Advertisement

ಕೇರಳದ ಎರ್ನಾಕುಳಂ ಗ್ರಾಮದಲ್ಲಿ ರೋಮನ್‌ ಸಾಮ್ರಾಜ್ಯ  ಸ್ಫಿಂಕ್ಸ್‌ ಪತ್ತೆ!

04:17 PM Oct 05, 2020 | keerthan |

ತಿರುವನಂತಪುರ: ಕೇರಳಕ್ಕೂ ಪ್ರಾಚೀನ ಕಾಲದ ರೋಮನ್‌ ಸಾಮ್ರಾಜ್ಯಕ್ಕೂ ಐತಿಹಾಸಿಕ ಸಂಬಂಧವಿದೆಯೇ? ಇತ್ತು ಎಂದು ಹೇಳಿಕೊಳ್ಳಲು ಸಾಧ್ಯವಾಗುವ ಅಂಶ ಎರ್ನಾಕುಳಂ ಜಿಲ್ಲೆಯ ಪಟ್ಟಾನಂ ಗ್ರಾಮದಲ್ಲಿ ಪತ್ತೆಯಾಗಿದೆ.

Advertisement

12ನೇ ತರಗತಿ ವಿದ್ಯಾರ್ಥಿ ಪವಿತ್ರಾ ಪಿ.ಎ ಎಂಬವರ ಸಂಬಂಧಿಯೊಬ್ಬರ ಮನೆಯ ಹಿತ್ತಿಲಿನಲ್ಲಿ ಸಂಶೋಧನೆ ನಡೆಸಿದಾಗ 1.2 ಸೆಂಟಿಮೀಟರ್‌ ಉದ್ದದ ಸ್ಫಿಂಕ್ಸ್‌  (ಹೆಣ್ಣಿನ ಮುಖ ಮತ್ತು ಸಿಂಹದ ದೇಹವಿರುವ ರೆಕ್ಕೆಯುಳ್ಳ ಆಕೃತಿ) ಪತ್ತೆಯಾಗಿತ್ತು. ರೋಮ್‌ನ ವೆರ್ಗಟಾ ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ| ಜಿಲಿಯಾ ರೋಕಾ ಕೂಡ ಈ ಐತಿಹಾಸಿಕ ಅಂಶವನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ಯೋಗಿ ಸರ್ಕಾರ ತನ್ನ “ದರ್ಪ ಮತ್ತು ಸರ್ವಾಧಿಕಾರಿ” ಧೋರಣೆಯನ್ನು ಬಿಡಬೇಕು: ಮಾಯಾವತಿ

ಪಟ್ಟಾನಂ ಗ್ರಾಮದಲ್ಲಿ ಪತ್ತೆಯಾಗಿರುವ ಸ್ಫಿಂಕ್ಸ್‌ ನ ಮಾದರಿ ರೋಮನ್‌ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಅಗಸ್ಟಸ್‌ ಸೀಸರ್‌ ಕಾಲಕ್ಕೆ ಸೇರಿದ್ದಾಗಿದೆ. ವಿದ್ಯಾರ್ಥಿಯ ಸಂಬಂಧಿಯ ಮನೆ ಪೆರಿಯಾರ್‌ ನದಿಯ ಹಿನ್ನೀರಿನ ವ್ಯಾಪ್ತಿಯಲ್ಲಿಯೇ ಇದೆ. ಈ ಪ್ರದೇಶದಿಂದ ರೋಮ್‌ನಲ್ಲಿ ಇತಿಹಾಸ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಮುಜಿರಿಸ್‌ ಬಂದರ್‌ ಜತೆಗೆ ಕೇರಳದಿಂದ ವ್ಯಾಪಾರ ಸಂಬಂಧಗಳು ಇದ್ದಿರುವ ಸಾಧ್ಯತೆಗಳೂ ಇವೆ. ಕ್ರಿಸ್ತಪೂರ್ವ 1ನೇ ಶತಮಾನ ಮತ್ತು 4ನೇ ಶತಮಾನದ ನಡುವೆ ಅದು ಪ್ರವರ್ಧಮಾನದಲ್ಲಿ ಇದ್ದಿರುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next