Advertisement
ಚಿತ್ರಕ್ಕೆ ತುಳುನಾಡಿನ ಖ್ಯಾತ ಛಾಯಾಚಿತ್ರ ಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕೆಮರಾ ಕೈಚಳಕವಿದೆ. ತಾರಾಗಣದ ಪ್ರಮುಖ ಭೂಮಿಕೆಯಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ, ಕಥಾನಾಯಕನಾಗಿ ಗಾಡ್ವಿನ್ ಸ್ಪಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಮನೋಹರ್ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಜ್, ಶಿವಾನಂದ, ಯಜ್ಞೇಶ್ ಶೆಟ್ಟಿ ಅಭಿನಯಿಸಿದ್ದಾರೆ. ಹಾಸ್ಯ ಪಾತ್ರಧಾರಿಗಳಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್ ಜತೆಯಾಗುವ ಸನ್ನಿವೇಶಗಳು ನೈಜ್ಯವಾದ ಹಾಸ್ಯದ ಹೊನಲಾಗಿಸಲಿವೆ. ಶುದ್ದ ಭಾಷೆ ಬಳಕೆ, ಉತ್ತಮವಾದ ಸಂಭಾಷಣೆ, ಮನ ಮುಟ್ಟುವಂತಹ ನಟನೆಯನ್ನು ಇದು ಹೊಂದಿದೆ. ತುಳು ಸಿನೆಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಹೊಂದಿರುವ ಹೊಸತನದ ಚಿತ್ರ ಇದಾಗಿದೆ ಎಂದರು.
Related Articles
Advertisement
ಮಾನವ ಜನ್ಮ ಶ್ರೇಷ್ಟವಾದದ್ದು ನಮ್ಮ ಜೀವನದ ಅನಂತರ ಇತರರನ್ನು ನಾವು ಬದುಕಿರುವಂತೆ ಮಾಡಲು ಸಾಧ್ಯ. ಅದಕ್ಕಾಾಗಿ ಪ್ರತಿಯೊಬ್ಬರೂ ಇಂದೇ ನಿಮ್ಮ ಚರ್ಮ ಮತ್ತು ಅಂಗಾಂಗಗಳನ್ನು ದಾನ ಮಾಡುವಂತೆ ಚಿತ್ರತಂಡದ ಸದಸ್ಯರು ವಿನಂತಿಸಿಕೊಂಡರು.
ಚಿತ್ರತಂಡದ ಅಭಿಲಾಷ್, ರಾಜೇಶ್ವರಿ ಕುಲಾಲ್, ಶ್ರುತಿನ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.