Advertisement
ತಮಿಳುನಾಡು ವಿಧಾನಸಭೆ ಚುನಾವಣೆಗೆ ಉಳಿದಿರು ವುದು ಕೇವಲ ಆರು ತಿಂಗಳು ಮಾತ್ರ. ಸತತ ಮೂರನೇ ಬಾರಿಗೆ ಎಐಎಡಿಎಂಕೆ ಅಧಿಕಾರಕ್ಕೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. 2016ರಲ್ಲಿ ನಡೆದ ಚುನಾವಣೆಯಲ್ಲಿ ದಶಕಗಳ ಬಳಿಕ ದ್ರಾವಿಡ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಎಐಎಡಿಎಂಕೆ ಅಧಿಕಾರ ಉಳಿಸಿಕೊಂಡದ್ದು ಈಗ ಇತಿಹಾಸ. ಅದಕ್ಕಿಂತ ಮೊದಲು 1977ರಿಂದ 1984ರ ವರೆಗೆ ನಡೆದ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಪಕ್ಷ ಸತತವಾಗಿ ಗೆದ್ದು ಅಧಿಕಾರ ಉಳಿಸಿಕೊಂಡಿತ್ತು. 1989ರಲ್ಲಿ ನಡೆದ ಚುನಾವಣೆ ಬಳಿಕ ಒಮ್ಮೆ ಡಿಎಂಕೆ, ಮತ್ತೂಮ್ಮೆ ಎಐಎಡಿಎಂಕೆ ಪಕ್ಷಗಳನ್ನು ದ್ರಾವಿಡ ರಾಜ್ಯದ ಜನರು ಆಯ್ಕೆ ಮಾಡುತ್ತಾ ಬರುತ್ತಿದ್ದರು. 2016ರಲ್ಲಿ ಅಲ್ಲಿನ ಜನರು ಮೂವತ್ತು ವರ್ಷಗಳ ಹಿಂದಿನ ನಿಲುವು ಪುನರಾವರ್ತಿಸಿದ್ದರು. ಆದರೆ ಈ ಬಾರಿ ಹಾಗೆ ಆಗಲು ಸಾಧ್ಯವೇ ಎನ್ನುವುದು ಪ್ರಶ್ನೆ.
Related Articles
Advertisement
ಇತ್ತೀಚೆಗೆ ಕೆಲವು ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ವರದಿ ಯಾದಂತೆ, ಬಿಜೆಪಿ ವರಿಷ್ಠರು ಶಶಿಕಲಾ ಅವರು ಮತ್ತೆ ಎಐಎಡಿಎಂಕೆಗೆ ವಾಪಸಾಗಬೇಕು ಮತ್ತು ಆ ಮೂಲಕ ಡಿಎಂಕೆ ನೇತೃತ್ವದ ಪಕ್ಷಗಳಿಗೆ ಪ್ರಬಲ ಶಕ್ತಿಯಾಗಿ ನಿಲ್ಲ ಬೇಕು ಎಂಬ ಒತ್ತಾಸೆ ಹೊಂದಿತ್ತು. ಸದ್ಯ ಅಮಿತ್ ಶಾ ಕೈಗೊಂಡಿರುವ ಪ್ರವಾಸದ ವೇಳೆ ಈ ಅಂಶವನ್ನು ಹಾಲಿ ಎಐಎಡಿಎಂಕೆ ನಾಯಕರ ಬಳಿ ಚರ್ಚೆ ಮಾಡಿದ್ದಾ ರೆಯೋ ಇಲ್ಲವೋ ಗೊತ್ತಿಲ್ಲ. ಹಾಗೆ ಆಗಿದ್ದೇ ಆದರೆ ಶಶಿಕಲಾ ಮರು ಸೇರ್ಪಡೆ ಎಂಬ ವರದಿ ದೃಢವಾದಂತೆ ಆಗುತ್ತದೆ. ಏಕೆಂದರೆ ರಾಜಕೀಯ ಎಂಬ ನೀರು, ಪಾತ್ರೆ ಇರುವಂತೆ ಆಕಾರ ತಳೆಯುತ್ತದೆ ಎನ್ನುವುದು ನಿರ್ವಿಕಲ್ಪಿತ ಸತ್ಯ. ಅದುವೇ ತಮಿಳುನಾಡಲ್ಲಿ ಆಗುತ್ತಿರುವುದು.
