ವಾಷಿಂಗ್ಟಂನ್ ಡಿಸಿ : ಭಾರತವು ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಸ್ಟಿನ್ ಅವರಿಗೆ ಆತಿಥ್ಯ ವಹಿಸುತ್ತಿದ್ದರೆ, ಪ್ರೊ ಖಲಿಸ್ತಾನ್ ಗುಂಪು ವಾಷಿಂಗ್ಟನ್ ಲಾಬಿವಾದಿ “ಬ್ಲೂ ಸ್ಟಾರ್ ಸ್ಟ್ರಾಟಜೀಸ್” ನನ್ನು ಅಮೆರಿಕದ ಅಧ್ಯಕ್ಷ ಬೈಡೆನ್ ಆಡಳಿತದ ವಿರುದ್ಧ ಲಾಬಿ ಮಾಡಲು ಮುಂದಾಗಿದೆ.
ಡೆಮಾಕ್ರಟಿಕ್ ಸರ್ಕಾರಿ ವ್ಯವಹಾರಗಳ ಸಂಸ್ಥೆ ಬ್ಲೂ ಸ್ಟಾರ್ ಸ್ಟ್ರಾಟಜೀಸ್ ಭಾರತದಿಂದ ಪಂಜಾಬ್ ಅನ್ನು ಪ್ರತ್ಯೇಕಿಸಲು ಬೆಂಬಲಿಸುವ ನ್ಯೂಯಾರ್ಕ್ ಸರ್ಕಾರೇತರ ಸಂಸ್ಥೆಗೆ ಲಾಬಿ ಮಾಡಲು ಮುಂದಾಗಿದ್ದು, ಸಿಇಒ ಕರೆನ್ ಟ್ರೊಮೊಂಟಾನೊ ಅವರು ಸಿಖ್ಸ್ ಫಾರ್ ಜಸ್ಟಿಸ್ ಗಾಗಿ “ಭಾರತದಲ್ಲಿ ಸಿಖ್ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಯುಎಸ್ ನಲ್ಲಿ ಸಿಖ್-ಅಮೇರಿಕನ್ ವಲಸೆಗಾರರು ಈ ವಿಷಯಗಳ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ದೇಶೀಯ ಡಿಸ್ಕ್ಲೋಸರ್ ಆ್ಯಕ್ಟ್ (ಎಲ್‌ಡಿಎ) ತಿಳಿಸಿದೆ.
ಓದಿ : ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ: ಎಂಎಲ್‌ಸಿ ವಿಶ್ವನಾಥ್ ಪ್ರಶ್ನೆ
ಗುರುಪತ್ವಂತ್ ಸಿಂಗ್ ಪನ್ನುನ್ ಈ ಗುಂಪಿನ ನೇತೃತ್ವ ವಹಿಸಿದ್ದು, ಭಾರತ ಸರ್ಕಾರವು 2019 ರಲ್ಲಿ ಈ ಗುಂಪನ್ನು ನಿಷೇಧಿಸಿತ್ತು ಮತ್ತು ಸ್ವತಂತ್ರ ಖಲಿಸ್ತಾನ್ ರಚಿಸುವ ಪ್ರಯತ್ನದಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸಿದ್ದಕ್ಕಾಗಿ ಕಳೆದ ವರ್ಷ ಪನ್ನುನ್ ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.
ತಿಂಗಳುಗಳ ಕಾಲ ಭಾರತದಲ್ಲಿ ನಡೆದ ಬೃಹತ್ ರೈತ ಪ್ರತಿಭಟನೆಗಳಿಗೆ ಪ್ರೋ ಖಲಿಸ್ತಾನ್ ಬೆಂಬಲವನ್ನು ಪಡೆದಿದ್ದು, ಈಗ ಅಮೆರಿಕದೊಂದಿಗೂ ಲಾಬಿ ನಡೆಸಿಕೊಳ್ಳಲು ಮುಂದಾಗಿರುವ ಕಾರಣದಿಂದಾಗಿ ಭಾರತ ಸರ್ಕಾರವು ಅಮೆರಿಕಾದ ನ್ಯಾಯಾಂಗ ಇಲಾಖೆಯಲ್ಲಿ ಸಹಾಯವನ್ನು ಕೇಳಿದೆ.
ಓದಿ : ಒಪ್ಪಿಗೆಯಿಲ್ಲದೆ ನನ್ನ ಹೆಸರನ್ನು ಅಭ್ಯರ್ಥಿಗಳ ಪಟ್ಟಿಗೆ ಸೇರಿಸಿದೆ ಬಿಜೆಪಿ : ಶಿಖಾ ಮಿತ್ರ