Advertisement
ಯುಎಇ ಸ್ಥಳೀಯ ಕಾಲಮಾನ, ಶುಕ್ರವಾರ ಬೆಳಗಿನ ಜಾವ ಸುಮಾರು 6 ಗಂಟೆಗೆ ಸುರಿದ ಅಗಾಧ ಮಳೆಯಿಂದಾಗಿ, ಅನೇಕ ನಗರಗಳಲ್ಲಿ ಪ್ರವಾಹದ ಸ್ಥಿತಿ ಏರ್ಪಟ್ಟು ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳು ಜಖಂ ಆಗಿರುವುದು ಮುಂತಾದ ತೊಂದರೆಗಳಾಗಿವೆ.
Related Articles
Advertisement
ಮನೆಯನ್ನು ತೊರೆಯಬೇಕಾಗಿ ಬಂದವರಿಗೆ ಸಮೀಪದ ಹೋಟೆಲ್‌ಗಳು ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ದುಬಾೖ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಮನವಿ ಮಾಡಿದ್ದಾರೆ.
ಕಂದಹಾರ್‌ನಲ್ಲಿ ಅವಾಂತರ: ಅಫ್ಘಾನಿ ಸ್ಥಾನದ ದಕ್ಷಿಣ ಭಾಗದಲ್ಲಿರುವ ಕಂದ ಹಾರ್ ಪ್ರಾಂತ್ಯವೂ ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಾಕ್ಷಿಯಾಗಿದೆ. ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ 7 ಮಕ್ಕಳೂ ಸೇರಿದಂತೆ 8 ಮಂದಿ ಸಾವಿಗೀಡಾಗಿ, ನಾಲ್ವರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು, ಸೇತುವೆಗಳು, ಕೃಷಿ ಭೂಮಿಗಳು ಪ್ರವಾಹದಿಂದ ಹಾನಿಗೀಡಾಗಿವೆ. ಒಂದು ವಾರದ ಅವಧಿಯಲ್ಲಿ ಅಫ್ಘಾನ್‌ನ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹಕ್ಕೆ 39 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.