Advertisement

ಮಗಳು “ಆರತಿ’ಎತ್ತಿದ್ದಕ್ಕೆ ಸಿಟ್ಟಾಗಿ ಟೀವಿಯನ್ನೇ ಪುಡಿಮಾಡಿದ್ದ ಅಫ್ರಿದಿ

12:34 PM Dec 30, 2019 | keerthan |

ಕರಾಚಿ: ಪಾಕಿಸ್ತಾನದಲ್ಲಿ ಏನು ಬೇಕಾದರೂ ನಡೆಯಬಹುದು ಅನ್ನುವುದಕ್ಕೆ ಇಲ್ಲೊಂದು ಸುದ್ದಿ ತಾಜಾ ಉದಾಹರಣೆಯಾಗಿದೆ. ಹೌದು, ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಹೇಳಿರುವ ಹೇಳಿಕೆ ವಿಡಿಯೋವೊಂದು ವೈರಲ್‌ ಆಗಿದೆ. ಹಾಗಿದ್ದರೆ ವಿಡಿಯೋದಲ್ಲಿ ಅಂತಹದ್ದೇನಿದೆ? ಎನ್ನುವ ಕುತೂಹಲದಲ್ಲಿ ಎಲ್ಲರು ವೀಕ್ಷಿಸುತ್ತಿದ್ದಾರೆ.

Advertisement

ಏನಿದೆ ವಿಡಿಯೋದಲ್ಲಿ?: ಪಾಕಿಸ್ತಾನಿ ಟೀವಿ ಆ್ಯಂಕರ್‌ ನಿದಾ ಯಾಸೀರ್‌ ಜತೆ ಶಾಹಿದ್‌ ಅಫ್ರಿದಿ ಸಂದರ್ಶನ ನಡೆಸುತ್ತಿರುವ ವಿಡಿಯೋ ಇದಾಗಿದೆ. ಸಂದರ್ಶನದಲ್ಲಿನಿದಾ ಜತೆಗೆ ಮಾತನಾಡಿರುವ ಅಫ್ರಿದಿ ತಾನೆಷ್ಟು ಹಿಂದೂ ಧರ್ಮ ವಿರೋಧಿ ಎನ್ನುವುದನ್ನು ತೋರಿಸಿದ್ದಾರೆ. “ಒಂದು ದಿನ ನಾನು ಮನೆಯಲ್ಲಿ ಟೀವಿ ನೋಡುತ್ತಿದ್ದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮದ ಆಚರಣೆಯ ಆರತಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದನ್ನು ವೀಕ್ಷಿಸಿದ ನನ್ನ ಮಗಳು ಅದೇ ರೀತಿಯಾಗಿ ಆರತಿ ಬೆಳಗಲು ಅಭ್ಯಾಸ ಮಾಡ ತೊಡಗಿದಳು. ಇದರಿಂದ ಸಿಟ್ಟಾಗಿ ಮನೆಯಲ್ಲಿದ್ದ ಟೀವಿಯನ್ನು ಎತ್ತಿ ಬಿಸಾಕಿ ಪುಡಿಪುಡಿ ಮಾಡಿದ್ದೆ’ ಎಂದು ಹೇಳಿಕೊಂಡಿದ್ದಾರೆ.

ಪಾಕ್‌ ತಂಡದ ಪರ 10 ವರ್ಷ ಕ್ರಿಕೆಟ್‌ ಆಡಿದ್ದ ದನೀಷ್‌ ಕನೇರಿಯ ಹಿಂದೂ ಧರ್ಮಿಯ ಎನ್ನುವ ಕಾರಣಕ್ಕೆ ಸ್ವತಃ ಪಾಕ್‌ ತಂಡದ ಕೆಲವು ಆಟಗಾರರಿಂದ ಶೋಷಣೆಗೆ ಒಳಗಾಗಿದ್ದರು ಎಂದು ಪಾಕ್‌ ಬೌಲರ್‌ ಶೋಯಿಬ್‌ ಅಖ್ತರ್‌ ಹೇಳಿ ಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಅಫ್ರಿದಿ ಮತ್ತೂಂದು ಧರ್ಮವನ್ನು ಕೆಟ್ಟದಾಗಿ ಕಂಡಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next