Advertisement

ಶಾಹಡ್‌ ಶ್ರೀ ಮೂಕಾಂಬಿಕಾ ದೇವಿ ಮಂದಿರದ ವಾರ್ಷಿಕೋತ್ಸವ, ಧಾರ್ಮಿಕ ಸಭೆ

04:28 PM Jun 09, 2017 | Team Udayavani |

ಕಲ್ಯಾಣ್‌: ತುಳುನಾಡಿನ ಮಣ್ಣಿನ ಪರಿಮಳವನ್ನು ಕರ್ಮಭೂಮಿ ಮರಾಠಿ ಮಣ್ಣಿನಲ್ಲೂ ಪಸರಿಸುವ ಕಾರ್ಯದಲ್ಲಿ ನಿರತವಾಗಿರುವ ಇಲ್ಲಿನ ಕನ್ನಡಿಗರ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಸೇವೆ ಅನುಪಮವಾಗಿದೆ. ಶಾಹಡ್‌ನ‌ ಈ ಸ್ಥಳದಲ್ಲಿ ಶ್ರೀ ನಿತ್ಯಾನಂದ ಭಜನ ಮಂಡಳಿಯ ಮುಖಾಂತರ ಶ್ರೀ ಮೂಕಾಂಬಿಕಾ ದೇವಿಯನ್ನು ಒಲಿಸಿಕೊಂಡು ಮಂದಿರವನ್ನು ನಿರ್ಮಾಣಗೈದು ಆ ಮುಖಾಂತರ ಶೈಕ್ಷಣಿಕ ಕಾರ್ಯಗಳಿಗೆ ನೆರವು ನೀಡಿದ ಕೀರ್ತಿ ಈ ಮಂಡಳಿಯ ಕಾರ್ಯಕಾರಿ ಸಮಿತಿಗಿದೆ. ಇಲ್ಲಿನ ಯುವಶಕ್ತಿ ಮತ್ತು ಮಹಿಳಾ ಶಕ್ತಿ ದೇವಸ್ಥಾನದ ಮುಂದಿನ ಯೋಜನೆಯ ಬೃಹತ್‌ ಶಕ್ತಿಯಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಇಂದು ಸಮ್ಮಾನಿಸಿದ್ದು ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಮಂದಿರದಿಂದ ನಿರಂತರವಾಗಿ ನಡೆಯುತ್ತಿರಲಿ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.
ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಸ್ಥಾನದ 55ನೇ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪ್ರತಿಷ್ಠಾವರ್ಧಂತ್ಯುತ್ಸವ ಸಮಾರಂಭದ ಸಂದರ್ಭದಲ್ಲಿ ಜೂ. 4ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಂತಹ ಸಮಾಜ ಪರ ಕಾರ್ಯಗಳಿಗೆ ನಮ್ಮಿಂದಾದ ಸಹಕಾರವನ್ನು ನೀಡಬೇಕು. ಧರ್ಮದಿಂದ ನಡೆದಾಗ ಆ ಧರ್ಮವೇ ನಮ್ಮನ್ನು ಕಾಪಾಡುತ್ತದೆ. ಅದೇ ರೀತಿ ಮೂಕಾಂಬಿಕೆಯ ಅನುಗ್ರಹದೊಂದಿಗೆ ಶಾಹಡ್‌ನ‌ಲ್ಲಿ ಧರ್ಮವನ್ನು ರಕ್ಷಿಸುವ ಕಾರ್ಯವು ನಿರಂತರವಾಗಿ ಜರಗುತ್ತಿರಲಿ ಎಂದು ನುಡಿದು ಸಮ್ಮಾನಿತರನ್ನು ಅಭಿನಂದಿಸಿ ಶುಭಹಾರೈಸಿದರು.

