Advertisement

ಶಹಾಪುರ: ಜ.15 ರಂದು ಜೋಡು ಪಲ್ಲಕ್ಕಿ ಉತ್ಸವ

02:55 PM Jan 10, 2023 | Team Udayavani |

ಶಹಾಪುರ: ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಅಂಗವಾಗಿ ಸಗರನಾಡಿನ ಆರಾಧ್ಯ ದೇವರಾದ ಭೀಮರಾಯನ ಗುಡಿಯ ಬಲಭೀಮೇಶ್ವರ ಹಾಗೂ ದಿಗ್ಗಿಯ ಸಂಗಮೇಶ್ವರರ ಜೋಡು ಪಲ್ಲಕ್ಕಿಯು ಜನವರಿ 15 ರಂದು ಬೆಳಗ್ಗೆ 5.30 ಕ್ಕೆ ದಿಗ್ಗಿ ಅಗಸಿ ಮೂಲಕ ಎರಡು ಪಲ್ಲಕ್ಕಿಗಳು ಪುರ ಪ್ರವೇಶ ಮಾಡಲಿವೆ.

Advertisement

ನಗರದ ದಿಗ್ಗಿ ಅಗಸಿ, ಗಾಂಧಿ ಚೌಕ ಮಾರ್ಗವಾಗಿ ಮೋಚಿಗಡ್ಡಾ, ಬಸವೇಶ್ವರ ವೃತ್ತದ ಮೂಲಕ ಹಳಿಸಗರ ಮಾರ್ಗವಾಗಿ ಹುರಸಗುಂಡಗಿ ಗ್ರಾಮ ಸಮೀಪದ ಭೀಮಾ ನಂದಿಯಲಿ ಸಾಂಪ್ರದಾಯಿಕ ಗಂಗಾ ಸ್ನಾನ ನಡೆಯಲಿದೆ ಎಂದು ತಾಲೂಕಾಡಳಿತ ತಿಳಿಸಿದೆ.

ಅಲ್ಲದೆ ಅದೇ ದಿನ ರಾತ್ರಿ ಮತ್ತೆ ವಾಪಸ್ ನಗರ ಪ್ರವೇಶಿಸಿ ಸ್ಥಳೀಯ ಮಾರುತಿ ಮಂದಿರ ಕಟ್ಟೆಯಲ್ಲಿ ವಿಶ್ರಾಂತಿ ಪಡೆದು ಎಂದಿನ ಪದ್ಧತಿಯಂತೆ ಅಲ್ಲಿ ಭಕ್ತಾಧಿಗಳಿಂದ ಪೂಜೆ-ಪುನಸ್ಕಾರ‌ ನಡೆದು, ಸಾವಿರಾರು ಭಕ್ತರಿಗೆ ದರ್ಶನ ನೀಡಿ ಅಲ್ಲಿಂದ ಪಾರಂಪರಿಕ‌ ದೀವಟಿಗೆಗಳ‌ ಸಾಲು, ವಿದ್ಯುತ್ ದೀಪಗಳ ಸಾಲಿನೊಂದಿಗೆ ಹಲಗೆ ಸೇರಿದಂತೆ ವಿವಿಧ ವಾದ್ಯಗಳ ನಿನಾದನೊಂದಿಗೆ ಭಕ್ತರ ಭಜನೆ, ಹರ್ಷದ್ಗೋರ,‌ ಜೈಕಾರದೊಂದಿಗೆ ಮೆರವಣಿಗೆ ಹೊರಟು ಮರುದಿನ ಬೆಳಗಿನ ಜಾವ ಅಂದರೆ ಜ. 16 ರ‌ ಬೆಳಗ್ಗೆ ದಿಗ್ಗಿ ಅಗಸಿ ಮೂಲಕ‌ ಎರಡು ಪಲ್ಲಕ್ಕಿಗಳು ತಮ್ಮ ಮೂಲ ಸ್ಥಾನ ಆಯಾ ಮಂದಿರಗಳಿಗೆ ತೆರಳಲಿವೆ.

ಕಳೆದ ಬಾರಿ ಕೋವಿಡ್ ಹಿನ್ನೆಲೆ‌ ಜೋಡು ಪಲ್ಲಕ್ಕಿ ಮೆರವಣಿಗೆ, ಜಾತ್ರೆ ನಡೆಯಲಿಲ್ಲ. ಹಾಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ‌ ಇದ್ದು, ಎಂದಿನಂತೆ ಭಕ್ತರ ಸೇವೆಗೆ ತಾಲೂಕಾಡಳಿತ ಮತ್ತು ಆಯಾ ಮಂದಿರದ ಸೇವಾ ಮಂಡಳಿ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರರು ಹಾಗೂ ಭಕ್ತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next