ಮುಂಬಯಿ: ಇಂದು 100 ಕ್ಕೂ ಹೆಚ್ಚಿನ ದೇಶಗಳಲ್ಲಿ ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಸಿನಿಮಾ ರಿಲೀಸ್ ಆಗಿದೆ. ಅಡ್ವಾನ್ಸ್ ಟಿಕೆಟ್ ಬುಕ್ ನಲ್ಲಿ ದಾಖಲೆ ಬರೆದು ಚಿತ್ರ ಥಿಯೇಟರ್ ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಒಂದಷ್ಟು ವಿವಾದಗಳಿಂದ ಸುದ್ದಿಯಾದ ʼಪಠಾಣ್ʼ ಸಿನಿಮಾ ಥಿಯೇಟರ್ ಗೆ ಲಗ್ಗೆಯಿಟ್ಟ ಬಳಿಕ ಯಾವ ರೀತಿಯಲ್ಲಿ ಸದ್ದು ಮಾಡುತ್ತದೆ ನೋಡಬೇಕಿದೆ. ಬಹು ಸಮಯದ ನಂತರ ಸ್ಕ್ರೀನ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ಹಿಟ್ ಜೋಡಿ ದೀಪಿಕಾ – ಶಾರುಖ್ ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾದು ಟಿಕೆಟ್ ಖರೀದಿಸಿದ್ದಾರೆ.
ಎಷ್ಟೇ ಮುಂಜಾಗ್ರತೆ ವಹಿಸಿದರೂ ದೊಡ್ಡ ಸ್ಟಾರ್ ಗಳ ಬಹು ನಿರೀಕ್ಷಿತ ಸಿನಿಮಾಗಳು ಆನ್ಲೈನ್ ನಲ್ಲಿ ಲೀಕ್ ಮಾಡುವ ಒಂದು ವರ್ಗ ಬೆಳೆಯುತ್ತಲೇ ಇದೆ. ಈಗ ಈ ಜಾಲ ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾದ ಮೇಲೂ ಕಣ್ಣಿಟ್ಟಿದೆ.
ಇದನ್ನೂ ಓದಿ: ಬರಲಿದೆ ದೇಶೀಯ ಆಪರೇಟಿಂಗ್ ಸಿಸ್ಟಮ್: ಏನಿದು ಉಚಿತವಾಗಿ ಬಳಸಬಹುದಾದ ಭಾರ್ ಒಎಸ್?
Related Articles
ಟೈಮ್ಸ್ ನೌ ವರದಿ ಮಾಡಿರುವ ಪ್ರಕಾರ ಈಗಾಗಲೇ ಅಂದರೆ ಥಿಯೇಟರ್ ರಿಲೀಸ್ ಆಗುವ ಕೆಲವೇ ಗಂಟೆಗಳ ಮೊದಲು ʼಪಠಾಣ್ʼ ಸಿನಿಮಾ ಡಿವಿಡಿ ಹಾಗೂ ಸ್ವಲ್ಪ ಎಚ್ ಡಿ ಕ್ವಾಲಿಟಿ ಇರುವ ಪ್ರಿಂಟ್ ಗಳು ಲೀಕ್ ಆಗಿದೆ. ಫಿಲ್ಮಿ ಝಿಲ್ಲಾ, ಫಿಲ್ಮಿ4ವೆಪ್ ಎನ್ನುವ ಸೈಟ್ ಗಳಲ್ಲಿ ಲೀಕ್ ಆಗಿದೆ ಎಂದು ವರದಿ ತಿಳಿಸಿದೆ.
ಸಿನಿಮಾ ತಂಡ ಥಿಯೇಟರ್ ನಲ್ಲಿ ಯಾರೂ ಕೂಡ ಸಿನಿಮಾದ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಬೇಡಿ ಎಂದು ಮನವಿ ಮಾಡಿ, ಅದಕ್ಕೆ ತಕ್ಕ ಎಚ್ಚರಿಕೆಯನ್ನು ವಹಿಸಿದ್ದಾರೆ. ಆದರೂ ಸಿನಿಮಾ ಲೀಕ್ ಆಗಿದೆ.
ಇನ್ನೊಂದೆಡೆ ರಿಲೀಸ್ ಗೂ ಮೊದಲೇ ಸಿನಿಮಾ ವಿರುದ್ಧ ಇದ್ದ ಪ್ರತಿಭಟನೆ ಕಾವು, ರಿಲೀಸ್ ಬಳಿಕವೂ ಮುಂದುವರೆದಿದೆ. ಬಿಹಾರದ ಭಾಗಲ್ಪುರರ ಥಿಯೇಟರ್ ಮುಂಭಾಗದಲ್ಲಿ ಹಿಂದೂಪುರ ಸಂಘಟನೆಯ ಗುಂಪೊಂದು ಸಿನಿಮಾದ ಪೋಸ್ಟರ್ ಗಳನ್ನು ಹರಿದು ಹಾಕಿ, ಪ್ರತಿಭಟನೆ ನಡೆಸಿದೆ.