Advertisement

ಹಲವು ಫಲ-ಪುಷ್ಪಗಳ ಪ್ರದರ್ಶನ

05:40 PM Aug 16, 2017 | |

ಯಾದಗಿರಿ: ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಫಲಪುಷ್ಪ ಪ್ರದರ್ಶನವನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಎಂ. ಖರ್ಗೆ ಉದ್ಘಾಟಿಸಿದರು. ವಿವಿಧ ಫಲ – ಪುಷ್ಪಗಳ ಪ್ರದರ್ಶನ ಜೊತೆಗೆ ಸಾವಯವ ಕೃಷಿ ಉತ್ಪನ್ನ, ಸಿರಿಧಾನ್ಯ, ಹನಿ ನೀರಾವರಿ ಪದ್ಧತಿ ಹಾಗೂ ಜಾನುವಾರುಗಳ ರೋಗ ನಿಯಂತ್ರಣ ಕುರಿತು ರೈತರಿಗೆ ಪ್ರದರ್ಶನದಲ್ಲಿ ಮಾಹಿತಿ
ದೊರೆಯಿತು. ತೋಟಗಾರಿಕಾ ಇಲಾಖೆ ತೋಟಗಾರಿಕೆ ಸಂತೆ ರೈತರಿಗೆ ಸದುಪಯೋಗ ಆಗುವಲ್ಲಿ ಯಶಸ್ವಿಯಾಯಿತು. ಇಲ್ಲಿ ವಿವಿಧ ಹೂವಿನ ಗಿಡ, ತೆಂಗು ಮತ್ತಿತರ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ವಿತರಿಸಲಾಯಿತು. ಪ್ರಾಣಿಗಳ ರೋಗ ನಿಯಂತ್ರಣ, ಕರು ಸಾಕಾಣಿಕೆ, ಮಿಶ್ರತಳಿ ಹಸುಗಳ ಸಾಕಾಣಿಕೆ, ಮೇವು ಬೆಳೆಯುವ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ವತಿಯಿಂದ ಉಚಿತವಾಗಿ ರೈತರಿಗೆ ಕುರಿಗಳ ಜಂತು ನಾಶಕ ಔಷಧಿ ವಿತರಿಸಲಾಯಿತು. ಕೃಷಿ ಇಲಾಖೆ ಒಂದು ಲಕ್ಷ ರೂ. ಅನುದಾನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಆಗಸ್ಟ್‌ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿ ಪಾಟೀಲ್‌ ಅನಪುರ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲಾಧಿಕಾರಿ ಮಂಜುನಾಥ ಜೆ, ಜಿಪಂ ಸಿಇಒ
ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾಮಾರ್ಟಿನ್‌ ಮಾರ್ಬನ್ಯಾಂಗ್‌, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next