ಮುಂಬಯಿ: ಶಾರುಖ್ ಖಾನ್ ನಟನೆಯ ʼಪಠಾಣ್ʼ ಸಿನಿಮಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಸಿನಿಮಾದ ʼಬೇಷರಂ ರಂಗ್ʼಹಾಡಿನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಶಾರುಖ್ ಖಾನ್ ಟ್ವಿಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಶನಿವಾರ ಸಂಜೆ ಶಾರುಖ್ ಖಾನ್ ತಮ್ಮ ಟ್ವಿಟರ್ ನಲ್ಲಿ #AskSRK ಎಂದು ಹ್ಯಾಷ್ ಟ್ಯಾಗ್ ನಡಿಯಲ್ಲಿ 15 ನಿಮಿಷ ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸುತ್ತೇನೆ ಎಂದು ಹೇಳಿ, ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ದತ್ತಪೀಠ ರಸ್ತೆಯಲ್ಲಿ ಮೊಳೆ ಸುರಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸರಂಡರ್
ಫ್ಯಾನ್ಸ್ ಶಾರುಖ್ ಬಳಿ ನೀವ್ಯಾಕೆ ದೇಶಭಕ್ತಿವುಳ್ಳ ʼಸ್ವದೇಶ್ʼ ,ಚಕ್ ದೇ ಇಂಡಿಯಾʼ ದಂತಹ ಸಿನಿಮಾವನ್ನು ಮಾಡುವುದಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಶಾರುಖ್ ಈಗಾಗಲೇ ಇಂಥ ಸಿನಿಮಾವನ್ನು ಮಾಡಿದ್ದೇನೆ ಇನ್ನೆಷ್ಟು ಮಾಡಬೇಕೆಂದಿದ್ದಾರೆ. ಇಂಥದ್ದೇ ಮತ್ತೊಂದು ಪ್ರಶ್ನೆಗೆ ಶಾರುಖ್ ಖಾನ್ ʼಪಠಾಣ್ ಸಿನಿಮಾ ದೇಶಭಕ್ತಿವುಳ್ಳ ಸಿನಿಮಾ, ಆದರೆ ದೇಶಭಕ್ತಿಯನ್ನು ಆ್ಯಕ್ಷನ್ ಹಾದಿಯಲ್ಲಿ ತೋರಿಸಲಿದೆ ಎಂದಿದ್ದಾರೆ.
ಮತ್ತೊಬ್ಬ ಫ್ಯಾನ್ ʼಪಠಾಣ್ʼ ಸಿನಿಮಾದ ಮೊದಲ ದಿನದ ಬ್ಯುಸಿನೆಸ್ ಎಷ್ಟಾಗಬಹುದೆಂದು ಕೇಳಿದ್ದಾರೆ. ಅದಕ್ಕೆ ಶಾರುಖ್ ನಾನು ಬ್ಯುಸಿನೆಸ್ ಊಹಿಸಲು ಇರುವನನಲ್ಲ, ನಿಮ್ಮನ್ನು ಮನರಂಜಿಸಿಲು ಹಾಗೂ ನಿಮ್ಮ ಮುಖದಲ್ಲಿ ನಗು ತರಿಸಲು ಇರುವವನು ಎಂದು ಶಾರುಖ್ ಹೇಳಿದ್ದಾರೆ.
ಜ.25 ರಂದು ಶಾರುಖ್, ದೀಪಿಕಾ, ಜಾನ್ ಅಬ್ರಹಾಂ ಮುಖ್ಯಭೂಮಿಕೆಯ ʼಪಠಾಣ್ʼ ಸಿನಿಮಾ ರಿಲೀಸ್ ಆಗಲಿದೆ.