Advertisement

ಸೇವಾಲಾಲ್‌ ಜಯಂತಿ ಏಕಪಕ್ಷೀಯ: ಚವ್ಹಾಣ

01:21 PM Mar 15, 2022 | Team Udayavani |

ಚಿಂಚೋಳಿ: ಕೇಂದ್ರ ಮಂತ್ರಿಯಾಗಲು ಕಲಬುರಗಿ ಸಂಸದ ಡಾ| ಉಮೇಶ ಜಾಧವ್‌ ಅವರು ದೆಹಲಿಯಲ್ಲಿ ಲಂಬಾಣಿ ಜನಾಂಗದ ಧರ್ಮಗುರು ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಆಚರಿಸಿದ್ದಾರೆ. ಈ ಕಾರ್ಯಕ್ರಮ ಬಿಜೆಪಿಯ ಏಕಪಕ್ಷೀಯವಾಗಿತ್ತು ಎಂದು ಮಾಜಿ ಸಚಿವ ಬಾಬುರಾವ ಚವ್ಹಾಣ ಆರೋಪಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರ ಭಾಗವಹಿಸಿದ್ದಾರೆ. ಇದೊಂದು ಬಿಜೆಪಿ ಸೇವಾಲಾಲ್‌ ಜಯಂತಿ ಆಗಿತ್ತು ಎಂದು ಟೀಕಿಸಿದರು.

ಚಿಂಚೋಳಿ ಮತಕ್ಷೇತ್ರವು ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಪ.ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜನಾಂಗದವರು ಹೆಚ್ಚಾಗಿದ್ದಾರೆ. ಅವರ ಆರ್ಥಿಕತೆ ಸುಧಾರಣೆ ಆಗಿಲ್ಲ. ಇಲ್ಲಿನ ಬಡವರು ತೆಲಂಗಾಣ, ಮುಂಬಯಿ, ಹೈದ್ರಾಬಾದ, ಪುಣೆ, ಬೆಂಗಳೂರು ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಾರೆ. ತಾಲೂಕಿನ ರೈತರ ಜೀವನಾಡಿಯಾಗಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಡಿಯಲ್ಲಿ 140 ಕೋಟಿ ರೂ.ಗಳಲ್ಲಿ ಯೋಜನೆಯ 80 ಕಿ.ಮೀ. ಉದ್ದದ ಮುಖ್ಯ ಕಾಲುವೆ ಆಧುನಿಕರಣಕ್ಕಾಗಿ ಕರ್ನಾಟಕ ನೀರಾವರಿ ನಿಗಮ ವತಿಯಿಂದ ನೀಡಲಾಗಿತ್ತು. ಆದರೆ ಕಾಲುವೆಯಲ್ಲಿ ಅವ್ಯವಹಾರ ಆಗಿದ್ದು, ಇದರ ಬಗ್ಗೆ ತನಿಖೆ ಆಗಬೇಕು ಎಂದರು.

ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಮಂಜೂರಿಗೊಳಿಸಿದ್ದರು. ಆದರೆ, ಬಿಜೆಪಿ ಸಂಸದರು ಖರ್ಗೆ ಯವರು ಮಂಜೂರಿಗೊಳಿಸಿದ ಯೋಜನೆಗಳನ್ನು ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ. ಇವರೊಬ್ಬರು ಅಸಮರ್ಥ ಸಂಸದರಾಗಿದ್ದಾರೆ ಎಂದು ಟೀಕಿಸಿದರು.

ಯಶವಂತಪುರ- ಬೀದರ ಮಾರ್ಗವಾಗಿ ಜಹಿರಾಬಾದ, ವಿಕಾರಾಬಾದ, ತಾಂಡೂರ, ಸೇಡಂ, ಚಿತ್ತಾಪುರ, ವಾಡಿ, ಮಳಖೇಡ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ರೈಲು ಬದಲಾವಣೆಯನ್ನು ಕೇಂದ್ರ ಸಚಿವ ಭಗವಂತ ಖುಬಾ ಮಾಡಿಸಿದ್ದರು. ಆದರೆ, ರೈಲು ರದ್ದುಪಡಿಸಬೇಕೆಂದು ಪತ್ರ ಯಾಕೆ ನೀಡಿದ್ದಾರೆ. ಕಮಲಾಪುರ-ಬೀದರ ರೈಲು ಮಾರ್ಗ ಪ್ರಾರಂಭಿಸಲು ನನ್ನ ಸಹಮತವಿದೆ ಎಂದರು. ಮೈನೋದ್ದೀನ್‌ ಬೈವಾಡ, ಸಂದೀಪ ಚವ್ಹಾಣ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next