Advertisement

ನಗರ ಸೇವಕ ದಿಲೀಪ್‌ ಗಾಯಕ್ವಾಡ್‌ ಅವರು ಮಾತನಾಡಿ, ಶ್ರೀ ಮೂಕಾಂಬಿಕೆಯ ಅನುಗ್ರಹದಿಂದ ಈ ಪರಿಸರದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ನೆರವನ್ನು ನೀಡುತ್ತಿರುವುದು ಶ್ಲಾಘನೀಯ. ನಿಮ್ಮ ಕನ್ನಡಿಗ ಉದ್ಯಮಿಗಳು ಇಲ್ಲಿ ಕಷ್ಟಪಟ್ಟು ದುಡಿದು ಯಶಸ್ಸನ್ನು ಕಂಡವರು. ಕನ್ನಡಿಗರು ಇತರ ಭಾಷಿಗರಿಗೆ ಮಾದರಿಯಾಗಿದ್ದಾರೆ. ದೇವಸ್ಥಾನಕ್ಕೆ ನನ್ನಿಂದಾಗುವ ಎಲ್ಲ ರೀತಿಯ ಸಹಾಯ, ಸಹಕಾರ ದೊರೆಯಲಿ ಎಂದರು.

ಸಮಾರಂಭದಲ್ಲಿ ಶಿಕ್ಷಣ ತಜ್ಞ ಡಾ| ಸುರೇಂದ್ರ ವಿ. ಶೆಟ್ಟಿ ದಂಪತಿ,  ಸಮಾಜ ಸೇವಕಿ ಚಿತ್ರಾ ಆರ್‌. ಶೆಟ್ಟಿ, ವಾಮನ್‌ ಶೆಟ್ಟಿ ಹಾಗೂ ಯಕ್ಷಗಾನ ಗುರು ಕಟೀಲು ಸದಾನಂದ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಸಮ್ಮಾನಿತರು ಮಾತನಾಡಿದರು. ಮಂದಿರದ ಅಧ್ಯಕ್ಷ ಕೃಷ್ಣ ಪೂಜಾರಿ ಅವರು ಸ್ವಾಗತಿಸಿದರು. ಕಡ್ತಲ ಕೃಷ್ಣ ನಾಯಕ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಟೀಲು ಸದಾನಂದ ಶೆಟ್ಟಿ, ಜಗದೀಶ್‌ ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು, ಸೇವಾಕರ್ತರನ್ನು ಪುಷ್ಪಗುತ್ಛವನ್ನಿತ್ತು ಸತ್ಕರಿಸಲಾಯಿತು.

ಪ್ರಾರಂಭದಲ್ಲಿ ಮಹಿಳಾ ವಿಭಾಗದಿಂದ ಪ್ರಾರ್ಥನೆ ನಡೆಯಿತು. ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಅಣ್ಣಿ ಸಿ. ಶೆಟ್ಟಿ, ಗೋವಿಂದ ಶೆಟ್ಟಿ, ಶಂಕರನಾರಾಯಣ ತಂತ್ರಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಶೆಟ್ಟಿ, ಅಧ್ಯಕ್ಷ ಕೃಷ್ಣ ಪೂಜಾರಿ, ನಗರ ಸೇವಕ ದಿಲೀಪ್‌ ಗಾಯಕ್ವಾಡ್‌, ಕಾರ್ಯದರ್ಶಿ ಮುದ್ದು ಕೋಟ್ಯಾನ್‌, ಕೋಶಾಧಿಕಾರಿ ಮೋನಪ್ಪ ಪೂಜಾರಿ ಉಪಸ್ಥಿತರಿದ್ದರು. ಕೇಂಜ ಅನಿಲ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಗದೀಶ್‌ ಶೆಟ್ಟಿ ವಂದಿಸಿದರು. ದೇವಾನಂದ ಕೋಟ್ಯಾನ್‌ ಬಳಗದವರಿಂದ ಭಜನೆ, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿ ಸಾಕಿನಾಕಾ ಅವರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next