Advertisement

ನೇಮಕ ಗದ್ದಲಕ್ಕೆ ಕಲಾಪ ಬಲಿ

03:45 AM Mar 29, 2017 | Team Udayavani |

ನವದೆಹಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಆಯೋಗಗಳ ಹುದ್ದೆಗಳ ಭರ್ತಿಯಲ್ಲಾಗಿರುವ  ವಿಳಂಬವು ಮಂಗಳ ವಾರ ರಾಜ್ಯಸಭೆಯ ಕಲಾಪವನ್ನು ಕೊಚ್ಚಿ ಹೋಗುವಂತೆ ಮಾಡಿತು.

Advertisement

ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದರೂ, ಸುಮ್ಮನಾಗದ ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದವು. ಕಾಂಗ್ರೆಸ್‌, ಎಸ್ಪಿ, ಜೆಡಿಯು, ಬಿಎಸ್ಪಿ ಮತ್ತಿತರ ಪಕ್ಷಗಳು ವಾರದೊಳಗೆ ಹುದ್ದೆ ಭರ್ತಿ ಮಾಡುವುದಾಗಿ ಭರವಸೆ ನೀಡುವಂತೆ ಆಗ್ರಹಿಸಿ ಗದ್ದಲವೆಬ್ಬಿಸಿದ ಕಾರಣ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ನೇಮಕ ಕುರಿತು ಸ್ಪಷ್ಟನೆ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್‌ ಗೆಹೊÉàಟ್‌, “ಪಂಚರಾಜ್ಯಗಳ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ, ನೇಮಕದಲ್ಲಿ ವಿಳಂಬವಾಯಿತು. ಈಗ ಪ್ರಕ್ರಿಯೆ ಆರಂಭವಾಗಿದೆ. ಎಸ್‌ಸಿ ಮತ್ತು ಸಫಾಯಿ ಕರ್ಮಚಾರಿ ಆಯೋಗದ ಮುಖ್ಯ ಸ್ಥರನ್ನು ನೇಮಕ ಮಾಡಲಾಗಿದೆ,’ ಎಂದರು. ಜತೆಗೆ, ಹಿಂದಿನ ಸರ್ಕಾರಗಳಿದ್ದ ಸಂದರ್ಭದಲ್ಲೂ ಈ ರೀತಿ ವಿಳಂಬವಾಗಿತ್ತು ಎಂದರು.

ಸದನದ ಬಾವಿಗಿಳಿದ ಸದಸ್ಯರು: ಸಚಿವರಿಗೆ ಮಾತನಾಡಲು ಅವಕಾಶ ನೀಡದ ಪ್ರತಿಪಕ್ಷ ಸದಸ್ಯರು, ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದರು. ಭಾರೀ ಗದ್ದಲ ಸೃಷ್ಟಿಯಾದ ಕಾರಣ, ಊಟದ ವಿರಾಮಕ್ಕೆ ಮುಂಚೆ ಮೂರು ಬಾರಿ ಕಲಾಪವನ್ನು ಮುಂದೂಡಬೇಕಾಯಿತು. ವಿರಾಮದ ಬಳಿಕ 2 ಬಾರಿ ಮುಂದೂಡಲ್ಪಟ್ಟು, ಕೊನೆಗೆ ಪರಿಸ್ಥಿತಿ ತಹಬದಿಗೆ ಬರದ ಹಿನ್ನೆಲೆಯಲ್ಲಿ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು. 

ವಶಕ್ಕೆ ಪಡೆದಿದ್ದು  600 ಕೋಟಿ
ನೋಟುಗಳ ಅಮಾನ್ಯದ ಬಳಿಕ ಆದಾಯ ತೆರಿಗೆ ಇಲಾಖೆಯು ಸುಮಾರು 600 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ, ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖೀತ ಉತ್ತರ ನೀಡುತ್ತಾ ಅವರು ಈ ಮಾಹಿತಿ ನೀಡಿದ್ದಾರೆ. 1,100 ಪ್ರಕರಣಗಳಿಗೆ ಸಂಬಂ ಧಿಸಿ ಐಟಿ ಇಲಾಖೆ ಶೋಧ ಕಾರ್ಯ ಮತ್ತು ದಾಳಿ ನಡೆಸಿತ್ತು. ಜತೆಗೆ, ಅನುಮಾನಾಸ್ಪ ದವಾಗಿ ಹೆಚ್ಚಿನ ಮೊತ್ತ ಠೇವಣಿಯಿಟ್ಟಂಥ 5,100 ಮಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದಿದ್ದಾರೆ ಜೇಟ್ಲಿ.

Advertisement

ನಕಲಿ ನೋಟು ಪತ್ತೆಯಾಗಿಲ್ಲ
ನೋಟುಗಳ ಅಮಾನ್ಯದ ಬಳಿಕ ಉತ್ತಮ ಗುಣಮಟ್ಟದ ಹೊಸ ನಕಲಿ ನೋಟುಗಳು ಪತ್ತೆಯಾಗಿಲ್ಲ. ಆದರೆ, ಕೆಲವು ಸ್ಕ್ಯಾನ್‌ ಮಾಡ ಲಾದ ಮತ್ತು ಫೋಟೋಕಾಪಿ ಮಾಡಲಾದ ನೋಟುಗಳನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಮತ್ತು ಎನ್‌ಐಎ ವಶಪಡಿಸಿ ಕೊಂಡಿವೆ. ನಕಲಿ ನೋಟುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ಘಟಕ ರಚನೆ ಸೇರಿ ಹಲವು ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿತ್ತ ಖಾತೆ ಸಹಾಯಕ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಅಪನಗ ದೀಕರಣ ಘೋಷಣೆ ಬಳಿಕ ಸರ್ಕಾರದ ಸೂಚನೆಯನ್ವ ಯ ಭಾರತೀಯ ವಾಯು ಪಡೆಯು ಒಟ್ಟು 604 ಟನ್‌ ಕರೆನ್ಸಿ ನೋಟುಗಳನ್ನು ದೇಶಾದ್ಯಂತ ಸಾಗಿಸಿದೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್‌ ಭಾಮ್ರೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next