Advertisement
ಭಾರತಕ್ಕೆ ನೌಕಾ ನೆಲೆ ಅಭಿವೃದ್ಧಿಗೆ ಅವಕಾಶ ನೀಡುವುದಕ್ಕೆ ಅಲ್ಲಿನ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲ, ಸಾರ್ವಜನಿಕರೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಹಿಂದೂ ಮಹಾಸಾಗರದಲ್ಲಿ ಅತಿ ಹೆಚ್ಚು ವಾಣಿಜ್ಯ ಹಡಗುಗಳು ಸಾಗುವ ಮಾರ್ಗಕ್ಕೆ ಸಮೀಪದಲ್ಲಿ ಈ ಅಸಂಪ್ಷನ್ ದ್ವೀಪವಿದೆ. ಇಲ್ಲಿ ಭಾರತಕ್ಕೆ ಅವಕಾಶ ನೀಡಿದರೆ, ಸೆಷಲ್ಸ್ ದ್ವೀಪ ಸಮೂಹದ ಸಾರ್ವಭೌಮತೆಗೆ ಧಕ್ಕೆ ಉಂಟಾಗುತ್ತದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಸೆಷಲ್ಸ್ ಸಂಸತ್ತು ಒಪ್ಪಂದದ ವಿಚಾರದಲ್ಲಿ ಮುಂದುವರಿಯದೇ ಇರಲು ನಿರ್ಧರಿಸಿದೆ ಎಂದು ಸೆಷೆಲ್ಸ್ ವಿದೇಶಾಂಗ ಕಾರ್ಯದರ್ಶಿ ಬೆರ್ರಿ ಫಾರೆ ಹೇಳಿದ್ದಾರೆ. ಒಪ್ಪಂದ ರದ್ದುಗೊಳಿಸಿಲ್ಲ. ಬದಲಿಗೆ ಸಂಸತ್ತಿನಲ್ಲಿ ಇದನ್ನು ಮಂಡಿಸದೇ ಇರಲು ಸರ್ಕಾರ ನಿರ್ಧರಿಸಿದೆ. ಆದರೆ ಭಾರತ ಈಗಾಗಲೇ ಈ ಒಪ್ಪಂದವನ್ನು ಅನುಮೋದಿಸಿದೆ.
Advertisement
ಭಾರತದ ಕೈತಪ್ಪಿದ ಸೆಷಲ್ಸ್ ನೌಕಾನೆಲೆ
06:00 AM Jun 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.