Advertisement
ಕಳೆದ ವರ್ಷ ಇರ್ಮ ಮತ್ತು ಮರಿಯಾ ಚಂಡಮಾರುತಕ್ಕೆ ತತ್ತರಿಸಿ ಹಾನಿಗೊಳಗಾಗಿರುವ ವೆಸ್ಟ್ ಇಂಡೀಸಿನ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳ ಮರು ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಈ ಪಂದ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಸಿಸಿ ತಿಳಿಸಿದೆ.
ಇಂಥದ್ದೊಂದು ಅವಕಾಶ ದೊರಕಿರುವುದಕ್ಕೆ ನಾನು ವಿನೀತನಾಗಿದ್ದೇನೆ. ಕ್ರಿಕೆಟ್ ಎನ್ನುವುದೊಂದು ದೊಡ್ಡ ಕುಟುಂಬವಿದ್ದಂತೆ. ಎಷ್ಟೇ ಕಷ್ಟವಾದರೂ ನಾವು ಪರಸ್ಪರ ಆಡುತ್ತೇವೆ. ಕ್ರಿಕೆಟ್ ಆಡುವ ನಮ್ಮ ಗುಂಪಿನಲ್ಲಂತೂ ಹೆಬ್ಬಯಕೆಗಳಿವೆ… ಎಂದು ಅಫ್ರಿದಿ ಹೇಳಿದರು. ಐಸಿಸಿ ವಿಶ್ವ ಇಲೆವೆನ್ ತಂಡವನ್ನು ಇಂಗ್ಲೆಂಡಿನ ಎವೋನ್ ಮಾರ್ಗನ್ ಮುನ್ನಡೆಸಲಿದ್ದಾರೆ. ವೆಸ್ಟ್ ಇಂಡೀಸ್ ತಂಡದಿಂದ ನಿಷೇಧಕ್ಕೊಳಗಾಗಿದ್ದ ಆ್ಯಂಡ್ರೆ ರಸೆಲ್ ಅವರೂ ಈ ದೇಣಿಗೆ ಸಂಗ್ರಹ ಪಂದ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.