ಪೊಸಡಿಗುಂಪೆ: ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನಲ್ಲಿ ಇರುವ ವಿವಿಧ ಸಮಾಜಮುಖೀ ಯೋಜನೆಗಳಲ್ಲಿ ಒಂದಾದ ಕಾಮದುಘಾ ವಿಭಾಗದನ್ವಯ ಕಾರ್ಯವೆಸಗುತ್ತಾ ಇರುವ ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವು ಪೂರೈಸುವ ವಿಶಿಷ್ಟ ಕಾರ್ಯ ‘ಸೇವಾ ಅರ್ಘ್ಯ’, ಗೋವಿಗಾಗಿ ಮೇವು ಶ್ರಮದಾನವು ಪೊಸಡಿಗುಂಪೆಯ ಶ್ರೀ ಶಂಕರಧ್ಯಾನ ಮಂದಿರದಲ್ಲಿ ಸಂಪನ್ನಗೊಂಡಿತು.
ಗುಂಪೆ ವಲಯದ ಅಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ ಅವರು ಗೋಮಾತೆಗೆ ಗೋಗ್ರಾಸ ನೀಡುವ ಮೂಲಕ ಸೇವಾ ಅರ್ಘ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಮದುಘಾ ಕಾರ್ಯದರ್ಶಿ ಡಾ| ವೈ.ವಿ. ಕೃಷ್ಣಮೂರ್ತಿ ಅವರು ಧ್ವಜಾರೋಹಣಗೈದರು. ಗುರುವಂದನೆ, ಗೋಸ್ತುತಿಯೊಂದಿಗೆ ಸೇವಾ ಅರ್ಘ್ಯ ಪ್ರಾರಂಭವಾಯಿತು.
ಮಹಾಮಂಡಲ ಉಲ್ಲೇಖ ವಿಭಾಗ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್, ಮುಳ್ಳೇರಿಯ ಹವ್ಯಕ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಸಂಸ್ಕಾರ ವಿಭಾಗ ಪ್ರಧಾನ ನವನೀತ ಪ್ರಿಯ ಕೈಪ್ಪಂಗಳ, ಮಂಡಲ ವಿದ್ಯಾರ್ಥಿ ವಾಹಿನೀ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಸೇವಾ ವಿಭಾಗ ಪ್ರಧಾನ ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಸಹಾಯ ವಿಭಾಗ ಪ್ರಧಾನ ಡಾ| ಡಿ.ಪಿ. ಭಟ್, ವೃತ್ತಿನಿರತ ವಿಭಾಗ ವೈ.ಕೆ. ಗೋವಿಂದ ಭಟ್, ಮಾತೃ ವಿಭಾಗ ಪ್ರಧಾನೆ ಕುಸುಮ ಪೆರ್ಮುಖ, ಮುಷ್ಠಿ ಭಿಕ್ಷಾ ಪ್ರಧಾನೆ ಗೀತಾಲಕ್ಷ್ಮೀ, ಶ್ಯಾಮ ಭಟ್ ಬೇರ್ಕಡವು, ವಿವಿಧ ವಲಯದ ಪದಾಧಿಕಾರಿಗಳು, ಗೋಪ್ರೇಮಿಗಳು ಭಾಗವಹಿಸಿದರು.
ಖಟಾವು ಯಂತ್ರಗಳು, ವಿದ್ಯಾರ್ಥಿಗಳು, ಗೋಕಿಂಕರರು
10 ಖಟಾವು ಯಂತ್ರ, 10 ಮಂದಿ ವಿದ್ಯಾರ್ಥಿಗಳ ಸಹಿತ 115 ಮಂದಿ ಗೋಕಿಂಕರರು ಭಾಗವಹಿಸಿದ್ದರು. ಕಾರ್ಯಕ್ರಮದ ಪೂರ್ವಭಾವಿ ತಯಾರಿಗಾಗಿ ಪೊಸಡಿಗುಂಪೆಯಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಅವರ ನೇತೃತ್ವದಲ್ಲಿ ಶ್ರಮದಾನ ಚಾಲನೆಗೊಂಡಿತು.