Advertisement
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಾಡಿಗೆ ನಾವು ಪಕ್ಷದ ಸಂಘಟನೆ ನಡೆಸಿದ್ದು 120 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ. ನಮ್ಮನ್ನು ಕಡೆಗಣಿಸಿದವರಿಗೆ ವಿಧಾನಸಭೆಯ ಕಳೆದ ಎರಡು ಚುನಾವಣೆಯಲ್ಲೇ ರಾಜ್ಯದ ಜನ ಉತ್ತರಿಸಿದ್ದಾರೆ ಎಂದರು. ಪಕ್ಷದ ಸಂಘಟನೆಗಾಗಿ ಈಗಾಗಲೇ ತಲಾ ಐದು ಜಿಲ್ಲೆಗಳ ಹೊಣೆ ನೀಡಿ ಆರು ತಂಡಗಳನ್ನು ರಚಿಸಿದ್ದು, ಹಾಸನ, ರಾಮನಗರ ನಮ್ಮ ಕುಟುಂಬಕ್ಕೆರಾಜಕೀಯ ಜೀವನ ನೀಡಿದ ನೆಲೆಗಳು. ಈ ಹಿಂದೆ ಎರಡು ಕ್ಷೇತ್ರಗಳಲ್ಲಿ ಸ್ಪ ರ್ಧಿಸಿ ಸೋಲು ಅನುಭವಿಸಿದ ಕಹಿ ಅನುಭವ ನನಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸುವ ಕುರಿತು ಚಿಂತನೆ, ಚರ್ಚೆ ನಡೆದಿದ್ದರೂ ರಾಮನಗರ ಕ್ಷೇತ್ರ
ತೊರೆಯಲು ಅಲ್ಲಿನ ಜನರಿಗೆ ಕಾರಣ ಕೊಡಬೇಕಾಗುತ್ತದೆ ಎನ್ನುವ ಮೂಲಕ ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗದ ಸ್ಪರ್ಧೆಯನ್ನು ಅಲ್ಲಗಳೆದರು.