Advertisement

ಅಮಿತ್‌ ಶಾ ಚೇತರಿಕೆ; ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ

06:38 AM Jan 17, 2019 | udayavani editorial |

ಹೊಸದಿಲ್ಲಿ : ಎಚ್‌1ಎನ್‌1 ಸೋಂಕಿಗೆ ಗುರಿಯಾಗಿ ಇಲ್ಲಿ ಏಮ್ಸ್‌ ಗೆ ನಿನ್ನೆ ಬುಧವಾರ ದಾಖಲಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಆರೋಗ್ಯ ಸುಧಾರಿಸುತ್ತಿದ್ದು ಅವರು ಇನ್ನೊಂದು ದಿನ ಅಥವಾ ಎರಡು ದಿನಗಳಲ್ಲಿ  ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಆಗಲಿದ್ದಾರೆ ಎಂದು ಪಕ್ಷದ ಮೂಲಗಳು ಇಂದು ಗುರುವಾರ ತಿಳಿಸಿವೆ.

Advertisement

ಅಮಿತ್‌ ಶಾ ಅವರು ಬೇಗನೆ ಗುಣಮುಖವಾಗಲೆಂದು ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪಕ್ಷದ ಮಾಧ್ಯಮ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಅನಿಲ್‌ ಬಲೂನಿ ಹೇಳಿದ್ದಾರೆ.

ಪರಿಣತ ವೈದ್ಯರ ತಂಡವು ಶಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದು ಅವರ ಆರೋಗ್ಯದ ನಿಗಾವಣೆ ಮಾಡುತ್ತಿದೆ; ಅವರಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ ಎಂದು ಏಮ್ಸ್‌ ನಿರ್ದೇಶಕ ರಣದೀಪ್‌ ಗುಲೇರಿಯ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next