನೂ ಸಚಿವಗಿರಿ ಮುಖ್ಯ ಅಲ್ಲ. ಬೇಕಾದರೆ ಈಗಲೇ ಸರಕಾರಿ ಕಾರು ಬಿಟ್ಟು, ಹೆಲಿಕಾಪ್ಟರ್‌ನಲ್ಲಿ ದಾವಣಗೆರೆಗೆ ಹೋಗುತ್ತೇನೆ’ ಎಂದ ಹೇಳಿದ್ದ ಮಾತು ಶಾಮನೂರು ಅವರಿಗೆ ಮುಳುವಾಯ್ತಾ’ ಎಂಬ ಪ್ರಶ್ನೆಯೂ ಇದೆ.
ಸತತ ಎರಡು ಬಾರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಮನೂರು, ಸಚಿವರಾಗಿದ್ದ ಸಂದರ್ಭ ಎದುರಾದ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತ ಮ್ಮದೇ ಪಕ್ಷದ ಸರಕಾರದ ವಿರುದ್ಧ ತೊಡೆ ತಟ್ಟಿದ್ದರು.
ಎಲ್ಲ ಪಕ್ಷಗಳ ನಾಯಕರ ಜತೆಯೂ ನಂಟು ಹೊಂದಿದ್ದಾರೆ. ಮಾಜಿ ಸಿಎಂ ಜಗದೀಶ್‌ಶೆಟ್ಟರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಶಿವರಾಜ್ ಪಾಟೀಲ್, ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಕುಟುಂಬಗಳೊಂದಿಗೆ ಸಂಬಂಧ ಬೆಸೆದಿರುವ ಶಾಮನೂರು ಕುಟುಂಬ ರಾಜಕೀಯವೇ ಬೇರೆ ಕೌಟುಂಬಿಕ ಸಂಬಂಧವೇ ಬೇರೆ ಎಂಬುದಕ್ಕೆ ಮಾದರಿ.
-ರಾ.ರವಿಬಾಬು