Advertisement
ಪಟ್ಟಣದ ಗಾಂಧಿ ವೃತ್ತದಲ್ಲಿ ತಾಲೂಕು ಮಟ್ಟದ ಸೇವಾಲಾಲ್ ಸಮಿತಿಯ ಗೌರವಾಧ್ಯಕ್ಷ ಕೆ. ವೀರೇಶ್ ನಾಯ್ಕ ಹಾಗೂ ಸಮಾಜದ ಮುಖಂಡರುಗಳಿದ್ದ ಭಾವಚಿತ್ರವುಳ್ಳ ಫೆಕ್ಸ್‌ಗಳನ್ನು ಹಾಕಲಾಗಿತ್ತು. ಅವುಗಳನ್ನು ಹಾಕಿದ ಮಾರನೇ ದಿನವೇ ಪುರಸಭೆ ಸಿಬ್ಬಂದಿ ಉದ್ದೇಶ ಪೂರ್ವಕವಾಗಿ ತೆರವುಗೊಳಿಸಿ ಸಮುದಾಯಕ್ಕೆ ಅಪಮಾನವೆಸಗಿದ್ದಾರೆ. ಯಾರೋ ಪ್ರಭಾವಿ ರಾಜಕಾರಣಿಯೊಬ್ಬರ ಮಾತನ್ನು ಕೇಳಿ ಉದ್ದೇಶ ಪೂರ್ವಕವಾಗಿ ಬೇಕು ಅಂತಲೇ ಮಾಡಿದ್ದಾರೆ. ಸಮುದಾಯದ ದಾರ್ಶನಿಕರೊಬ್ಬರ ಜಯಂತಿ ಆಚರಣೆಗೆ ರಾಜಕೀಯ ಪ್ರಭಾವ ಬಳಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಂಜಾರಾ ಸಮುದಾಯದವರು ಪ್ರಶ್ನಿಸಿದರು.
Related Articles
Advertisement
ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಪ್ರತಿಕ್ರಿಯಿಸಿ, ಉದ್ದೇಶ ಪೂರ್ವಕವಾಗಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿಲ್ಲ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಹಳೆಯ ಫ್ಲೆಕ್ಸ್ ಗಳು ತುಂಬಿಕೊಂಡಿದ್ದವು. ಅವುಗಳನ್ನು ತೆರವುಗೊಳಿಸುವಂತೆ ಸಿಬ್ಬಂದಿಗೆ ಹೇಳಿದ್ದೆ. ಅದರೆ ನಿಮ್ಮ ಸೇವಾಲಾಲ್‌ರ ಜಯಂತಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆಯೇ ವಿನಃ ಯಾವ ರಾಜಕಾರಣಿಗಳ ಪ್ರಭಾವದಿಂದ ಮಾಡಿಲ್ಲ ಎಂದು ಪ್ರತಿಭಟನಾ ನಿರತರಿಗೆ ಸ್ಪಷ್ಟನೆ ನೀಡಿದರು.
ಸೇವಾಲಾಲ್‌ರ ಬಗ್ಗೆ ನಮಗೂ ಅಪಾರ ಗೌರವವಿದೆ. ಜಯಂತಿ ಆಚರಣೆಗೆ ಪಟ್ಟಣದಲ್ಲಿ ಪುರಸಭೆಯಿಂದ ಬೇಕಾದ ಸಹಾಯ ಮಾಡಲಾಗುವುದು ಎಂದರು. ಪುರಸಭೆ ಮುಖ್ಯಾ ಧಿಕಾರಿಯ ಪ್ರತಿಕ್ರಿಯೆಗೆ ಸ್ಪಂದಿಸಿದ ಬಂಜಾರಾ ಸಮುದಾಯದವರು ಪ್ರತಿಭಟನೆ ಹಿಂಪಡೆದರು. ಮುಖಂಡರಾದ ಸುಣ್ಣಿಗೆರೆ ಮಲ್ಲನಾಯ್ಕ, ಚಂದ್ರನಾಯ್ಕ, ಅನಿಲ್, ನಾಗರಾಜ ನಾಯ್ಕ, ಶಂಕ್ರನಾಯ್ಕ ಮತ್ತಿತರರು ಹಾಜರಿದ್ದರು.