ಗೃಹ ಸಚಿವ ಅಮಿತ್ ಶಾ ಚೆನ್ನೈ ಪ್ರವಾಸ ಕೈಗೊಳ್ಳು ವುದಕ್ಕೆ ಮೂರು ದಿನಗಳ ಮೊದಲು ಮಾಧ್ಯಮಗಳಲ್ಲಿ ವರದಿಯಾದಂತೆ ಮಾಜಿ ಸಚಿವ ಎಂ.ಕೆ.ಅಳಗಿರಿ ಹೊಸ ಪಕ್ಷ ಸ್ಥಾಪಿಸಿ, ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡು ತ್ತಾರೆ ಎಂದು ಪ್ರಚಾರವಾಯಿತು. ಹೊಸ ಪಕ್ಷ ಸ್ಥಾಪನೆ ಮತ್ತು ಬಿಜೆಪಿ ಜತೆಗೆ ಕೈಜೋಡಿಸುವುದು, ನ.21ರಂದು ಅಮಿತ್ ಶಾ ಜತೆಗೆ ಮಾತುಕತೆ ಇಲ್ಲ ವೆಂದು ಅಳಗಿರಿ ಹೇಳಿಕೊಂಡಿದ್ದರೂ, ಬೆಂಕಿ ಇರುವುದರ ಬಗ್ಗೆ ಹೊಗೆಯಾಡುತ್ತಿತ್ತು. ಅದಕ್ಕೆ ಪೂರಕವಾಗಿ ಶನಿವಾರ ಅಳಗಿರಿ ಆಪ್ತ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಕೆ.ಪಿ.ರಾಮಲಿಂಗಮ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ ಮಾತೆಂದರೆ ಅಳಗರಿಯನ್ನೂ ಕರೆ ತರುವಂತೆ ಮಾಡುತ್ತೇನೆ ಎಂದು. ಅದು ಕಾರ್ಯಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಆ ರೀತಿ ಆದರೆ, ಶಶಿಕಲಾರನ್ನು ಮತ್ತೆ ಎಐಎಡಿಎಂಕೆಗೆ ಕರೆತರುವ ಪ್ರಯತ್ನದಲ್ಲಿ ಬಿಜೆಪಿ ಯಶಸ್ಸು ಕಾಣದ್ದರಿಂದ ಅಳಗಿರಿಯವರಿಗೆ ಬಿಜೆಪಿಗೆ ಗಾಳ ಹಾಕಿದೆ ಎಂದರ್ಥ.
ಡಿಎಂಕೆಯಲ್ಲಿ ಅಳಗಿರಿ ಇದ್ದಾಗಲೇ ಅವರ ಪ್ರಭಾವ ಕೇವಲ ತಮಿಳುನಾಡಿನ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಮಾತ್ರ ಇತ್ತು. ಅವರಿಗೆ ಇರುವ ಕೊರತೆ ಎಂದರೆ ತಮಿಳು ಬಿಟ್ಟು ಬೇರೆ ಭಾಷೆಯೇ ಗೊತ್ತಿಲ್ಲ. ಸ್ಟಾಲಿನ್ ವ್ಯಕ್ತಿತ್ವ ಹಾಗಲ್ಲ. ಔತ್ತರೇಯ ನಾಯಕರಲ್ಲಿ ವ್ಯವಹರಿ ಸುವ ಪ್ರಾಥಮಿಕ ಭಾಷಾ ಜ್ಞಾನ ಹೊಂದಿದ್ದಾರೆ ಮತ್ತು ಎಲ್ಲÉ ಜಿಲ್ಲಾ ಡಿಎಂಕೆ ಘಟಕಗಳಲ್ಲಿ ಹಿಡಿತ ಹೊಂದಿದ್ದಾರೆ. ಸ್ಟಾಲಿನ್ ವರ್ಸಸ್ ಅಳಗಿರಿ ಎಂದು ನೋಡಿದರೆ ನಾಯಕತ್ವದಲ್ಲಿ ಸ್ಟಾಲಿನ್‌ಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಹೀಗಿರುವಾಗ ಸೀಮಿತ ಪ್ರಭಾವಳಿ ಹೊಂದಿದ ಅಳಗಿರಿಗೆ ಬಿಜೆಪಿ ಕೆಂಪು ಹಾಸಿನ ಸ್ವಾಗತ ನೀಡುತ್ತದೆ ಎಂದಾದರೆ ಅದರ ಹಕೀಕತ್ತು ಬೇರೆಯೇ ಇದೆ ಎಂದು ಅರ್ಥ ಮಾಡಿಕೊಳ್ಳಲೇಬೇಕು.
