Advertisement
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಶಾಸಕ ಐಹೊಳೆ ಡಿ. ಮಹಾಲಿಂಗಪ್ಪ ಪ್ರಶ್ನೆ ಸಂಬಂಧ ಮಧ್ಯಪ್ರವೇಶಿಸಿದ ಸುರೇಶ್ ಕುಮಾರ್ ಮಾತನಾಡಿ, ಮದ್ಯದ ಅಂಗಡಿಗಳು ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗುತ್ತಿದೆ. ಇದು ಕೂಲಿ ಕಾರ್ಮಿಕರ ಬದುಕಿಗೆ ಇನ್ನಷ್ಟು ತೊಂದರೆ ತಂದೊಡ್ಡುತ್ತಿದೆ. ಹೀಗಾಗಿ ನಿರ್ದಿಷ್ಟ ಸಮಯಕ್ಕೆ ಮದ್ಯದ ಅಂಗಡಿ ತೆರೆಯುವಂತೆ ಮಾಡಬೇಕು ಎಂದು ಮನವಿಮಾಡಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಭೂಮಿಯೇ ಕಾಣದಂತಾಗಿದ್ದು, ಬರೀ ಬಾಟಲಿಗಳೇ ಕಾಣುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಪ್ರಶ್ನೋತ್ತರ ಸಂದರ್ಭದಲ್ಲಿ ಬಿಜೆಪಿ ಶಾಸಕರು ಪದೇಪದೆ ಎದ್ದುನಿಲ್ಲುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಪ್ರಶ್ನೋತ್ತರದ ಸಂದರ್ಭದಲ್ಲಿ ವಿಷಯ ಮಂಡನೆಗೆ ಅವಕಾಶ ಇರುವುದಿಲ್ಲ. ಪ್ರಶ್ನೆಗೆ ಉಪ ಪ್ರಶ್ನೆ ಮಾತ್ರ ಕೇಳಲು ಅವಕಾಶ ಇರುತ್ತದೆ. ಇದು ಹೊಸ ಶಾಸಕರಿಗೆ ತಿಳಿದಿಲ್ಲ. ಮನಸ್ಸಿಗೆ ಬಂದಂತೆ ಎದ್ದು ನಿಲ್ಲುವುದು ಸರಿಯಲ್ಲ. ಸದನದ ಹಿರಿಯ ಸದಸ್ಯರು ಕಿರಿಯರಿಗೆ ತರಬೇತಿ ನೀಡಬೇಕು. ಇಲ್ಲದಿದ್ದರೆ ನನ್ನ ಕೊಠಡಿಗೆ ಬನ್ನಿ. ನಾನೇ ತಿಳಿಸಿಕೊಡುತ್ತೇನೆ ಎಂದು ಕಿರಿಯ
ಶಾಸಕರಿಗೆ ಸೂಚ್ಯವಾಗಿ ಹೇಳಿದರು.