Advertisement

ಶಾಹಡ್‌ ಶ್ರೀ ಮೂಕಾಂಬಿಕಾ ದೇವಿ ಮಂದಿರದಲ್ಲಿ  ಸಾಧಕರಿಗೆ ಸಮ್ಮಾನ

04:46 PM Jun 09, 2017 | |

ಕಲ್ಯಾಣ್‌: ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶಾಹಡ್‌ ಶ್ರೀ ಮೂಕಾಂಬಿಕಾ ದೇವಸ್ಥಾನದ 55ನೇ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪ್ರತಿಷ್ಠಾ ವರ್ಧಂತ್ಯುತ್ಸವ ಸಮಾರಂಭದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಾಧಕರನ್ನು ಸಮ್ಮಾನಿಸಲಾಯಿತು.

Advertisement

ಸಮಾರಂಭದಲ್ಲಿ ಶಿಕ್ಷಣ ತಜ್ಞ ಡಾ| ಸುರೇಂದ್ರ ವಿ. ಶೆಟ್ಟಿ ದಂಪತಿ,  ಸಮಾಜ ಸೇವಕಿ ಚಿತ್ರಾ ಆರ್‌. ಶೆಟ್ಟಿ, ವಾಮನ್‌ ಶೆಟ್ಟಿ ಹಾಗೂ ಯಕ್ಷಗಾನ ಗುರು ಕಟೀಲು ಸದಾನಂದ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಣ ಪ್ರೇಮಿ, ದಾನಿ ಡಾ| ಸುರೇಂದ್ರ ಶೆಟ್ಟಿ ಅವರು, ತಾಯಿ ಶ್ರೀ ಮೂಕಾಂಬಿಕೆಯ ಕ್ಷೇತ್ರ ಪುರಾತನ ಹಾಗೂ ಕಾರಣಿಕ ಕ್ಷೇತ್ರವಾಗಿದೆ. ಇಲ್ಲಿ ತಾಯಿ ನಮ್ಮ ಮನಸ್ಸಿನ ಇಚ್ಛೆಯನ್ನು ಈಡೇರಿಸುತ್ತಾಳೆ. ಧಾರ್ಮಿಕ ಕೆಲಸದೊಂದಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವ 

ನಿಮಗೆ ಅಭಿನಂದನೆಗಳು. ಈ ಸಮ್ಮಾನ ತಾಯಿ ಮೂಕಾಂಬಿಕೆಯ ಪ್ರಸಾದವೆಂದು ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.
ಮತ್ತೋರ್ವ ಸಮ್ಮಾನಿತೆ ಓಂ ಶಕ್ತಿ ಮಹಿಳಾ ಸಂಸ್ಥೆಯ ಸ್ಥಾಪಕಿ ಚಿತ್ರಾ ಆರ್‌. ಶೆಟ್ಟಿ ಅವರು ಮಾತನಾಡಿ, ಮೂಕಾಂಬಿಕೆಯ ಅನುಗ್ರಹ ಹಾಗೂ ಓಂ ಶಕ್ತಿ ಮಹಿಳಾ ಸಂಸ್ಥೆಯ ಕಾರ್ಯಕರ್ತರ ಸಹಕಾರದಿಂದ ನಮ್ಮಿಂದ ಸಮಾಜಪರ ಕಾರ್ಯಕ್ರಮಗಳು ನಡೆಯಲು ಸಾಧ್ಯವಾಗುತ್ತಿದೆ. ಈ ಸಮ್ಮಾನವನ್ನು ಓಂ ಶಕ್ತಿ ಮಹಿಳಾ ಸಂಸ್ಥೆಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದರು.

ಸಮ್ಮಾನಿತ ಉದ್ಯಮಿ ವಾಮನ್‌ ಶೆಟ್ಟಿ ಅವರು ಮಾತನಾಡಿ, ನಾನು ಶಾಹಡ್‌ ಪರಿಸರವನೇ ಆಗಿದ್ದೇನೆ. ಇಲ್ಲಿ ತಾಯಿ ಮೂಕಾಂಬಿಕೆಯ ಅನುಗ್ರಹದಿಂದ ಎಲ್ಲರೂ ಸಾಮರಸ್ಯ ಹಾಗೂ ಅನ್ಯೋನ್ಯವಾಗಿದ್ದೇವೆ ಎನ್ನಲು ಸಂತೋಷವಾಗುತ್ತಿದೆ ಎಂದರು. ಸಮ್ಮಾನಿತ ಯಕ್ಷಗಾನ ಗುರು ಕಟೀಲು ಸದಾನಂದ ಶೆಟ್ಟಿ ಮಾತನಾಡಿ, 1977ರಿಂದ ಈ ಕ್ಷೇತ್ರಕ್ಕೆ ಬಂದು ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಇಂದಿನ ಸಮ್ಮಾನವನ್ನು ಶ್ರೀ ಮೂಕಾಂಬಿಕೆಯ ಪ್ರಸಾದವೆಂದು ಸ್ವೀಕರಿಸಿ ಈ ಸಮ್ಮಾನವನ್ನು ಎಲ್ಲಾ ಯಕ್ಷಗಾನ ಕಲಾವಿದರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ  ನಗರ ಸೇವಕ ದಿಲೀಪ್‌ ಗಾಯಕ್ವಾಡ್‌, ಮಂದಿರದ ಅಧ್ಯಕ್ಷ ಕೃಷ್ಣ ಪೂಜಾರಿ, ಗೋವಿಂದ ಶೆಟ್ಟಿ, ಶಂಕರನಾರಾಯಣ ತಂತ್ರಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಶೆಟ್ಟಿ, ಅಧ್ಯಕ್ಷ ಕೃಷ್ಣ ಪೂಜಾರಿ, ನಗರ ಸೇವಕ ದಿಲೀಪ್‌ ಗಾಯಕ್ವಾಡ್‌, ಕಾರ್ಯದರ್ಶಿ ಮುದ್ದು ಕೋಟ್ಯಾನ್‌, ಕೋಶಾಧಿಕಾರಿ ಮೋನಪ್ಪ ಪೂಜಾರಿ, ಕೇಂಜ ಅನಿಲ್‌ ಶೆಟ್ಟಿ, ಜಗದೀಶ್‌ ಶೆಟ್ಟಿ, ದೇವಾನಂದ ಕೋಟ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next