Advertisement

ಟಿ20 ವಿಶ್ವಕಪ್ ನಿಂದ ಹೊರಬಿದ್ದ ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್

11:14 AM Nov 01, 2021 | Team Udayavani |

ದುಬೈ: ಬಾಂಗ್ಲಾದೇಶ ತಂಡದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್ ಕೂಟದಿಂದಲೇ ಹೊರಬಿದ್ದಿದ್ದಾರೆ. ಮಂಡಿ ರಜ್ಜು ಗಾಯದಿಂದ ಬಳಲುತ್ತಿರುವ ಶಕೀಬ್ ಕೂಟದಿಂದಲೇ ಹೊರಬಿದ್ದಿರುವುದು ಬಾಂಗ್ಲಾಗೆ ಆಘಾತ ನೀಡಿದೆ.

Advertisement

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಶಕೀಬ್ ಗಾಯಗೊಂಡಿದ್ದರು. ನಂತರ ಅವರ ಆರೋಗ್ಯ ಪರೀಕ್ಷೆ ಮಾಡಲಾಗಿದ್ದು, ಗುಣಮುಖವಾಗಲು ಕೆಲವು ದಿನಗಳು ಬೇಕಾಗುತ್ತದೆ ಎಂದು ಬಾಂಗ್ಲಾ ತಂಡದ ಫಿಸಿಯೋ ದೇವಶೀಶ್ ಚೌಧರಿ ಹೇಳಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಆರು ಪಂದ್ಯಗಳನ್ನಾಡಿರುವ ಶಕೀಬ್ 11 ವಿಕೆಟ್ ಪಡೆದಿದ್ದಾರೆ. ಅದಲ್ಲದೆ 131 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ:ಲಂಕೆಗಿದೆಯೇ ಉಳಿಗಾಲ? ಇಂಗ್ಲೆಂಡ್‌ ಗೆದ್ದರೆ ಸೆಮಿ ಟಿಕೆಟ್ ಖಚಿತ, ಲಂಕೆ ಹೊರಕ್ಕೆ!

ಸೂಪರ್ 12 ಹಂತದಲ್ಲಿ ಎ ಗುಂಪಿನಲ್ಲಿರುವ ಬಾಂಗ್ಲಾ ಆಡಿದ ಮೂರು ಪಂದ್ಯಗಳನ್ನು ಸೋಲನುಭವಿಸಿದೆ. ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next