ತಮಿಳುನಾಡು ಚುನಾವಣೆಯಲ್ಲಿ ಕರ್ನಾಟಕಕ್ಕೆ ಸಂಬಂಧಪಡುವ ಕೆಲವು ಅಂಶಗಳು ಇವೆ. ಅವುಗ ಳೆಂದರೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವ ಮಾಜಿ ಸಚಿವ ಸಿ.ಟಿ.ರವಿ ಆ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ಅವರಿಗೆ ಇದೊಂದು ಪರೀಕ್ಷೆ. ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದ ಇಬ್ಬರು ಅಧಿಕಾರಿಗಳು ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರೇ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಿದ್ದರೆ, ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಕಾಂಗ್ರೆಸ್ ತೆಕ್ಕೆಯಲ್ಲಿದ್ದಾರೆ. ಅವರಿಬ್ಬರು ಎರಡೂ ಪಕ್ಷಗಳಿಗೆ ಎಷ್ಟು ನೆರವಾಗಲಿದ್ದಾರೆಯೋ ಗೊತ್ತಿಲ್ಲ.
ಸಿನೆಮಾ ನಟರೇ ರಾಜಕೀಯ ಕ್ಷೇತ್ರವನ್ನು ದ್ರಾವಿಡ ರಾಜ್ಯದಲ್ಲಿ ಆಳಿದ್ದಾರೆ. ಅದರ ಪ್ರಭಾವಳಿ ಎಷ್ಟು ಉಳಿದಿದೆ ಎಂಬುದನ್ನೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನೋಡಲಾಗುತ್ತದೆ. ಬಹುಭಾಷಾ ತಾರೆ ಕಮಲ್ ಹಾಸನ್ ರಾಜಕೀಯ ಪ್ರವೇಶ ಮಾಡಿ ಮಕ್ಕಳ್ ನೀತಿ ಮಯ್ಯಂ ಪಕ್ಷ ಸ್ಥಾಪಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಬಳಿಕ ತಣ್ಣಗಾಗಿದ್ದ ಹಾಸನ್ ಸಕ್ರಿಯರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರೇ ಉದ್ಘೋಷಿಸಿದ್ದಂತೆ ಜನರೇ ಅವರ ಮಿತ್ರಪಕ್ಷಗಳಂತೆ. ಹೀಗಾಗಿ ಸದ್ಯಕ್ಕೆ ಯಾವ ಪಕ್ಷದ ಜತೆಗೂಡುವ ಸೂಚನೆಯನ್ನು ಹಾಸನ್ ನೀಡಿಲ್ಲ. ಮುಂದೆ ಈ ನಿಲುವಿನಲ್ಲಿ ಬದಲಾದರೂ ಆಗಬಹುದು.
ರಾಜಕೀಯ ಪ್ರವೇಶದ ಘೋಷಣೆ ಮಾಡಿದ್ದ ತಲೈವಾ ರಜನಿಕಾಂತ್ ಹಿಂದೇಟು ಹಾಕಿದಂತಿದೆ. ಅದಕ್ಕೆ ಕಾರಣವೂ ಇದೆ. ಅವರೇ ಹೇಳಿಕೊಂಡಂತೆ ವೈದ್ಯರ ಸಲಹೆ ಕಾರಣದಿಂದ ಪಕ್ಷ ಸ್ಥಾಪನೆ ಮತ್ತು ಸಕ್ರಿಯ ರಾಜ ಕಾರಣ ನಡೆಸುವುದು ಕಷ್ಟವೆಂದು ಹೇಳಲಾಗುತ್ತಿದೆ. ಅದೇನೇ ಇರಲಿ ಈಗ ಇರುವುದು 2020. ತಮಿಳು ನಾಡು ವಿಧಾನ ಕದನದ ಸ್ಪಷ್ಟ ಚಿತ್ರಣ ಬರಬೇಕೆಂದರೆ ಜನವರಿ 15 ಕಳೆಯಬೇಕು. ಏಕೆಂದರೆ ಆ ವೇಳೆಗೆ ಸಹಜವಾಗಿ ಕಣ ರಂಗೇರಿರುತ್ತದೆ. ಒಂದಂತೂ ಸ್ಪಷ್ಟ. ಕೇಂದ್ರದಲ್ಲಿನ ಸರಕಾರ ನಿಯಂತ್ರಿ ಸುತ್ತಿದ್ದ ತಮಿಳುನಾಡು ದಿಲ್ಲಿ ನಿಯಂತ್ರಿತವಾಗುತ್ತಿದೆ.
ಸದಾಶಿವ. ಕೆ