Advertisement

ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

07:05 PM Dec 01, 2021 | Team Udayavani |

ತಿರುವನಂತಪುರಂ : ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ ಇನ್ನು ಮುಂದೆ ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು. ಅದಕ್ಕೆಂದು ದೇವಸ್ಥಾನದ ಮಂಡಳಿ ವಿಶೇಷ ಸೌಲಭ್ಯಗಳನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದೆ.

Advertisement

ದೇವಸ್ಥಾನದ ಆವರಣದಲ್ಲಿ ಎಲೆಕ್ಟ್ರಾನಿಕ್‌ ಹುಂಡಿ ನಿರ್ಮಾಣ ಮಾಡಲಾಗಿದೆ. ಭಕ್ತಾದಿಗಳು ಆ ಹುಂಡಿಗೆ ಇ-ಕಾಣಿಕೆ ಅರ್ಪಿಸಬಹುದು. ಕೇರಳದ ಧನಲಕ್ಷ್ಮಿ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು, ಇ-ಹುಂಡಿ ನಿರ್ಮಿಸಲಾಗಿದೆ.

ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಹೋಗುವಲ್ಲಿ, ಸನ್ನಿಧಾನದಲ್ಲಿ ಹೀಗೆ ಒಟ್ಟು 22 ಸ್ಥಳಗಳಲ್ಲಿ ಡಿಜಿಟಲ್‌ ಪಾವತಿಗಾಗಿ ಕ್ಯುಆರ್‌ ಕೋಡ್‌ಗಳನ್ನು ಬಿತ್ತರಿಸಲಾಗಿದೆ. ಭಕ್ತರು ಗೂಗಲ್‌ ಪೇನಲ್ಲಿ ಆ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ನೇರವಾಗಿ ಖಾತೆಯಿಂದ ದೇವಸ್ಥಾನದ ಹುಂಡಿಗೆ ಕಳುಹಿಸಬಹುದು ಎಂದು ಮಂಡಳಿ ತಿಳಿಸಿದೆ.

ಇದನ್ನೂ ಓದಿ : ಬಿಜೆಪಿಯನ್ನು ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಪವಾರ್

Advertisement

Udayavani is now on Telegram. Click here to join our channel and stay updated with the latest news.

Next