Advertisement

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

04:42 PM Dec 27, 2024 | Team Udayavani |

ಹೈದರಾಬಾದ್: ನಟ ವಿಜಯ್ ದೇವರಕೊಂಡ (Vijay Deverakonda) ಅವರ ಬಹುನಿರೀಕ್ಷಿತ ʼವಿಡಿ12ʼ (VD12) ಸಿನಿಮಾ ಅನೌನ್ಸ್‌ ಮೆಂಟ್‌ ಆದ ದಿನದಿಂದ ಟಾಲಿವುಡ್ ನಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿದೆ.

Advertisement

ಸತತ ಸೋಲಿನಿಂದ ಅಭಿಮಾನಿಗಳಲ್ಲಿ ನಿರಾಶೆ ಹುಟ್ಟಿಸಿರುವ ʼಅರ್ಜುನ್‌ ರೆಡ್ಡಿʼಗೆ ಒಂದು ದೊಡ್ಡ ಗೆಲುವು ತಂದುಕೊಡುವ ನಿರೀಕ್ಷೆ ʼವಿಡಿ12ʼ ಸಿನಿಮಾದ ಮೇಲಿದೆ. ʼಜೆರ್ಸಿʼ ಸಿನಿಮಾಕ್ಕೆ ಆ್ಯಕ್ಷನ್ ಹೇಳಿದ್ದ ಗೌತಮ್ ತಿನ್ನೂರಿ (Gowtam Tinnanuri) ದೇವರಕೊಂಡ ಅವರ 12ನೇ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದರಿಂದ ಈ ಚಿತ್ರದ ಮೇಲೆ ಟಾಲಿವುಡ್‌ನಲ್ಲಿ ಒಂದು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

ಈಗಾಗಲೇ ಪೋಸ್ಟರ್‌ನಿಂದ ಗಮನ ಸೆಳೆದಿರುವ ʼವಿಡಿ12ʼ ಬಗ್ಗೆ ನಿರ್ಮಾಪಕ ನಾಗ ವಂಶಿ (Producer Naga Vamsi) ಅವರು ಅಪ್ಡೇಟ್‌ವೊಂದನ್ನು ನೀಡಿದ್ದಾರೆ.

Advertisement

ʼಎಂ9 ನ್ಯೂಸ್ʼ ಜತೆ ಮಾತನಾಡಿರುವ ಅವರು, “ಪ್ರೂಡಕ್ಷನ್ ಕೆಲಸದ ಮಧ್ಯದಲ್ಲಿ ಚಿತ್ರವನ್ನು ಎರಡು ಭಾಗಗಳಾಗಿ ವಿಭಜಿಸಲು ನಾವು ಯೋಚಿಸಿರಲಿಲ್ಲ. ಸ್ಕ್ರಿಪ್ಟಿಂಗ್ ಹಂತದಲ್ಲಿಯೇ ಅದನ್ನು ಎರಡು ಭಾಗಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಒಂದು ವೇಳೆ ನಾವು ಎರಡನೇ ಭಾಗವನ್ನು ಮಾಡದಿದ್ದರೂ ಅದರಿಂದ ಪ್ರೇಕ್ಷಕರಿಗೆ ಸಮಸ್ಯೆಯಾಗುವುದಿಲ್ಲ ಏಕೆಂದರೆ ಮೊದಲ ಭಾಗವು ಪೂರ್ಣ ಪ್ರಮಾಣದಲ್ಲಿರುತ್ತದೆ ಮತ್ತು ಅದಕ್ಕೊಂದು ಅಂತ್ಯವೂ ಇರುತ್ತದೆ” ಎಂದು ಹೇಳಿದ್ದಾರೆ.

“ಎರಡು ಭಾಗವನ್ನು ಮಾಡುತ್ತೇವೆ ಎಂದರೆ ಇದರಲ್ಲಿ ದುರ್ಬಲವಾದ ಚಿತ್ರಕಥೆ ಇರುತ್ತದೆ ಎಂದರ್ಥವಲ್ಲ. ಇದೊಂದು ಸಂಪೂರ್ಣವಾದ ಎರಡು ಭಾಗದ ಸಿನಿಮಾವಾಗಿರುತ್ತದೆ. ಎರಡಲ್ಲೂ ವಿಭಿನ್ನ ಕಥೆಗಳಿರುತ್ತದೆ” ಎಂದು ನಿರ್ಮಾಪಕರು ಹೇಳಿದ್ದಾರೆ.

ದೇವರಕೊಂಡ ಸಿನಿಮಾದಲ್ಲಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಳ್ಳಲಿದ್ದು, ಮೊದಲ ಭಾಗ 2025ರ ಮಾರ್ಚ್‌ 28 ರಂದು ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next