Advertisement

ನಟಿ ಸಮಂತಾ ಅಭಿನಯದ ‘ಶಾಕುಂತಲಂ’ಸಿನಿಮಾ ರಿಲೀಸ್ ಡೇಟ್ ಫಿಕ್ಸ್

02:59 PM Sep 23, 2022 | Team Udayavani |

ಹೈದರಾಬಾದ್: ‘ಪುಷ್ಪ’ ಸಿನಿಮಾದಲ್ಲಿನ ‘ಹು ಅಂವಾ ಮಾಮಾ..’ ಹಾಡಿಗೆ ಹೆಜ್ಜೆಹಾಕಿ ಯಶಸ್ಸನ್ನು ಕಂಡಿರುವ ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಕಥೆಯುಳ್ಳ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಸಿದ್ದವಾಗಿದೆ.

Advertisement

ಸಮಂತಾ ಮತ್ತು ದೇವ್ ಮೋಹನ್ ಮುಖ್ಯಪಾತ್ರದಲ್ಲಿರುವ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ಕ್ಕೆ ತೆರೆಕಾಣಲಿದ್ದು, ಪ್ರೇಕ್ಷಕರನ್ನು ಮಹಾಭಾರತದ ಕಥಾಲೊಕಕ್ಕೆ ಕರೆದೊಯ್ಯಲಿದೆ. ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಮೊದಲ ಬಾರಿಗೆ ಬಾಲನಟಿಯಾಗಿ ಸಿನಿಮಾದಲ್ಲಿ ಕಮಾಲ್ ಮಾಡಲು ಸಿದ್ದರಾಗಿದ್ದಾರೆ.

ಈ ಸಿನಿಮಾಕ್ಕೆ ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. ಗುಣ ಶೇಖರ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿದೆ.

ಈ ಸಿನಿಮಾದ ಫಸ್ಟ್ ಲುಕ್ ಕಂಡು ಜನರು ಬೆರಗಾಗಿದ್ದರು. ಸಮಂತಾ ಬಿಳಿ ಬಣ್ಣದ ಸೀರೆಯುಟ್ಟು ಪ್ರಾಣಿ, ಪಕ್ಷಿಗಳ ಮಧ್ಯೆ ಕುಳಿತ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು.

ಇದನ್ನೂ ಓದಿ:ಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ : ಕೇರಳ ಹೈಕೋರ್ಟ್ ತರಾಟೆ

Advertisement

ಈ ಸಿನಿಮಾವು ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟಗಳು, ಗಾಂಧಿಪೇಟ್ ಲೇಕ್ ಈ ಸ್ಥಳಗಳಲ್ಲಿ ಚಿತ್ರಿಕರಣಗೊಂಡಿದೆ. ಇನ್ನು ಇದರಲ್ಲಿ ಕಬೀರ್ ದುಹನ್ ಸಿಂಗ್, ಅದಿತಿ ಬಾಲನ್, ಮಧು, ಪ್ರಕಾಶ್ ರಾಜ್, ಗೌತಮಿ, ಮೋಹನ್ ಬಾಬು ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.

ಯಾರಿದು ಶಕುಂತಲೆ?

ರಿಷಿ ಕಣ್ವ ಮಹರ್ಷಿಗಳಿಗೆ ಕಾಡಿನಲ್ಲಿ ಶಕುಂತ ಪಕ್ಷಿಗಳ ಮಧ್ಯೆ ಪುಟ್ಟ ಮಗುವೊಂದು ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಣ ಮಗುವಿಗೆ ಶಕುಂತಲೆ ಎಂದು ಹೆಸರಿಡುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ. ಶಕುಂತಲೆ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ ಎಂಬ ಉಲ್ಲೇಖವು ಇದೆ.

Advertisement

Udayavani is now on Telegram. Click here to join our channel and stay updated with the latest news.

Next