Advertisement

ಶಾ ಪುತ್ರನ ಸಮರ್ಥನೆ ಬೇಕಾಗಿರಲಿಲ್ಲ: ಸಿನ್ಹಾ

07:15 AM Oct 12, 2017 | Team Udayavani |

ಪಟ್ನಾ/ಅಹಮದಾಬಾದ್‌: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪುತ್ರನನ್ನು ಸಮರ್ಥನೆ ಮಾಡಿಕೊಂಡಿದ್ದರಿಂದಾಗಿ ಪಕ್ಷ ಇದುವರೆಗೆ ಕಾಪಾಡಿಕೊಂಡು ಬಂದಿದ್ದ ಉನ್ನತ ಮಟ್ಟದ ನೈತಿಕ ವ್ಯವಸ್ಥೆ ಕೊಚ್ಚಿ ಹೋದಂತಾಗಿದೆ. ಇಂಥ ಕ್ರಮ ಬೇಕಾಗಿರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಪಕ್ಷದ ನಾಯಕರ ನಡೆಗೆ ಆಕ್ಷೇಪಿಸಿದ್ದಾರೆ.

Advertisement

ಪಾಟ್ನಾದಲ್ಲಿ ಮಾತನಾಡಿದ  ಅವರು, ಜಯ್‌ ಶಾ ವಿರುದ್ಧ ಲೇಖನ ಪ್ರಕಟಿ ಸಿದ ವೆಬ್‌ಸೈಟ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಮಾಧ್ಯಮ ಸ್ವಾತಂತ್ರ್ಯ ಕಾಪಿಡುವ ಪ್ರಯತ್ನ ಮಾಡಬಹುದಾಗಿತ್ತು ಎಂದಿದ್ದಾರೆ. 

ಈ ಮೂಲಕ ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯ ಲ್‌ರ ಕ್ರಮಕ್ಕೆ  ಆಕ್ಷೇಪ ವ್ಯಕ್ತಪಡಿಸಿದ್ದಾರೆ ಸಿನ್ಹಾ. ಅಹಮದಾಬಾದ್‌ ಕೋರ್ಟ್‌ಗೆ ಜಯ್‌ ಶಾ ಪರವಾಗಿ ಅರ್ಜಿ ಸಲ್ಲಿಸಲು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾರನ್ನು ಕರೆಯಿಸಿ ಕೊಂಡಿದ್ದು ಸರಿಯಲ್ಲ. ಇದು ತಪ್ಪು ಸಂದೇಶ ನೀಡುತ್ತದೆ ಎಂದಿದ್ದಾರೆ ಸಿನ್ಹಾ. 

ವಿಚಾರಣೆ ಮುಂದಕ್ಕೆ: ಈ ನಡುವೆ ಅಹ್ಮದಾಬಾದ್‌ನ ಮೆಟ್ರೋಪಾಲಿಟನ್‌ ಕೋರ್ಟ್‌ನಲ್ಲಿ ಅಮಿತ್‌ ಶಾ “ದ ವೈರ್‌’ ವಿರುದ್ಧ ಸಲ್ಲಿಸಿದ್ದ 100 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದೂಡಲಾಗಿದೆ. ಜಯ್‌ ಶಾ ಪರ ವಕೀಲರು ಹಾಜರಾತಿಗೆ ಹೆಚ್ಚಿನ ಸಮಯ ಕೋರಿದ್ದನ್ನು ಕೋರ್ಟ್‌ ಸಮ್ಮತಿಸಿತು.

Advertisement

Udayavani is now on Telegram. Click here to join our channel and stay updated with the latest news.

Next