Advertisement

ಅಂಡರ್‌-19 ಟಿ20 ವನಿತಾ ವಿಶ್ವಕಪ್‌: ಭಾರತಕ್ಕೆ ಶಫಾಲಿ ವರ್ಮ ನಾಯಕತ್ವ

11:11 PM Dec 05, 2022 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ದಲ್ಲಿ ಮುಂದಿನ ಜನವರಿಯಲ್ಲಿ ಆಡಲಾಗುವ ಚೊಚ್ಚಲ ಅಂಡರ್‌-19 ಟಿ20 ವನಿತಾ ವಿಶ್ವಕಪ್‌ ಪಂದ್ಯಾವಳಿ ಯಲ್ಲಿ ಭಾರತ ತಂಡ ವನ್ನು ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಮುನ್ನಡೆಸಲಿದ್ದಾರೆ. ಸೋಮವಾರ ತಂಡವನ್ನು ಅಂತಿಮ ಗೊಳಿಸಲಾಯಿತು.

Advertisement

ವಿಶ್ವಕಪ್‌ ಪಂದ್ಯಾವಳಿ ಜ. 14ರಿಂದ 29ರ ತನಕ ಸಾಗಲಿದೆ. ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಇವನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ “ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆತಿಥೇಯ ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್‌ ಈ ವಿಭಾಗದ ಉಳಿದ ತಂಡಗಳು.

ಪ್ರತೀ ಗುಂಪಿನ ಅಗ್ರ 3 ತಂಡಗಳು ಸೂಪರ್‌-6 ಸುತ್ತು ಪ್ರವೇಶಿಸಲಿವೆ. ಇಲ್ಲಿ ತಲಾ 6 ತಂಡಗಳ 2 ವಿಭಾಗಗಳನ್ನಾಗಿ ಮಾಡಿ ಸ್ಪರ್ಧೆಯನ್ನು ಮುಂದುವರಿಸಲಾಗುವುದು. ಬಳಿಕ ಪ್ರತೀ ವಿಭಾಗದ 2 ಅಗ್ರ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯೊಂದನ್ನು ಆಡಲಿದೆ.

ಟಿ20 ವಿಶ್ವಕಪ್‌ ತಂಡ: ಶಫಾಲಿ ವರ್ಮ (ನಾಯಕಿ), ಶ್ವೇತಾ ಸೆಹ್ರಾವತ್‌ (ಉಪನಾಯಕಿ), ರಿಚಾ ಘೋಷ್‌, ಜಿ. ತಿೃಶಾ, ಸೌಮ್ಯಾ ತಿವಾರಿ, ಸೋನಿಯಾ , ಹರ್ಲಿ ಗಾಲಾ, ರಿಶಿತಾ ಬಸು, ಸೋನಂ ಯಾದವ್‌, ಮನ್ನತ್‌ ಕಶ್ಯಪ್‌, ಅರ್ಚನಾ ದೇವಿ, ಪರ್ಶವಿ ಚೋಪ್ರಾ, ಟಿಟಾಸ್‌ ಸಾಧು, ಫ‌ಲಕ್‌ ನಾಝ್, ಶಬ್ನಮ್‌ ಎಂ.ಡಿ.
ಮೀಸಲು ಆಟಗಾರ್ತಿಯರು: ಶಿಖಾ, ನಜ್ಲಾ ಸಿ.ಎಂ.ಸಿ., ಯಶಶ್ರೀ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next