Advertisement

ಕಾಂಗ್ರೆಸ್‌ ಅಸ್ತ್ರ: “ಶಕ್ತಿ’, “ವಿದ್ಯಾ’

07:46 AM Nov 17, 2018 | |

ಹೊಸದಿಲ್ಲಿ: ಈಗಾಗಲೇ ಪಂಚರಾಜ್ಯಗಳಲ್ಲಿ ಜಾರಿಗೆ ಬಂದಿರುವ  ಶಕ್ತಿ ಹಾಗೂ ವಿದ್ಯೆ ಎಂಬ ಎರಡು ವಿಚಾರಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಚುನಾವಣಾ ಅಸ್ತ್ರಗಳಾಗಿರಲಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬೂತ್‌ ಮಟ್ಟದಿಂದ ಕಾಂಗ್ರೆಸ್‌ ಪಕ್ಷವನ್ನು ಪುನರ್‌ ಸಂಘಟಿಸಲಾಗುತ್ತದೆ ಎಂದು ರಾಹುಲ್‌ ಹೇಳಿದ್ದಾರೆ. 

Advertisement

ಏನಿದು ಶಕ್ತಿ-ವಿದ್ಯಾ?: ಆನ್‌ಲೈನ್‌ ಮೂಲಕ ಕಾಂಗ್ರೆಸ್‌ಗೆ ನೂತನ ಕಾರ್ಯಕರ್ತರನ್ನು ಬೂತ್‌ಮಟ್ಟದಲ್ಲಿ ನೇಮಿಸಿಕೊಳ್ಳುವ ಪ್ರಕ್ರಿಯೆಗೆ “ಶಕ್ತಿ’ ಎಂದು ಹೆಸರಿಡಲಾಗಿದ್ದು, ಹೊಸದಾಗಿ ನೇಮಕವಾದ ಕಾರ್ಯಕರ್ತರನ್ನು ಸೂಕ್ತ ತರಬೇತಿ ಮೂಲಕ ಹುರಿಗೊಳಿಸುವ ಸಾಫ್ಟ್ವೇರ್‌ ಆಧಾರಿತ ತರಬೇತಿ ಪ್ರಕ್ರಿಯೆಗೆ “ವಿದ್ಯಾ’ ಎಂದು ಹೆಸರಿಡಲಾಗಿದೆ.  

ಸದ್ಯಕ್ಕೆ ನಡೆಯುತ್ತಿರುವ ಪಂಚರಾಜ್ಯಗಳ ಚುನಾವಣೆಗಳಲ್ಲಿ ಇದು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿವೆ. ಆ ರಾಜ್ಯಗಳಲ್ಲಿ ನಡೆಯುವ ರ್ಯಾಲಿಗಳಲ್ಲಿ ರಾಹುಲ್‌ ಗಾಂಧಿ ಮಾಡುವ ಭಾಷಣವು ಬೂತ್‌ಮಟ್ಟದ ಪ್ರತಿಯೊಬ್ಬ ಕಾರ್ಯಕರ್ತನಿಗೂ ತಲುಪುವ ವ್ಯವಸ್ಥೆ ಮಾಡಲಾಗಿದೆ. ರಾಹುಲ್‌ ಗಾಂಧಿ ಅವರು ಯಾವುದೇ ಬೂತ್‌ನ ಕಾರ್ಯಕರ್ತರು, ಕಾರ್ಯಕ್ರಮಗಳು ಸೇರಿದಂತೆ ಇತರೆ ಮಾಹಿತಿಗಳನ್ನು ತಮ್ಮ ಮೊಬೈಲ್‌ ಫೋನಿನ  “ವಿದ್ಯಾ’ ಮೂಲಕ ಪಡೆಯಬಹುದಾಗಿದೆ. 1.70 ಲಕ್ಷ ಬೂತ್‌ಗಳನ್ನು “ವಿದ್ಯಾ’ ತಲುಪಿದೆ. ಒಟ್ಟು 9.27 ಲಕ್ಷ ಬೂತ್‌ ಮಟ್ಟದ ಪ್ರಾಂತ್ಯಗಳು ಈ ದೇಶದಲ್ಲಿದ್ದು 2019ರ ಮಹಾ ಚುನಾವಣೆಗೊಳಗಾಗಿ ಆ ಎಲ್ಲಾ ಪ್ರಾಂತ್ಯಗಳಿಗೂ ತಲುಪುವ ಗುರಿ ಕಾಂಗ್ರೆಸ್ಸಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next