Advertisement

ನಾವು ಹೇಗೆ ವಿಶ್ವ ಆರ್ಥಿಕತೆ ಪಟ್ಟಿಯಲ್ಲಿ5 ನೇ ಸ್ಥಾನ ಪಡೆದೇವು?: ಶಾ ಪ್ರಶ್ನೆ

07:45 PM Sep 24, 2022 | Team Udayavani |

ಕಿಶನ್‌ಗಂಜ್‌ : 2014 ರಲ್ಲಿ, ನಮ್ಮ ದೇಶವು ವಿಶ್ವ ಆರ್ಥಿಕತೆಯ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿತ್ತು, ಇಂದು ನಾವು ಯುಕೆ ಅನ್ನು ಹಿಂದಿಕ್ಕಿ 5 ನೇ ಸ್ಥಾನವನ್ನು ಪಡೆದುಕೊಂಡಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.

Advertisement

ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಾ, ”75 ವರ್ಷಗಳಲ್ಲಿ ನಾವು ಮುಂದೆ ಸಾಗಿದ್ದೇವೆ ಮತ್ತು ನಮ್ಮ ಸ್ವಾತಂತ್ರ್ಯವನ್ನು ಅರ್ಥಪೂರ್ಣಗೊಳಿಸಿದ್ದೇವೆ ಎಂಬುದನ್ನು ನಾವು ಜಗತ್ತಿಗೆ ಸಾರಿದ್ದೇವೆ” ಎಂದರು.

ಇದನ್ನೂ ಓದಿ : ಇಬ್ಬರು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ರೈಲು ಪ್ರಯಾಣಿಕನ ಜೀವ ಉಳಿಯಿತು : ವಿಡಿಯೋ ವೈರಲ್

ಕಿಶನ್‌ಗಂಜ್‌ನಲ್ಲಿ, ಬಿಎಸ್‌ಎಫ್, ಎಸ್‌ಎಸ್‌ಬಿ ಮತ್ತು ಐಟಿಬಿಪಿಯ ಡಿಜಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗಿನ ಗಡಿ ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಶೀಲನೆ ನಡೆಸಿದರು. ನೇಪಾಳ ಗಡಿಯ ಫತೇಪುರ್ ಗೆ ಭೇಟಿ ನೀಡಿದ ನಂತರ, ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದರು.

ಗಡಿ ಪ್ರದೇಶಗಳ ಅಭಿವೃದ್ಧಿ ಜತೆಗೆ ಅಲ್ಲಿನ ಭದ್ರತೆ ನಮ್ಮ ಆದ್ಯತೆಯಾಗಿದ್ದು, ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಹಾಗೂ ಭದ್ರತಾ ಪಡೆಗಳಿಗೆ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಶಾ ಹೇಳಿದ್ದಾರೆ.

Advertisement

ಮೋದಿ ಪ್ರಧಾನಿಯಾದ ನಂತರ, ಗಡಿಯಲ್ಲಿ ಆಧುನಿಕ ಮೂಲಸೌಕರ್ಯವನ್ನು ಉತ್ತೇಜಿಸುವ ಮೂಲಕ ಗಡಿಗಳನ್ನು ರಕ್ಷಿಸುವ ತಮ್ಮ ಸಂಕಲ್ಪವನ್ನು ತೋರಿಸಿದ್ದಾರೆ. 2008-2014 ರ ವೇಳೆಗೆ ಕೇವಲ 23700 ರೂ ಇದ್ದ ಗಡಿ ಮೂಲಸೌಕರ್ಯದ ಬಜೆಟ್ ಅನ್ನು 2014-2020ರಲ್ಲಿ 44600 ಕೋಟಿ ರೂ.ಗೆ ಹೆಚ್ಚಿಸಲಾಯಿತು ಎಂದರು.

ಸಶಸ್ತ್ರ ಸೀಮಾ ಬಲದ ಕೆಚ್ಚೆದೆಯ ಜವಾನರು ತಮ್ಮ ಧೈರ್ಯ ಮತ್ತು ಶಕ್ತಿಯಿಂದ ಸುದೀರ್ಘ ಹೋರಾಟದ ಮೂಲಕ ದೇಶದ ಪೂರ್ವ ಪ್ರದೇಶಗಳಿಂದ ಎಡಪಂಥೀಯ ಉಗ್ರವಾದವನ್ನು ಬೇರುಸಹಿತ ಕಿತ್ತೊಗೆಯಲು ಅನುಪಮ ಕೊಡುಗೆ ನೀಡಿದ್ದಾರೆ. ಸಶಸ್ತ್ರ ಪಡೆಗಳ ತ್ಯಾಗ, ಸಮರ್ಪಣೆ ಮತ್ತು ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ ಎಂದರು.

ಶಾ ಅವರು ಕಿಶನ್‌ಗಂಜ್‌ನಲ್ಲಿ ಪ್ರಸಿದ್ಧ ಬುಧಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ರಾಜ್ಯ ಕೋರ್ ಕಮಿಟಿಯೊಂದಿಗೆ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next