ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಸಮಾಜಸೇವೆಗಾಗಿ ಸಂಘಸಂಸ್ಥೆಗಳನ್ನು ನಡೆಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಅದರಲ್ಲಿಯೂ ಆ್ಯಸಿಡ್ ಸಂತ್ರಸ್ತೆಯರ ಬಗ್ಗೆ ಶಾರುಖ್‌ಗೆ ವಿಶೇಷ ಕಾಳಜಿ ಇದ್ದು, ಐಪಿಎಲ್ ನಿಮಿತ್ತ ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಕೋಲ್ಕತ್ತಕ್ಕೆ ತೆರಳಿದ್ದಾಗ ಅಲ್ಲಿನ ಸಂತ್ರಸ್ತೆಯರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.
Advertisement
ಈ ಫೋಟೋಗಳನ್ನು ಅವರ ಅಧಿಕೃತ ಫ್ಯಾನ್ಸ್‌ಕ್ಲಬ್ ಹಂಚಿಕೊಂಡಿದೆ. ಶಾರುಖ್ ಅವರ ಈ ಗುಣವನ್ನು ಕಂಡ ಅಭಿಮಾನಿಗಳು ಸಿನಿಮಾದಲ್ಲಿ ಮಾತ್ರವಲ್ಲ,ನಿಜ ಜೀವನದಲ್ಲಿಯೂ ಶಾರುಖ್ ಹೀರೋ ಎಂದು ಪ್ರಶಂಸಿಸಿದ್ದಾರೆ.