ಕೋಲ್ಕತ್ತಾ: ಐಪಿಎಲ್ ಸೀಸನ್ 16ರ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ತಂಡಕ್ಕೆ ಆಘಾತ ಎದುರಾಗಿದ್ದು, ಪ್ರಮುಖ ಆಲ್ ರೌಂಡರ್ ಐಪಿಎಲ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರು ಈ ಬಾರಿ ಐಪಿಎಲ್ ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ ತಂಡದ ಒತ್ತಡದ ಕಾರಣದಿಂದ ಐಪಿಎಲ್ ಆಡದಿರಲು ಶಕೀಬ್ ತೀರ್ಮಾನಿಸಿದ್ದಾರೆ. ಮೊದಲೇ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕಳೆದುಕೊಂಡಿರುವ ಕೆಕೆಆರ್ ಗೆ ಇದು ಮತ್ತೆ ಹೊಡೆತ ನೀಡಿದೆ.
ಇದನ್ನೂ ಓದಿ:ಶ್ರೀ ನಂಜುಂಡೇಶ್ವರನ ಶಾಪ ತಟ್ಟದೆ ಇರದು..: ಬಿಜೆಪಿ ಶಾಸಕನ ವಿರುದ್ಧ ಎಚ್ ಡಿಕೆ ವಾಗ್ದಾಳಿ
ಅಲ್ಲದೆ ಬಾಂಗ್ಲಾದೇಶದ ಮತ್ತೋರ್ವ ಆಟಗಾರ ಲಿಟನ್ ದಾಸ್ ಅವರು ಏಪ್ರಿಲ್ 10ರ ಬಳಿಕವಷ್ಟೇ ಕೆಕೆಆರ್ ಕೂಟ ಸೇರಲಿದ್ದಾರೆ. ಶಕೀಬ್ ಅವರನ್ನು ಕೆಕೆಆರ್ ಫ್ರಾಂಚೈಸಿ ಕಳೆದ ಹರಾಜಿನಲ್ಲಿ 1.5 ಕೋಟಿ ರೂ ನೀಡಿ ಖರೀದಿ ಮಾಡಿತ್ತು.
ಕೆಕೆಆರ್ ತಂಡವು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.