Advertisement

ಬೆಳಗಾವಿಯಲ್ಲಿ ಮತ್ತೆ ಶಾ ರೋಡ್‌ ಶೋ

12:29 AM May 08, 2023 | Team Udayavani |

ಬೆಳಗಾವಿ: ಕೇಂದ್ರ ಸಚಿವ ಅಮಿತ್‌ ಶಾ ಸತತ ಎರಡನೇ ದಿನವೂ ನಗರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಬಿಜೆಪಿ ಪರ ಮಾತಯಾಚನೆ ಮಾಡಿದರು.

Advertisement

ರವಿವಾರ ನಗರದ ಪಿಂಪಳ ಕಟ್ಟಾದಿಂದ ಆರಂಭವಾದ ರೋಡ್‌ ಶೋ ರೇಣುಕಾ ಹೊಟೇಲ್‌, ವಡಗಾವಿಯ ಮುಖ್ಯ ರಸ್ತೆ, ನಾಥ ಪೈ ಸರ್ಕಲ್‌, ಶಹಾಪುರ ಖಡೇಬಜಾರ ಮೂಲಕ ಶಿವಚರಿತ್ರವರೆಗೆ ಸಾಗಿತು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ರೋಡ್‌ ಶೋನಲ್ಲಿ ಸಾಗುತ್ತಿದ್ದ ಅಮಿತ್‌ ಶಾ ಅವರ ವಾಹನದೆದುರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೈಕ್‌ ಸವಾರರು ರ್ಯಾಲಿ ನಡೆಸಿ ಮೆರುಗು ತಂದರು.

ರೋಡ್‌ ಶೋ ಸಾಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಹೂಮಳೆಗೈದರು. ಅಮಿತ್‌ ಶಾ ಅವರು ಕೈ ಬೀಸುತ್ತ ಮುಂದೆ ಸಾಗಿದರು. ಭಗವಾಧ್ವಜ, ಬಿಜೆಪಿ ಧ್ವಜ ಹಿಡಿದುಕೊಂಡು ಸೇರಿದ್ದ ಜನರು ಜೈ ಶಿವಾಜಿ, ಜೈ ಭವಾನಿ, ಜೈ ಬಜರಂಗಿ ಘೋಷಣೆ ಮೊಳಗಿಸಿದರು. ನಾನೂ ಬಜರಂಗಿ’ ಫಲಕಗಳು ರಾರಾಜಿಸಿದವು. ಛತ್ರಪತಿ ಶಿವಾಜಿ ಮಹಾರಾಜರ ವೇಷಧಾರಿಗಳು ಗಮನಸೆಳೆದರು. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಸಾಥ್‌ ನೀಡಿದರು. ಅಭ್ಯರ್ಥಿ ಅಭಯ ಪಾಟೀಲ ಸೇರಿ ಇತರರು ಇದ್ದರು.

ಜಾತಿಗಳ ಮಧ್ಯೆ ಜಗಳ

ಈ ಸಂದರ್ಭ ಮಾತನಾಡಿದ ಶಾ, ಬಿಜೆಪಿ ಎಲ್ಲ ಸಮುದಾಯಗಳ ಜನರನ್ನು ಜತೆಗೆ ಕರೆದುಕೊಂಡು ಸಾಗುತ್ತಿದೆ. ಆದರೆ ಕಾಂಗ್ರೆಸ್‌ ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಜಗಳ ಹಚ್ಚಿ ರಾಜಕಾರಣ ಮಾಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

Advertisement

ಕಿತ್ತೂರು ಕರ್ನಾಟಕ ಹಾಗೂ ಬೆಳಗಾವಿ ಬಿಜೆಪಿಯ ಭದ್ರಕೋಟೆ. ಈಗ ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರಕಾರ ರಚನೆ ಆಗಲಿದೆ. ಕಿತ್ತೂರು ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಕಂಕಣಬದ್ಧವಾಗಿದೆ. ಬೆಳಗಾವಿಯ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಶ್ರಮಿಸಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸುಭದ್ರ ಹಾಗೂ ಸಮೃದ್ಧಗೊಂಡಿದೆ. ವಿಶ್ವದೆಲ್ಲೆಡೆ ಭಾರತದ ಗೌರವ ಹೆಚ್ಚಾಗಿದೆ. ಮೋದಿ ನೇತೃತ್ವದಲ್ಲಿ ಡಬಲ್‌ ಎಂಜಿನ್‌ ಸರಕಾರ ರಚನೆ ಆಗಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next