ಮುಂಬಯಿ: ಪ್ರತಿಯೊಂದು ಪ್ರಶ್ನೆಗೂ ಅತ್ಯಂತ ಬುದ್ಧಿವಂತಿಕೆಯಿಂದ ಉತ್ತರಿಸಲು ಶಾರುಖ್ ಖಾನ್ ನಿಸ್ಸೀಮರು. ಶನಿವಾರ ಟ್ವಿಟರ್‌ನಲ್ಲಿ #ಆಸ್ಕ್ ಎಸ್ ಆರ್ ಕೆ ಸೆಷನ್ ಮಾಡಿದ್ದು, ಇತ್ತೀಚೆಗೆ ಬಿಡುಗಡೆಯಾದ ಪಠಾಣ್ ಚಿತ್ರದ “ನೈಜ ಕಲೆಕ್ಷನ್” ಕುರಿತು ಪ್ರಶ್ನಿಸಲಾಗಿದ್ದು,
“ಪಠಾಣ್ ಕಾ ರಿಯಲ್ ಕಲೆಕ್ಷನ್ ಕಿತ್ನಾ ಹೈ (ಪಠಾಣ್‌ನ ನಿಜವಾದ ಸಂಗ್ರಹ ಎಷ್ಟು?) ಎಂದು ಪ್ರಶ್ನಿಸಿದ್ದಕ್ಕೆ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿ, “5000 ಕೋಟಿ ಪ್ಯಾರ್, 3000 ಕೋಟಿ ಲೈಕ್ಸ್,. 3250 ಕೋಟಿ ಅಪ್ಪುಗೆಗಳು….2 ಬಿಲಿಯನ್ ಸ್ಮೈಲ್ಸ್ ಮತ್ತು ಇನ್ನೂ ಎಣಿಸಲಾಗುತ್ತಿದೆ. ತೇರಾ ಅಕೌಂಟೆಂಟ್ ಕ್ಯಾ ಬತಾ ರಹಾ ಹೈ (ನಿಮ್ಮ ಅಕೌಂಟೆಂಟ್ ಎಷ್ಟು ಹೇಳುತ್ತಿದ್ದಾರೆ).” ಎಂದು ಪರೋಕ್ಷ ತಿರುಗೇಟು ನೀಡಿದ್ದಾರೆ.
ಶಾರುಖ್ ಖಾನ್ ಅವರ ಪಠಾಣ್ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ನಿಜವಾದ ಕಲೆಕ್ಷನ್ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. , ವಿವಾದದ ಬಳಿಕವೂ ಅದ್ಭುತ ಬಾಕ್ಸ್ ಆಫೀಸ್ ಕಲೆಕ್ಷನ್, ಶಾರುಖ್ ಅವರ ಮುಂಬರುವ ಚಿತ್ರ ಜವಾನ್ ಕುರಿತಾಗಿಯೂ ಸದ್ಯ ಚರ್ಚೆ ನಡೆಸಲಾಗುತ್ತಿದೆ.